IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಅತ್ಯುನ್ನತ 20 ಶಿಕ್ಷಣ ಸಂಸ್ಥೆಗಳ ಆಯ್ಕೆಗೆ ಸಮಿತಿ

ಭಾರತದಲ್ಲಿರುವ ರಾಷ್ಟ್ರೀಯ ಪ್ರಾಮುಖ್ಯದ 104 ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪೈಕಿ ಅತ್ಯುತ್ತಮ ಎನಿಸಿದ 20 ಸಂಸ್ಥೆಗಳನ್ನು ಆಯ್ಕೆ ಮಾಡುವ ಸಲುವಾಗಿ ಕೇಂದ್ರ  ಸರ್ಕಾರ ಉನ್ನತಾಧಿಕಾರದ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ.

ಸಮಿತಿಯ ಅಧ್ಯಕ್ಷರಾಗಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಕಾರ್ಯ ನಿರ್ವಹಿಸುವರು. ಉನ್ನತಾಧಿಕಾರ ಸಮಿತಿಯ ಇತರ ಸದಸ್ಯರೆಂದರೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾ ಸಂಸ್ಥೆಯ ನಿರ್ದೇಶಕ ಪ್ರೊಫೆಸರ್ ತರುಣ್ ಖನ್ನಾ, ಯುನಿವರ್ಸಿಟಿ ಆಫ್ ಹಾಸ್ಟನ್ ಅಧ್ಯಕ್ಷ ರೇಣು ಖತೋರ್ ಮತ್ತು ಲಕ್ನೋ ಐಐಎಂನ ಮಾಜಿ ನಿರ್ದೇಶಕ ಪ್ರೀತಮ್ ಸಿಂಗ್.

ರಾಷ್ಟ್ರೀಯ ಮಹತ್ವದ ಸಂಸ್ಥೆಗಳು

ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂಬ ವಿಶೇಷ ಯೋಜನೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಆರಂಬಿಸಿದೆ. ದೇಶದ 20 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಂದರೆ 10 ಖಾಸಗಿ ಹಾಗೂ 10 ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿಶ್ವದ 500 ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ತರುವುದು ಇದರ ಮುಖ್ಯ ಉದ್ದೇಶ. ಮುಂದಿನ 10 ವರ್ಷಗಳಲ್ಲಿ ಗುರಿಸಾಧನೆ ಮಾಡಲು ಉದ್ದೇಶಿಸಲಾಗಿದ್ದು, ಕ್ರಮೇಣ, ಶ್ರೇಷ್ಠ 100 ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ 20 ಸಂಸ್ಥೆಗಳು ಸ್ಥಾನ ಪಡೆಯುವಂತೆ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶ.

ಹೀಗೆ ಆಯ್ಕೆ ಮಾಡಲಾದ 20 ಸಂಸ್ಥೆಗಳಿಗೆ ಇತರ ಉನ್ನತ ಶಿಕ್ಷಣ ಸಂಸ್ಥೆಗಳಿಗಿಂತ ಹೆಚ್ಚಿನ ಸ್ವಾಯತ್ತತೆ ನೀಡಲು ಉದ್ದೇಶಿಸಲಾಗಿದೆ. ದೇಶೀಯ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ವಿಧಿಸುವ ಶುಲ್ಕವನ್ನು ತಾವೇ ನಿಗದಿಪಡಿಸಲು ಇವುಗಳಿಗೆ ಅಧಿಕಾರ ನೀಡಲಾಗುತ್ತದೆ. ಕೋರ್ಸ್ ಕಾಲಾವಧಿ ಮತ್ತು ಸಂರಚನೆಯಲ್ಲಿ ಕೂಡಾ ಸ್ಥಿತಿಸ್ಥಾಪಕತ್ವ ಒದಗಿಸಲಾಗುತ್ತದೆ.

ಸಂಸ್ಥೆಗಳು ವಿದೇಶಿ ಸಂಸ್ಥೆಗಳ ಜತೆ ಸಹಭಾಗಿತ್ವ ಮಾಡಿಕೊಳ್ಳಲು ಸರ್ಕಾರ ಅಥವಾ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಅನುಮೋದನೆಯನ್ನು ಪಡೆಯಬೇಕಿಲ್ಲ. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯದಿಂದ ಋಣಾತ್ಮಕ ದೇಶಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟ ದೇಶಗಳ ಜತೆ ಮಾತ್ರ ಇಂಥ ಸಹಭಾಗಿತ್ವ ಮಾಡಿಕೊಳ್ಳುವಂತಿಲ್ಲ.

ಹೀಗೆ 20 ಸಂಸ್ಥೆಗಳನ್ನು ಗುರುತಿಸಿದ ಬಳಿಕ, ರಾಷ್ಟ್ರೀಯ ಮಹತ್ವದ ಸಂಸ್ಥೆಗಳ ಗುರಿ ಮುಂದಿನ 10 ವರ್ಷಗಳ ಒಳಗಾಗಿ ಅಂತರರಾಷ್ಟ್ರೀಯವಾಗಿ ಖ್ಯಾತ 100 ಸಂಸ್ಥೆಗಳ ಒಳಗಾಗಿ ಸ್ಥಾನವನ್ನು ಪಡೆಯುವುದು. ಆಯ್ಕೆಯಾದ 10 ಸರ್ಕಾರಿ ಸಂಸ್ಥೆಗಳು ತಲಾ 1000 ಕೋಟಿ ರೂಪಾಯಿ ಅನುದಾನವನ್ನು ಮಾನವ ಸಂಪನ್ಮೂಲ ಸಚಿವಾಲಯದಿಂದ ಪಡೆದು ವಿಶ್ವದರ್ಜೆಯ ಸ್ಥಾನಮಾನ ಸಾಧಿಸಲು ಅನುಕೂಲ ಕಲ್ಪಿಸಲಾಗುತ್ತದೆ. ಆದರೆ ಖಾಸಗಿ ಸಂಸ್ಥೆಗಳಿಗೆ ಯಾವುದೇ ಹಣಕಾಸು ನೆರವು ಇರುವುದಿಲ್ಲ.

ಜಾಗತಿಕ ರ್ಯಾಂಕಿಂಗ್ನಲ್ಲಿ 500ನೇ ಸ್ಥಾನದ ಒಳಗಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಅಥವಾ ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟಿನಲ್ಲಿ 50ನೇ ರ್ಯಾಂಕಿಂಗ್ ಒಳಗಿನ ರ್ಯಾಂಕಿಂಗ್ ಹೊಂದಿರುವ ಸಂಸ್ಥೆಗಳು ಮಾತ್ರ ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂಬ ಹಣೆಪಟ್ಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಖಾಸಗಿ ವಲಯದ ಮಹತ್ವದ ಸಂಸ್ಥೆಗಳು ಗ್ರೀನ್ಫೀಲ್ಡ್ ವೆಂಚರ್ ರೂಪದಲ್ಲಿ ಬರಬಹುದಾಗಿದ್ದು, ಮುಂದಿನ 15 ವರ್ಷಗಳ ಅವಧಿಗೆ ದೃಷ್ಟಿಕೋನದ ವರದಿಯನ್ನು ಸಲ್ಲಿಸುವಮೂಲಕ ಅರ್ಜಿ ಸಲ್ಲಿಸಬಹುದು.

Comment