IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ರಾಷ್ಟ್ರೀಯ ನಗರ ಗೃಹನಿರ್ಮಾಣ ನಿಧಿ ಸೃಷ್ಟಿಗೆ ಸಂಪುಟ ಅಸ್ತು

ರಾಷ್ಟ್ರೀಯ ನಗರ ಗೃಹನಿರ್ಮಾಣ ನಿಧಿ ಸೃಷ್ಟಿಗೆ ಸಂಪುಟ ಅಸ್ತು

ದೇಶದಲ್ಲಿ ಸುಮಾರು 60 ಸಾವಿರ ಕೋಟಿ ರೂಪಾಯಿ ಮೊತ್ತದ ರಾಷ್ಟ್ರೀಯ ನಗರ ಗೃಹನಿರ್ಮಾಣ ನಿಧಿ ಸೃಷ್ಟಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ಗೆ ಹಣಕಾಸು ನೆರವು ನೀಡುವ ಸಲುವಾಗಿ ಬಳಕೆಯಾಗಲಿದೆ. ಯೋಜನೆಯ ಅನ್ವಯ 1.2 ಕೋಟಿ ಕೈಗೆಟುಕುವ ದರದ ಮನೆಗಳನ್ನು 2022 ಒಳಗಾಗಿ ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ.

ನ್ಯಾಷನಲ್ ಅರ್ಬನ್ ಹೌಸಿಂಗ್ ಫಂಡ್ (ಎನ್ಯುಎಚ್ಎಫ್)

ನ್ಯಾಷನಲ್ ಅರ್ಬನ್ ಹೌಸಿಂಗ್ ಫಂಡ್ (ಎನ್ಯುಎಚ್ಎಫ್), ಬಿಲ್ಡಿಂಗ್ ಮೆಟೀರಿಯಲ್ಸ್ ಅಂಡ್ ಟೆಕ್ನಾಲಜಿ ಪ್ರಮೋಷನ್ ಕೌನ್ಸಿಲ್ (ಬಿಎಂಟಿಪಿಸಿ) ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ನಿಧಿಗೆ ಸಂಪನ್ಮೂಲವನ್ನು ಬಜೆಟ್ ಮೂಲದಿಂದ ಹೊರತಾದ ಇತರ ಮೂಲಗಳಿಂದ ಕ್ರೋಢೀಕರಿಸಲಾಗುತ್ತದೆ ಹಾಗೂ ಹಾಲಿ ಇರುವ ಸರ್ಕಾರಿ ಸಂಸ್ಥೆಗಳಾದ ಹೌಸಿಂಗ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಹುಡ್ಕೊ)ನಂಥ ಸಂಥಗಳ ಮೂಲಕ ಇದು ಹಣ ಕ್ರೋಢೀಕರಿಸಲಿದೆ.

ನ್ಯಾಷನಲ್ ಅರ್ಬನ್ ಹೌಸಿಂಗ್ ಫಂಡ್ (ಎನ್ಯುಎಚ್ಎಫ್) ಮುಂದಿನ ನಾಲ್ಕು ವರ್ಷಗಲಲ್ಲಿ ಬಜೆಟ್ಗೆ ಕೊರತೆಯಾಗದಂತೆ ಯಾವುದೇ ಮೊತ್ತದ ಅಗತ್ಯ ಹಣವನ್ನು ಬಿಡುಗಡೆ ಮಾಡುವ ಸಲುವಾಗಿ ಕ್ರೋಢೀಕರಿಸುವ ಗುರಿ ಹಾಕಿಕೊಂಡಿದೆ. ಇದು ನಗರ ವಲಯ ಕಾರ್ಯಕ್ರಮಗಳಡಿ ಸುಲಲಿತ ಹಾಗೂ ಸುಸ್ಥಿರವಾದ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದೆ. ಮೂಲಕ ವಿವಿಧ ಇಲಾಖಗಳ ಮೂಲಕ ನಗರದಲ್ಲಿ ಗೃಹ ನಿರ್ಮಾಣ ಯೋಜನೆಗಳಿಗೆ ಹಣ ಸುಲಲಿತವಾಗಿ ಹರಿಯುವಂತ ಮಾಡಲಾಗುತ್ತದೆ. ಅಂದರೆ ಕೈಗೆಟುಕುವ ದರದ ಮನೆನಿರ್ಮಾಣವನ್ನು ಪಾಲುದಾರಿಕೆ ವ್ಯವಸ್ಥೆಯಲ್ಲಿ, ಫಲಾನುಭವಿ ಸಂಪರ್ಕಿತ ನಿರ್ಮಾಣ, ಇನ್ ಸಿಟು ಸ್ಲಮ್ ರಿ ಡೆವಲಪ್ಮೆಂಟ್ (ಐಎಸ್ಎಸ್ಆರ್) ಮತ್ತು ಸಾಲ ಸಂಬಂಧಿತ ಸಬ್ಸಿಡಿ ಯೋಜನೆಯ ಮೂಲಕ ಹಣವನ್ನು ನಗರ ಪ್ರದೇಶದ ಗೃಹ ನಿರ್ಮಾಣ ಯೋಜನಗಳಿಗೆ ಬಿಡುಗಡೆ ಮಾಡುತ್ತದೆ.

