IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸೌರ, ಪವನ ವಿದ್ಯುತ್ ಸರಬರಾಜು ಶುಲ್ಕ ವಿನಾಯ್ತಿ ಮುಂದುವರಿಕೆ

ಸೌರ, ಪವನ ವಿದ್ಯುತ್ ಸರಬರಾಜು ಶುಲ್ಕ ವಿನಾಯ್ತಿ ಮುಂದುವರಿಕೆ

ಕೇಂದ್ರ ವಿದ್ಯುತ್ ಸಚಿವಾಲಯವು ದೇಶದಲ್ಲಿ ಸೌರ, ಪವನ ವಿದ್ಯುತ್ ಸರಬರಾಜು ಶುಲ್ಕ ವಿನಾಯ್ತಿಯನ್ನು 2022 ಮಾರ್ಚ್ 31ರವರೆಗೆ ಅಳವಡಿಸುವ ಎಲ್ಲ ಘಟಕಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಅಂತರರಾಜ್ಯಗಳ ನಡುವೆ ಇದನ್ನು ವಿತರಿಸುವ ಶುಲ್ಕ ಹಾಗೂ ವರ್ಗಾವಣೆ ನಷ್ಟಕ್ಕೂ ವಿನಾಯ್ತಿ ನೀಡಲಾಗಿದೆ. ದೇಶದಲ್ಲಿ ಸ್ವಚ್ಛ ಇಂಧನ ಮೂಲಗಳನ್ನು ಉತ್ತೇಜಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖ ಅಂಶಗಳು

ಸೌರ ಹಾಗೂ ಪವನ ವಿದ್ಯುತ್ ಘಟಕಕ್ಕೆ ನೀಡುವ ವಿನಾಯ್ತಿಗಳು ಘಟಕ ಸ್ಥಾಪನೆಯ ದಿನದಿಂದ 25 ವರ್ಷಗಳ ವರೆಗೆ ಇರುತ್ತವೆ. ಇದರ ಜತೆಗೆ ವಿದ್ಯುತ್ ಖರೀದಿ ಒಪ್ಪಂದವನ್ನು ಆಯಾ ಪ್ರದೇಶದ ವಿದ್ಯುತ್ ಸರಬರಾಜು ಕಂಪನಿಗಳು ಮಾಡಿಕೊಳ್ಳುತ್ತವೆ. ಎಲ್ಲ ಡಿಸ್ಕಾಂಗಳು ಇಂಥ ಅಸಂಪ್ರದಾಯಿಕ ಮೂಲದಿಂದ ಉತ್ಪಾದಿಸಿದ ವಿದ್ಯುತ್ ಖರೀದಿ ಮಾಡುವುದು ಕಡ್ಡಾಯವಾಗಿರುತ್ತದೆ. ವಿನಾಯ್ತಿ ಸೌಲಭ್ಯವು ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಪಡೆದ ಯೋಜನಗಳಿಗಷ್ಟೇ ಅನ್ವಯಿಸುತ್ತವೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ನಡೆಯುವ ಬಿಡ್ಡಿಂಗ್ಗೆ ಇದು ಅನ್ವಯವಾಗುತ್ತದೆ. ಆದರೆ ಹೊಸ ನಿಯಮಾವಳಿಯ ಅನುಗುಣವಾಗಿ ಯಾವುದೇ ವಿದ್ಯುತ್ ಖರೀದಿ ಸಂಸ್ಥೆಗಳು ಕೂಡಾ ಸೌಲಭ್ಯವನ್ನು ಪಡೆಯಬಹುದಾಗಿದೆ.

