IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಅಗ್ನಿ-2 ಸಿಡಿತಲೆ ಕ್ಷಿಪಣಿ ಪರೀಕ್ಷೆ ಯಶಸ್ವಿ

ಅಗ್ನಿ-2 ಸಿಡಿತಲೆ ಕ್ಷಿಪಣಿ ಪರೀಕ್ಷೆ ಯಶಸ್ವಿ

ದೇಶೀಯವಾಗಿ ಅಭಿವೃದ್ಧಿಪಡಿಸಿದ ಧೀರ್ಘದೂರ ಸಾಮಥ್ರ್ಯದ ಮೇಲ್ಮೈನಿಂದ ಮೇಲ್ಮೈ ಮೇಲೆ ದಾಳಿ ಮಾಡುವ ಅಗ್ನಿ-2 ಸಿಡಿತಲೆ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಒಡಿಶಾದ ಅಬ್ದುಲ್ ಕಲಾಂ ವ್ಹೀಲರ್ ದ್ವೀಪದಲ್ಲಿ ಇದರ ಪರೀಕ್ಷೆ ನಡೆಸಲಾಯಿತು.

ಭಾರತೀಯ ಸೇನೆಯ ಆಯಕಟ್ಟಿನ ಪಡೆ ಕಮಾಂಡ್ ಪರೀಕ್ಷೆ ನಡೆಸಿದೆ. ಇದು ಕಾರ್ಯಾಚರಣೆಗೆ ಎಷ್ಟು ಸನ್ನದ್ಧವಾಗಿದೆ ಎಂದು ಅರಿಯುವ ನಿಟ್ಟಿನಲ್ಲಿ ನಡೆಸಿದ ಪರೀಕ್ಷಾರ್ಥ ಪ್ರಯೋಗವಾಗಿದೆ. ಕ್ಷಿಪಣಿಯ ಕೊನೆಯ ಪರೀಕ್ಷೆಯನ್ನು 2016 ಡಿಸೆಂಬರ್ನಲ್ಲಿ ನಡೆಸಲಾಗಿತ್ತು.

ಅಗ್ನಿ-2 ಸಿಡಿತಲೆ ಕ್ಷಿಪಣಿ

ಅಗ್ನಿ-2 ಸಿಡಿತಲೆ ಕ್ಷಿಪಣಿಯು ಎರಡು ಹಂತದ ಘನ ಪ್ರೊಪಲೆಂಟ್ ಅಣ್ವಸ್ತ್ರ ಸಾಮಥ್ರ್ಯದ ಸಿಡಿತಲೆ ಕ್ಷಿಪಣಿಯಾಗಿದೆ. ಇದನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ದೇಶೀಯವಾಗಿ ಅಭಿವೃದ್ಧಿಪಡಿಸಿದೆ.

ಇದು ಸುಮಾರು 21 ಮೀಟರ್ ಉದ್ದವುದ್ದು, ಇದರ ಉಡಾವಣೆಯ ತೂಕ 17 ಟನ್ಗಳಾಗಿವೆ. ಇದು 2000 ಕಿಲೋಮೀಟರ್ವರೆಗಿನ ದೂರದ ವಸ್ತುವಿನ ಮೇಲೆ ದಾಳಿ ಮಾಡುವ ಸಾಮಥ್ರ್ಯ ಹೊಂದಿದೆ. ಇದನ್ನು ಪೇಲೋಡ್ ಕಡಿಮೆ ಮಾಡಿ 3000 ಕಿಲೋಮೀಟರ್ ವರೆಗೂ ವಿಸ್ತರಿಸಬಹುದಾಗಿದೆ. ಇದು ಒಂದು ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಒಯ್ಯಲು ಶಕ್ತವಾಗಿದೆ.

