IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸಿಲ್ಕ್ಯಾರಾ ಕಮಾನು- ಬಾರಕೋಟ್ ಸುರಂಗಕ್ಕೆ ಸಿಸಿಇಎ ಒಪ್ಪಿಗೆ

ಸಿಲ್ಕ್ಯಾರಾ ಕಮಾನು- ಬಾರಕೋಟ್ ಸುರಂಗಕ್ಕೆ ಸಿಸಿಇಎ ಒಪ್ಪಿಗೆ

ಉತ್ತಖಾಂಡದ ಸಿಕ್ಯಾರಾ ತಿರುವು- ಬಾರಕೋಟ್ ಸುರಂಗಮಾರ್ಗ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಅನುಮೋದನೆ ನೀಡಿದೆ. ಯೋಜನೆಯಡಿ 4.531 ಕಿಲೋಮೀಟರ್ ಉದ್ದದ ಎರಡು ಲೇನ್ಗಳ ದ್ವಿಮುಖ ಸಂಚಾರಕ್ಕೆ ಅನುಕೂಲವಾಗುವ ಸಿಲ್ಕ್ಯಾರಾ ಕಮಾನು ಮತ್ತು ಬಾರಕೋಟ್ ನಡುವೆ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತದೆ. ಇದು ಮಹತ್ವಾಕಾಂಕ್ಷಿ ಚಾರ್ಧಾಮ್ ಮಹಾಮಾರ್ಗ ಪರಿಯೋಜನೆಯ ಭಾಗವಾಗಿದೆ. ಯೋಜನೆಯು ರಾಷ್ಟ್ರೀಯ ಹೆದ್ದಾರಿ 134ರಡಿ (ಹಳೆ ಸಂಖ್ಯೆ ರಾ.ಹೆ-94) ಬರುತ್ತದೆ. ಇದನ್ನು ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ (ಇಪಿಸಿ) ಮಾದರಿಯಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರದ ಹೆದ್ದಾರಿ ಇಲಾಖೆ ನಿರ್ಧರಿಸಿದೆ.

ಪ್ರಮುಖ ಅಂಶಗಳು

4.531 ಕಿಲೋಮೀಟರ್ ಉದ್ದದ ದ್ವಿಮುಖ ಸಂಚಾರದ ಸುರಂಗ ಮಾರ್ಗವು ಎಸ್ಕೇಪ್ ಪ್ಯಾಸೇಜ್ಗಳನ್ನು ಹೊಂದಿದ್ದು, ಧರಾಸು- ಯಮುನೋತ್ರಿ ವಿಭಾಗಕ್ಕೆ ಚೈನಾಜ್ 25.400 ಕಿಲೋಮೀಟರ್ ಹಾಗೂ ಚೈನಾಗ್ 51 ಕಿಲೋಮೀಟರ್ ನಡುವೆ ಹೊರಹೋಗುವ ವ್ಯವಸ್ಥೆಯನ್ನೂ ಹೊಂದಿರುತ್ತದೆ. ಸುರಂಗಮಾರ್ಗವನ್ನು ನಾಲ್ಕು ವರ್ಷಗಳ ಒಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 1383.78 ಕಿಲೋಮೀಟರ್ ಆಗಿದ್ದು, ಇದರಲ್ಲಿ ಭೂಸ್ವಾಧೀನ ಮತ್ತು ಪುನರ್ವಸತಿ, ನಿರ್ಮಾಣಪೂರ್ವ ಚಟುವಟಿಕೆಗಳು ಹಾಗೂ ನಾಲ್ಕು ವರ್ಷಗಳ ಕಾಲ ಮಹತ್ವದ ಸುರಂಗದ ನಿರ್ವಹಣೆ ಹಾಗೂ ಕಾರ್ಯಾಚರಣೆ ವೆಚ್ಚ ಕೂಡಾ ಸೇರುತ್ತದೆ.

ಯೋಜನೆಯನ್ನು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಷ್ಠಾನಗೊಳಿಸುತ್ತದೆ. ರಾಷ್ಟ್ರೀಯ ಹೆದ್ದಾರಿಗಳು & ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎಂಓಆರ್ಟಿಎ) ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳು & ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, 2014ರಲ್ಲಿ ಇದನ್ನು ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಹೆದ್ದಾರಿಗಳ ಅಭಿವೃದ್ಧಿಗಾಗಿಯೇ ರಚಿಸಲಾಗಿದೆ.