ಮಹತ್ವ

ಭಾರತವು 175 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್ ಉತ್ಪಾದಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹಾಕಿಕೋಂಡಿರುವ ಹಿನ್ನೆಲೆಯಲ್ಲಿ ನೂತನ ಆದೇಶ ಹೆಚ್ಚಿನ ಮಹತ್ವ ಪಡೆದಿದೆ. ಮುಂದಿನ ಐದು ವರ್ಷಗಳಲ್ಲಿ 100 ಗಿಗಾವ್ಯಾಟ್ ಸೌರ ವಿದ್ಯುತ್, 60 ಗಿಗಾವ್ಯಾಟ್ ಪವನ ವಿದ್ಯುತ್, 10 ಗಿಗಾವ್ಯಾಟ್ ಜೈವಿಕ ತ್ಯಾಜ್ಯ ಮತ್ತು 5 ಗಿಗಾವ್ಯಾಟ್ ಕಿರು ಜಲವಿದ್ಯುತ್ ಯೋಜನೆಯಿಂದ ವಿದ್ಯುತ್ ಉತ್ಪಾದಿಸುವ ಗುರಿ ಹಾಕಿಕೊಳ್ಳಲಾಗಿದೆ. ಪ್ರಸ್ತುತ ಭಾರತದಲ್ಲಿ 62.84 ಗಿಗಾವ್ಯಾಟ್ ವಿದ್ಯುತ್ತನ್ನು ನವೀಕರಿಸಬಹುದಾದ ಇಂಧನ ಮೂಲದಿಂದ ಉತ್ಪಾದಿಸಲಾಗುತ್ತದೆ. ಇದು 25 ಮೆಗಾವ್ಯಾಟ್ಗಿಂತ ಮೇಲ್ಪಟ್ಟ ಜಲವಿದ್ಯುತ್ ಯೋಜನೆಗಳಿಂದ ಹೊರತಾಗಿದೆ. ಕೇಂದ್ರ ಸರ್ಕಾರವು 40 ಗಿಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಸಾಮಥ್ರ್ಯದ ವಿದ್ಯುತ್ ಘಟಕಗಳ ಹರಾಜಿಗೆ ಕೂಡಾ ನಿರ್ಧರಿಸಿದ್ದು, ಇದರ ಜತೆಗೆ 20 ಗಿಗಾವ್ಯಾಟ್ ಗಾಳಿ ವಿದ್ಯುತ್ ಘಟಕಗಳ ಹರಾಜನ್ನು 2018-19ರಲ್ಲಿ ಮತ್ತು 2019-20ರಲ್ಲಿ ನಡೆಸಲು ಕೂಡಾ ನಿರ್ಧರಿಸಿದೆ.

ಹಿನ್ನೆಲೆ

ಇದಕ್ಕೂ ಮುನ್ನ ವಿನಾಯ್ತಿ ಸೌಲಭ್ಯವು 2019 ಡಿಸೆಂಬರ್ 31 ಮತ್ತು 2019 ಮಾರ್ಚ್ 31ರೊಳಗೆ ಸ್ಥಾಪಿಸಿದ ಸೌರವಿದ್ಯುತ್ ಘಟಕಗಳು ಮತ್ತು ಪವನ ವಿದ್ಯುತ್ ಘಟಕಗಳಿಗೆ ಮಾತ್ರ ಲಭ್ಯವಿತ್ತು. ಸೌಲಭ್ಯ ವಿದ್ಯುತ್ ಘಟಕ ಕಾರ್ಯಾರಂಭ ಮಾಡಿದ 25 ವರ್ಷಗಳ ಅವಧಿಗೆ ಲಭ್ಯವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಿಯಮಾವಳಿಯಡಿ ಉತ್ತೇಜಕವು ಡಿಸ್ಕಾಮ್ಗಳ ಹೊರತಾದ ಇತರ ಘಟಕಗಳಿಗೆ ಲಭ್ಯವಿರಲಿಲ್ಲ. ಹಿನ್ನೆಲೆಯಲ್ಲಿ  ಸ್ವಚ್ಛ ಇಂಧನ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ವರ್ಗಾವಣೆ ಶುಲ್ಕ ವಿನಾಯ್ತಿಯ ಪ್ರಯೋಜನ ಸಿಗುತ್ತಿರಲಿಲ್ಲ.

Comment