ಇತರ ಅಗ್ನಿ ಕ್ಷಿಪಣಿಗಳಿಗಿಂತ ಭಿನ್ನವಾಗಿ ಅಗ್ನಿ-2, ಅತ್ಯಾಧುನಿಕ ಕ್ಷಿಪಣಿಯಾಗಿದ್ದು, ಹೊಸ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಪಥದರ್ಶಕ ಮತ್ತು ಮಾರ್ಗದರ್ಶಕ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಸಿಡಿತಲೆ ಹಾಗೂ ಎಂಜಿನ್ ಕೂಡಾ ವಿಶಿಷ್ಟವಾಗಿದೆ. ಇದು ಫೈರ್ ಅಂಡ್ ಫರ್ಗೆಟ್ ಕ್ಷಿಪಣಿಯಾಗಿದ್ದು, ಒಂದು ಬಾರಿ ಇದನ್ನು ಸಿಡಿಸಿದರೆ ನಂತರ ಸ್ಥಗಿತಗೊಳಿಸುವಂತಿಲ್ಲ. ಕೇವಲ ಇಂಟರ್ಸೆಪ್ಟರ್ ಮಾತ್ರವೇ ಇದನ್ನು ತಡೆಯಬಲ್ಲದು. ಇಂಥ ಇಂಟರ್ಸೆಪ್ಟರ್ಗಳು ಅಮೆರಿಕ, ರಷ್ಯಾ ಮತ್ತು ಇಸ್ರೇಲ್ ಬಳಿ ಮಾತ್ರ ಇವೆ ಎನ್ನುವುದು ಭಾರತಕ್ಕೆ ಧನಾತ್ಮಕ ಅಂಶ.

ಇದು ಬಹು ಸ್ವತಂತ್ರ ಗುರಿಯ ಮರುಪ್ರವೇಶ ವಾಹನಗಳ ಪೇಲೋಡ್ ಒಳಗೊಂಡಿದೆ. ಸಿಂಗಲ್ ಎಂಐಆರ್ವಿ ಹೊಂದಿದ ಕ್ಷಿಪಣಿ ಇದಾಗಿದ್ದು, ಹಲವು ಸಿಡಿತಲೆಗಳನ್ನು ವಿವಿಧ ಗುರಿಗಳತ್ತ ಒಯ್ಯಬಲ್ಲದು. ಇದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ರಿಂಗ್ ಲೇಸರ್ ಗೈರೋಸ್ಕೋಪ್ ಹಾಗೂ ಆಕ್ಸಿಲೋರೊಮೀಟರ್ಗಳನ್ನು ಪಥದರ್ಶಕ ಮತ್ತು ಮಾರ್ಗದರ್ಶನ ವ್ಯವಸ್ಥೆಗೆ ಹೊಂದಿರುತ್ತದೆ.

ಇನ್ನೂ ಕೆಲ ಪರೀಕ್ಷೆಗಳ ಬಳಿಕ ಇದನ್ನು ಭಾರತೀಯ ಸೇನೆಯ ತ್ರಿಸೇವೆಯ ಆಯಕಟ್ಟಿನ ಪಡೆಗಳ ಕಮಾಂಡ್ನಲ್ಲಿ ನಿಯೋಜಿಸಲಾಗುತ್ತದೆ. ಇದು ಭಾರತದ ಅಣ್ವಸ್ತ್ರ ಸಂಗ್ರಹಾಗಾರವನ್ನು ನಿರ್ವಹಿಸುತ್ತದೆ. ಇದನ್ನು ಸೇವೆಗೆ ನಿಯೋಜಿಸಿದ ಬಳಿಕ ಭಾರತವು ಸೂಪರ್ ಎಕ್ಸ್ಕ್ಲೂಸಿವ್ ಕ್ಲಬ್ಗೆ ಸೇರ್ಪಡೆಯಾಗಲಿದೆ. 5000 ದಿಂದ 5500 ಕಿಲೋಮೀಟರ್ ದೂರ ಸಾಮಥ್ರ್ಯದ ಕ್ಷಿಪಣಿ ಹೊಂದಿರುವ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ಗಳಿಗೆ ಭಾರತ ಕೂಡಾ ಸಮಾನವಾಗಲಿದೆ.

ಭಾರತ ಪ್ರಸ್ತುತ ಶಸ್ತ್ರಾಗಾರದಲ್ಲಿ ಅಗ್ನಿ ಸರಣಿಯ ಅಗ್ನಿ-1 (700 ಕಿಲೋಮೀಟರ್ ಸಾಮಥ್ರ್ಯ), ಅಗ್ನಿ-2 (2000 ಕಿಲೋಮೀಟರ್ ಸಾಮಥ್ರ್ಯ), ಅಗ್ನಿ-3 ಹಾಗೂ ಅಗ್ನಿ -4 (2500 ಕಿಲೋಮೀಟರ್ ಸಾಮಥ್ರ್ಯ ಹಾಗೂ 3500 ಕಿಲೋಮೀಟರ್ ಸಾಮಥ್ರ್ಯ) ಕ್ಷಿಪಣಿಗಳನ್ನು ಹೊಂದಿದೆ.

Comment