IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮಿಜೋರಾಂನಲ್ಲಿ ಇಸ್ರೇಲ್ ಸಹಭಾಗಿತ್ವದ ಪ್ರಾದೇಶಿಕ ಕೃಷಿ ಕೇಂದ್ರ

ಮಿಜೋರಾಂನಲ್ಲಿ ಇಸ್ರೇಲ್ ಸಹಭಾಗಿತ್ವದ ಪ್ರಾದೇಶಿಕ ಕೃಷಿ ಕೇಂದ್ರ

ಈಶಾನ್ಯ ಭಾರತದ ಮೊಟ್ಟಮೊದಲ ಕೃಷಿ ಕೇಂದ್ರವನ್ನು ಮಿಜೋರಾಂನಲ್ಲಿ ಇಸ್ರೇಲ್ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿದೆ. ವಿನೂತನ ಕೃಷಿ ಕೇಂದ್ರ 2018 ಮಾರ್ಚ್ ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ಇದು ಇಡೀ ಈಶಾನ್ಯ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಮೊಟ್ಟಮೊದಲ ಕೃಷಿ ಖೇಏಂದ್ರವಾಗಿದ್ದು, ಇಸ್ರೇಲ್ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ದೇಶದ ಮೊದಲ ಕೃಷಿ ಕೇಂದ್ರ ಎಂಬ ಹೆಗ್ಗಳಿಕೆಗೆ ಮಿಜೋರಾಂ ಕೃಷಿ ಕೇಂದ್ರ ಪಾತ್ರವಾಗಲಿದೆ.

ಇಸ್ರೇಲ್ ಬೆಂಬಲದೊಂದಿಗೆ ಭಾರತದಲ್ಲಿ ಇಂಥ 22 ಕೃಷಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇವುಗಳನ್ನು ಹರ್ಯಾಣ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಪಂಜಾಬ್ನಲ್ಲಿ ಸ್ಥಾಪಿಸಲಾಗುತ್ತದೆ. ಇಂಥ ಮೊಟ್ಟಮೊದಲ ಕೇಂದ್ರವನ್ನು 2008 ಮೇ ತಿಂಗಳಲ್ಲಿ ಹರ್ಯಾಣದಲ್ಲಿ ಆರಂಭಿಸಲಾಗಿತ್ತು.

ಕೃಷಿ ಕೇಂದ್ರ

ಕೃಷಿ ಕೇಂದ್ರವು ವಿಶೇಷವಾಗಿ ಸಿಟ್ರಸ್ ಹಣ್ಣನ್ನು ಸಂಸ್ಕರಿಸುವ ವಿಶೇಷ ಉದ್ದೇಶದ ಕೇಂದ್ರವಾಗಿರುತ್ತದೆ. ಇದು ಇಡೀ ಈಶಾನ್ಯ ಭಾರತದ ಅಗತ್ಯತೆಯನ್ನು ಪೂರೈಸಲಿದೆ. ಇದನ್ನು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಇಸ್ರೇಲ್ ಸರ್ಕಾರ ಮತ್ತು ಮಿಜೋರಾಂ ಸರ್ಕಾರ ಹೀಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು ಆರಂಭಿಸಲಾಗುತ್ತದೆ. ಇಸ್ರೇಲ್ ಸರ್ಕಾರ ಕೃಷಿ ಕೇಂದ್ರದ ಕಾರ್ಯನಿರ್ವಹಣೆಗೆ ಅಗತ್ಯವಾದ ನೈಪುಣ್ಯ, ಜ್ಞಾನ ಹಾಗೂ ವೃತ್ತಿಪರ ಬೆಂಬಲವನ್ನು ನೀಡಲಿದೆ.

ಮಹತ್ವ

ಇಸ್ರೇಲ್ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಲಿರುವ ಕೃಷಿ ಕೇಂದ್ರ ಇಡೀ ಈಶಾನ್ಯ ಭಾರತದ ರೈತರಿಗೆ ಪ್ರಯೋಜನವಾಗಲಿದ್ದು, ಇತರ ಸುತ್ತಮುತ್ತಲ ಪ್ರದೇಶಗಳ ರೈತರಿಗೂ ಇದು ಉತ್ತೇಜನ ನೀಡಲಿದೆ. ಇದು ಭಾರತ ಉಪಖಂಡದ ಇತರ ದೇಶಗಳಿಗೆ ಮಾದರಿ ಕಲಿಕಾ ಕೇಂದ್ರವಾಗಿ ಕೂಡಾ ಕಾರ್ಯ ನಿರ್ವಹಿಸಲಿದೆ. ಇದು ಅನುಶೋಧನೆ ಅದರಲ್ಲೂ ಮುಖ್ಯವಾಗಿ ಈಶಾನ್ಯ ಭಾರತದ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಉತ್ತೇಜನ ನೀಡುವ ಮೂಲಕ ಭಾಗದ ಜನತೆಗೆ ಸಹಕಾರಿಯಾಗಲಿದೆ.

Comment