ಕಟ್ಟಡ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಉತ್ತೇಜನ ಮಂಡಳಿ (ಬಿಎಂಟಿಪಿಸಿ)

ಕಟ್ಟಡ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಉತ್ತೇಜನ ಮಂಡಳಿ (ಬಿಎಂಟಿಪಿಸಿ)ಯು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತದೆ. ಇದು ಸೊಸೈಟಿಗಳ ನೋಂದಣಿ ಕಾಯ್ದೆ- 1860 ಅನ್ವಯ ನೋಂದಣಿಯಾಗಿದೆ. ಇದರ ಪ್ರಾಥಮಿಕ ಕಾರ್ಯಸೂಚಿ ಎಂದರೆ, ಹೊಸ ನಿರ್ಮಾಣ ತಂತ್ರಜ್ಞಾನಗಳನ್ನು ಮುಖ್ಯವಾಹಿನಿಗೆ ತರುವುದು. ಇದು ಹೊಸ ಕಟ್ಟಡ ನಿರ್ಮಾಣ ತಂತ್ರಜ್ಞಾನಗಳಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ದೊಡ್ಡ ಪ್ರಮಾಣದ ಅನ್ವಯಿಕೆಯನ್ನು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿವೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ಯಡಿ 2022ರೊಳಗಾಗಿ ಎಲ್ಲ ಬಡವರಿಗೆ ಅದರಲ್ಲೂ ಪ್ರಮುಖವಾಗಿ ನಗರಗಳಲ್ಲಿ ವಾಸಿಸುವವರಿಗೆ ಪ್ರಯೋಜನ ತಲುಪಿಸುವುದು ಅಗತ್ಯ. ಯೋಜನೆಯಡಿ ಒಟ್ಟು ಎರಡು ಕೋಟಿ ಮನೆಗಳನ್ನು ದೇಶಾದ್ಯಂತ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ದೇಶದ 4041 ಶಾಸನಾತ್ಮಕ ಪಟ್ಟಣಗಳನ್ನು ತಲುಪಲಿದೆ. ಜತೆಗೆ ಮೊದಲ ಹಂತದಲ್ಲಿ 500 ಕ್ಲಾಸ್ ವನ್ ಸಿಟಿಗಳಿಗೆ ಇದು ತಲುಪಲಿದೆ.

ಯೋಜನೆಯ ಉದ್ದೇಶಿತ ಫಲಾನುಭವಿಗಳೆಂದರೆ, ಬಡತನ ರೇಖೆಗಿಂತ ಕೆಳಗಿರುವವರು, ಆರ್ಥಿಕವಾಗಿ ದುರ್ಬಲರಾಗಿರುವ ಜನಾಂಗ ಮತ್ತು ಕಡಿಮೆ ಆಧಾಯದ ಗುಂಪು (ಎಲ್ಐಜಿ) ಮತ್ತಿತರ ಸಂಘ ಸಂಸ್ಥೆಗಳನ್ನು ತಲುಪಲಿದೆ. ಇದು ಮಧ್ಯಮ ಪ್ರಮಾಣದ ಆದಾಯ ಗುಂಪನ್ನು ಕೂಡಾ ಗುರಿ ಮಾಡಿದೆ. ಸರ್ಕಾರ ಇಂಥ ಮನೆಗಳು ಭದ್ರವಾಗಿರಬೇಕು ಎಂಬ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳಿಗಾಗಿ 1 ಲಕ್ಷದಿಂದ 2.3 ಲಕ್ಷ ರೂಪಾಯಿವರೆಗೆ ನೆರವು ಒದಗಿಸುತ್ತದೆ.

Comment