ಮಹತ್ವ

ಸುರಂಗಮಾರ್ಗದ ನಿರ್ಮಾಣದಿಂದ ಚಾರ್ಧಾಮಗಳಲ್ಲಿ ಒಂದಾದ ಯಮುನೋತ್ರಿಗೆ ಸರ್ವಋತು ಸಂಪರ್ಕವನ್ನು ಒದಗಿಸಲು ಸಾಧ್ಯವಾಗಲಿದೆ. ಇದು ಪ್ರಾದೇಶಿಕ ಸಾಮಾಜಿಕ- ಆರ್ಥಿಕ ಅಭಿವೃದ್ದಿಯನ್ನು ಉತ್ತೇಜಿಸಲಿದ್ದು, ಪ್ರದೇಶದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಗಣನೀಯವಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ಇದು ಧರಾಸು ಮತ್ತು ಯಮುನೋತ್ರಿ ನಡುವಿನ ಪ್ರಯಾಣದ ಅಂತರವನ್ನು ಸುಮಾರು 20 ಕಿಲೋಮೀಟರ್ಗಳಷ್ಟು ಕಡಿಮೆ ಮಾಡಲಿದ್ದು, ಯಮುನೋತ್ರಿ ಪ್ರಯಾಣದ ಅವಧಿ ಸುಮಾರು ಒಂದು ಗಂಟೆಯಷ್ಟು ಕಡಿತವಾಗಲಿದೆ. ಮೂಲ ಯೋಜನೆಯ ಅನ್ವಯ ಹೆದ್ದಾರಿಗಳನ್ನು ನಿರ್ಮಿಸುವುದಾದರೆ ಬಲಿಯಾಗಬಹುದಾಗಿದ್ದ ದೊಡ್ಡ ಸಂಖ್ಯೆಯ ಮರಗಳನ್ನು ರಕ್ಷಿಸುವಲ್ಲಿ ಕೂಡಾ ಇದು ನೆರವಾಗಲಿದೆ.

ಚಾರ್ಧಾಮ ಮಹಾಮಾರ್ಗ ವಿಕಾಸ ಪರಿ ಯೋಜನ

ಚಾರ್ಧಾಮ ಮಹಾಮಾರ್ಗ ವಿಕಾಸ ಪರಿಯೋಜನ ಯೋಜನೆಯ ಮುಖ್ಯ ಉದ್ದೇಶವೆಂದರೆ, ಹಿಮಾಲಯದ ತಪ್ಪಲಿನಲ್ಲಿ ಬರುವ ಚಾರ್ಧಾಮ ಯಾತ್ರಾಕೇಂದ್ರಗಳಿಗೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು. ಇದರ ಜತೆಗೆ ಚಾರ್ಧಾಮ ಯಾತ್ರೆಯನ್ನು ಹೆಚ್ಚು ಸುರಕ್ಷಿತವಾಗಿಸುವುದು ಮತ್ತು ಪ್ರಯಾಣವನ್ನು ಹೆಚ್ಚು ವೇಗಗೊಳಿಸುವುದು ಹಾಗೂ ಅನುಕೂಲಕರವನ್ನಾಗಿ ಮಾಡುವುದು. ಇದರಲ್ಲಿ 900 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಉತ್ತರಾಖಂಡದಲ್ಲಿ ಒಟ್ಟು 12 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಇಡೀ ಹೆದ್ದಾರಿಯು ಎರಡು ಲೇನ್ಗಳ ಹೆದ್ದಾರಿಯಾಗಿದ್ದು, ಕನಿಷ್ಠ ಹತ್ತು ಮೀಟರ್ ಹೆಚ್ಚುವರಿ ಸ್ಥಳಾವಕಾಶ ಇರುತ್ತದೆ. ಇದರಲ್ಲಿ ಸುರಂಗ ಮಾರ್ಗಗಳು, ಬೈಪಾಸ್ಗಳು, ಸೇತುವೆಗಳು, ಉಪಮರ್ಗಗಳು ಮತ್ತು ಇತರ ವ್ಯವಸ್ಥೆಗಳು ಸಂಚಾರ ತಡೆಯಂಥ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಳವಡಿಸಿಕೊಳ್ಳಲಾಗಿರುತ್ತದೆ. ಪರಿಸರ ಸ್ನೇಹಿ ತಂತ್ರಗಳನ್ನು ಅಳವಡಿಸಿಕೊಂಡು ಇಡೀ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಹೆದ್ದಾರಿ ಬದಿಯ ಸೌಲಭ್ಯಗಳು ಕೂಡಾ ಇದ್ದು, ಸಾರ್ವಜನಿಕ ಸೌಲಭ್ಯಗಳಾದ ಪಾರ್ಕಿಂಗ್ ಸ್ಥಳಾವಕಾಶ ಮತ್ತು ತುರ್ತು ಸಂದರ್ಭದಲ್ಲಿ ಜನರನ್ನು ಸುರಕ್ಷಿತವಾಗಿ ಕರೆದೊಯ್ಯಲು ಅನುಕೂಲವಾಗುವಂತೆ ಹೆಲಿಪ್ಯಾಡ್ಗಳ ನಿರ್ಮಾಣದಂಥ ಸೌಲಭ್ಯವೂ ಇರುತ್ತದೆ.

Comment