IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಈಶಾನ್ಯ ಭಾರತಕ್ಕಾಗಿ ಕೇಂದ್ರದಿಂದ ನೀತಿ ವೇದಿಕೆ

ಈಶಾನ್ಯ ಭಾರತಕ್ಕಾಗಿ ಕೇಂದ್ರದಿಂದ ನೀತಿ ವೇದಿಕೆ

ಕೇಂದ್ರದ ಈಶಾನ್ಯ ಪ್ರದೇಶಗಳ ಅಬಿವೃದ್ಧಿಗಾಗಿ ಇರುವ ಸಚಿವಾಲವು ಈಶಾನ್ಯ ಭಾರತಕ್ಕೆ ನೀತಿ ವೇದಿಕೆ ಎಂಬ ವಿನೂತನ ವ್ಯವಸ್ಥೆಯನ್ನು ಆರಂಭಿಸಲು ನಿರ್ಧರಿಸಿದೆ. ಇದು ಈಶಾನ್ಯ ಭಾರತದಲ್ಲಿ ಅಭಿವೃದ್ಧಿ ಹಾಗೂ ಪ್ರಗತಿಗೆ ಎದುರಾಗುವ ಅಡೆತಡೆಗಳನ್ನು ಪಟ್ಟಿ ಮಾಡಿ ಈಶಾನ್ಯ ಪ್ರದೇಶ (ಎನ್ಇಆರ್) ಅಭಿವೃದ್ಧಿ ತ್ವರಿತವಾಗಿ ಹಾಗೂ ಸುಸ್ಥಿರವಾಗಿ ಆಗುವಂತೆ ಸೂಕ್ತ ಶಿಫಾರಸ್ಸುಗಳನ್ನು ಮಾಡಲಿದೆ. ವೇದಿಕೆಯ ಅಧ್ಯಕ್ಷರಾಗಿ ನೀತಿ ಆಯೋಗದ ಅಧ್ಯಕ್ಷರು ಕಾರ್ಯ ನಿರ್ವಹಿಸುತ್ತಾರೆ. ಜತೆಗೆ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯ ಖಾತೆಯ ಸಚಿವರು ಕೂಡಾ ಇದರ ಸಹ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ. ಇದು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯದಲ್ಲಿ ತನ್ನ ಕಾರ್ಯಾಲಯವನ್ನು ಹೊಂದಿರುತ್ತದೆ.

ಈಶಾನ್ಯಕ್ಕೆ ನೀತಿ ವೇದಿಕೆ

ವೇದಿಕೆಯ ಮುಖ್ಯವಾದ ಕಾರ್ಯಸೂಚಿ ಎಂದರೆ, ಈಶಾನ್ಯ ಪ್ರದೇಶದ  ಪ್ರಗತಿಯ ವೇಗವರ್ಧನೆಗೆ, ಎಲ್ಲರ ಪಾಲ್ಗೊಳ್ಳುವಿಕೆಯ ಅಭಿವೃದ್ಧಿಗೆ ವೇಗ ನೀಡಲು ಮತ್ತು ಇಡೀ ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿಗೆ ಅಡೆತಡೆಯಾಗುವ ಅಂಶಗಳನ್ನು ಪತ್ತೆ ಮಾಡಿ ತ್ವರಿತ ಅಭಿವೃದ್ಧಿಗೆ ನೆರವಾಗುವಂಥ ಶಿಫಾರಸ್ಸುಗಳನ್ನು ಮಾಡುವುದು. ಪಟ್ಟಿ ಮಾಡಲಾದ ಇತಿಮಿತಿಗಳನ್ನು ಅಥವಾ ಲೋಪಗಳನ್ನು ಸರಿಡಪಿಸುವ ಸಲುವಾಗಿ ಇದು ಸೂಕ್ತವಾದ ಹಸ್ತಕ್ಷೇಪವನ್ನು ಕೂಡಾ ಶಿಫಾರಸ್ಸು ಮಾಡಲಿದೆ. ಇದು ಈಶಾನ್ಯ ರಾಜ್ಯ ಪ್ರದೇಶಗಳ ಅಭಿವೃದ್ಧಿಯ ಪರಾಮರ್ಶೆಯನ್ನು ಕೂಡಾ ಮಾಡಲಿದೆ.

ಈಶಾನ್ಯ ಪ್ರದೇಶಕ್ಕಾಗಿ ಇರುವ ನೀತಿ ವೇದಿಕೆಯು ಮಹತ್ವದ ಅಂಶಗಳನ್ನು ಪರಿಶೀಲಿಸಿ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಲಹೆ ಹಾಗೂ ಶಿಫಾರಸ್ಸುಗಳನ್ನು ಮಾಡಲಿದೆ. ಇದರ ಜತೆಗೆ ವೇದಿಕೆಗೆ ಮಹತ್ವದ್ದು ಎನಿಸಿದ, ಆದರೆ ಕಾರ್ಯಸೂಚಿಯಲ್ಲಿ ಇಲ್ಲದ ಪ್ರಮುಖ ವಿಷಯಗಳ ಬಗ್ಗೆ ಕೂಡಾ ಅಧ್ಯಯನ ಕೈಗೊಳ್ಳುವ ಅಧಿಕಾರ ಇದಕ್ಕೆ ಇರುತ್ತದೆ. ಇದು ತನ್ನ ವಹಿವಾಟು, ಸಭೆ, ಕ್ಷೇತ್ರ ಸಂದರ್ಶನ ಅಥವಾ ಉಪ ಸಮಿತಿಗಳ ರಚನೆಯಂಥ ಪ್ರಕ್ರಿಯೆಗಳಿಗೆ ಸ್ವಂತ ವಿಧಿವಿಧಾನವನ್ನು ರೂಪಿಸುವ ಅಧಿಕಾರವನ್ನು ಹೊಂದಿರುತ್ತದೆ.

ವೇದಿಕೆಯ ಸದಸ್ಯರು

ಈಶಾನ್ಯ ಪ್ರದೇಶದ ನೀತಿ ವೇದಿಕೆಯಲ್ಲಿ ಪ್ರಮುಖವಾಗಿ ರಸ್ತೆ ಸಾಋಇಗೆ ಮತ್ತು ಹೆದ್ದಾರಿ ಸಚಿವಾಲಯ, ವಿದ್ಯುತ್, ರೈಲ್ವೆ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ & ಗಂಗಾ ಪುನರುಜ್ಜೀವನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಮಾನವ ಸಂಪನ್ಮೂಲ ಅಭಿವೃದ್ಧಿ, ರೊಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿಗಳು ಇದರ ಸದಸ್ಯರಾಗಿರುತ್ತಾರೆ. ಎಂಟು ಈಶಾನ್ಯ ರಾಜ್ಯಗಳಾಧ ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ತ್ರಿಪುರ, ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಕೂಡಾ ವೇದಿಕೆಯ ಸದಸ್ಯರಾಗಿರುತ್ತಾರೆ. ಶಿಲ್ಲಾಂಗ್ನಲ್ಲಿರುವ ಈಶಾನ್ಯ ಮಂಡಳಿಯ ಕಾರ್ಯದರ್ಶಿ ಇದರ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ, ವಿವಿಧ ಕ್ಷೇತ್ರಗಳ ತಜ್ಞರು ಕೂಡಾ ವೇದಿಕೆಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Comment