IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸಂಸತ್ ಭವನದಲ್ಲಿ ಶಿಶುಗೃಹ ಸೌಲಭ್ಯ

ಸಂಸತ್ ಭವನದಲ್ಲಿ ಶಿಶುಗೃಹ ಸೌಲಭ್ಯ

ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಮತ್ತು ಅವರಿಗೆ ಕೆಲಸದ ಪರಿಸರವನ್ನು ಉತ್ತಮ ಹಾಗೂ ನಿರಾಳವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಸಂಸತ್ ಭವನದಲ್ಲಿ ಶಿಶುಗೃಹ ಸೌಲಭ್ಯವನ್ನು ಆರಂಭಿಸಲು ನಿರ್ಧರಿಸಿದೆ. ಹೆರಿಗೆ ಸೌಲಭ್ಯ (ತಿದ್ದುಪಡಿ) ಕಾಯ್ದೆ- 2017ಕ್ಕೆ ಅನುಸಾರವಾಗಿ ಸೌಲಭ್ಯವನ್ನು ಆರಂಭಿಸಲಾಗುತ್ತಿದೆ.

ಇದು 1500 ಚದರ ಅಡಿ ವಿಸ್ತೀರ್ಣದ ಕೇಂದ್ರವಾಗಿದ್ದು, ವೃತ್ತಿಪರರು ಇದನ್ನು ನಿರ್ವಹಿಸುತ್ತಾರೆ. ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುವುದು ಇದರ ಉದ್ದೆಶ. ಶಿಶುಗೃಹದಲ್ಲಿ ಮಕ್ಕಳ ಪಾಲನೆಯ ಜತೆಗೆ, ತಾಯಂದಿರು ಮೊಲೆಹಾಲುಣಿಸಲು ನೆರವಾಘುವಂತೆ ಪ್ರತ್ಯೇಕ ಕೊಠಡಿಯನ್ನೂ ನಿರ್ಮಿಸಲಾಗುತ್ತದೆ. ಉದ್ಯೋಗಸ್ಥ ತಾಯಂದಿರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಿ ಉದ್ದಿಮೆಗಳು ಹಾಗೂ ಖಾಸಗಿ ವಲಯದ ಉದ್ಯಮಗಳು ಇಂಥ ಶಿಶುಗೃಹಗಳನ್ನು ಕೆಲಸದ ಸ್ಥಳದಲ್ಲಿ ನಿರ್ಮಿಸಲು ಕ್ರಮ ಉತ್ತೇಜನಕಾರಿಗಾಲಿದೆ ಎಂದು ಹೇಳಲಾಗುತ್ತಿದೆ.

ಹಿನ್ನೆಲೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಮನವಿ ಸಲ್ಲಿಸಿ, ಸಂಸತ್ ಆವರಣದಲ್ಲಿ ಶಿಶುಗೃಹ ಸೌಲಭ್ಯ ಆರಂಭಿಸುವಂತೆ ಕೋರಿತ್ತು. ಪಾರ್ಲಿಮೆಂಟ್ ಭವನದಲ್ಲಿ ಕಾರ್ಯನಿರ್ವಹಿಸುವ ಮೂರನೇ ಒಂದರಷ್ಟು ಅಧಿಕಾರಿಗಳು ಮಹಿಳೆಯರಾಗಿದ್ದು, ಹಿನ್ನೆಲೆಯಲ್ಲಿ ಶಿಶುಗೃಹವನ್ನು ಆರಂಭಿಸುವುದು ಅತ್ಯಂತ ಪ್ರಮುಖ ಮಹಿಳಾಪರ ಯೋಜನೆಯಾಗಿದೆ. ಇದರ ಜತೆಗೆ ಹೆರಿಗೆ ಪ್ರಯೋಜನ ತಿದ್ದುಪಡಿ ಮಸೂದೆ ಬಗೆಗಿನ ಚರ್ಚೆ ವೇಳೆ ಉಭಯ ಸದನಗಳಲ್ಲಿ ಸಂಸದರು ಕೂಡಾ ಅಂಶವನ್ನು ಪ್ರಸ್ತಾವಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.

ಹೆರಿಗೆ ಪ್ರಯೋಜನ (ತಿದ್ದುಪಡಿ) ಕಾಯ್ದೆ- 2017

ಹೆರಿಗೆ ಪ್ರಯೋಜನ (ತಿದ್ದುಪಡಿ) ಕಾಯ್ದೆ- 2017 ಅನ್ವಯ 50ಕ್ಕಿಂತ ಹೆಚ್ಚು ಮಂದಿ ಉದ್ಯೋಗಿಗಳಿರುವ ಎಲ್ಲ ಕೆಲಸದ ಸ್ಥಳಗಳಲ್ಲಿ ಶಿಶುಗೃಹ ಸೌಲಭ್ಯವನ್ನು ಆರಂಭಿಸುವುದು ಕಡ್ಡಾಯ. ಕಾಯ್ದೆಯ ಅನ್ವಯ, ಆರೋಗ್ಯಕರ ಕೆಲಸದ ವಾತಾವರಣವನ್ನು ನಿರ್ಮಿಸುವುದು ಮತ್ತು ಶಿಶುಗೃಹ ಸೌಲಭ್ಯವನ್ನು ಕಲ್ಪಿಸಬೇಕು. ಉದ್ಯೋಗಿಗಳು ಶಿಶುಗೃಹ ನೋಂದಣಿಯ ಮನವಿಯನ್ನು ಸ್ವೀಕರಿಸುವ ವೇಳೆ ನಿಗದಿತ ಕಾರ್ಯಾಚರಣೆ ವಿಧಿವಿಧಾನವನ್ನು ಅನುಸರಿಸುವುದು ಕಡ್ಡಾಯ.

Comment