IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಖಾಸಗಿಗೆ ಕಲ್ಲಿದ್ದಲು ಗಣಿ: ಹರಾಜಿಗೆ ಮಾರ್ಗಸೂಚಿ

ಖಾಸಗಿಗೆ ಕಲ್ಲಿದ್ದಲು ಗಣಿ: ಹರಾಜಿಗೆ ಮಾರ್ಗಸೂಚಿ

ಕಲ್ಲಿದ್ದಲು ಗಣಿ (ವಿಶೇಷ ಅಧಿಕಾರ) ಕಾಯ್ದೆ- 2015 ಮತ್ತು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ನಿಯಂತ್ರಣ) ಕಾಯ್ದೆ- 1957ಕ್ಕೆ ಅನುಗುಣವಾಗಿ ಕಲ್ಲಿದ್ದಲು ಗಣಿಗಾರಿಕೆ ಹಕ್ಕನ್ನು ಖಾಸಗಿಗೆ ನೀಡುವ ವಿಧಿವಿಧಾನಗಳನ್ನು ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಅನುಮೋದಿಸಿದೆ.

ಹಿನ್ನೆಲೆ

ಸುಪ್ರೀಂಕೋರ್ಟ್, 2014ರಲ್ಲಿ 204 ಗಣಿ ಮತ್ತು ಕಲ್ಲಿದ್ದಲು ಕ್ಷೇತ್ರಗಳ ಹಂಚಿಕೆಯನ್ನು ರದ್ದುಪಡಿಸಿತ್ತು. ಕಲ್ಲಿದ್ದಲು ಗಣಿ (ರಾಷ್ಟ್ರೀಕರಣ) ಕಾಯ್ದೆ- 1973 ಅನ್ವಯ 1993ರವರೆಗೆ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ನೀಡಿದ್ದ ಗಣಿಗಾರಿಕೆ ಹಂಚಿಕೆಯನ್ನು ರದ್ದುಪಡಿಸಲಾಗಿತ್ತು. ತೀರ್ಪಿಗೆ ಅನುಗುಣವಾಗಿ ಸಂಸತ್ತು ಕಲ್ಲಿದ್ದಲು ಗಣಿ (ವಿಶೇಷ ಅಧಿಕಾರ) ಕಾಯ್ದೆ- 2015ನ್ನು ಜಾರಿಗೆ ತಂದು, ಕಲ್ಲಿದ್ದಲು ಗಣಿಗಳ ಹಂಚಿಕೆಯನ್ನು ಹರಾಜು ಮತ್ತು ಹಂಚಿಕೆ ಆಧಾರದಲ್ಲಿ ಮಾಡಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ಪ್ರಯತ್ನವನ್ನು ಸರ್ಕಾರ ನಡೆಸಿತ್ತು.

ಹೊಸ ವ್ಯವಸ್ಥೆ

ಇದೀಗ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಅಂತಿಮಪಡಿಸಿರುವ ಹೊಸ ವ್ಯವಸ್ಥೆಯು ಹರಾಜು ಏರಿಕೆ ಮುನ್ನಡೆಯ ಹರಜು ಪ್ರಕ್ರಿಯೆಯಾಗಿದ್ದು, ಇದರಲ್ಲಿ, ಪ್ರತಿ ಟನ್ ಕಲ್ಲಿದ್ದಲು ಉತ್ಪಾದನೆಗೆ ರಾಜ್ಯ ಸರ್ಕಾರಗಳಿಗೆ ವಾಸ್ತವವಾಗಿ ಬಿಡ್ಡರ್ಗಳು ನೀಡಲು ಮುಂದಾಗುವ ಬೆಲೆಯನ್ನು ಹರಾಜಿನ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಇದಲ್ಲದೆ ಗಣಿಗಾರಿಕೆ ಮೂಲಕ ಪಡೆದ ಕಲ್ಲಿದ್ದಲನ್ನು ಮಾರಟ ಮಾಡಲು ಮತ್ತು ಬಳಕೆ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಕಲ್ಲಿದ್ದಲು ಗಣಿ ಹರಾಜಿನಿಂದ ಬಂದ ಸಂಪೂರ್ಣ ಆದಾಯವನ್ನು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಜ್ಯಗಳಿಗೆ ಸಂಪೂರ್ಣವಾಗಿ ನೀಡಲಾಗುತ್ತದೆ. ಇದರಿಂದಾಗಿ ರಾಜ್ಯಗಳು ಹೆಚ್ಚುವರಿ ಆದಾಯವನ್ನು ರಾಜ್ಯದ ಹಿಂದುಳಿದ ಪ್ರದೇಶಗಳ ಅಬಿವೃದ್ಧಿ ಮತ್ತು ಬುಡಕಟ್ಟು ಜನ ಸೇರಿದಂತೆ ಅಲ್ಲಿ ವಾಸವಿರುವ ಜನತೆಯ ಅಭಿವೃದ್ಧಿಗೆ ಇದನ್ನು ಬಳಸಲು ಉತ್ತೇಜನ ನೀಡಿದಂತಾಗುತ್ತದೆ.

ಮಹತ್ವ

ವಿನೂತನ ವಿಧಾನದಿಂದ ಪಾರದರ್ಶಕತೆ, ವಹಿವಾಟು ನಡೆಸಲು ಅನುಕೂಲಕರ ವಾತಾವರಣ ಕಲ್ಪಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಲು ಗರಿಷ್ಠ ಆದ್ಯತೆಯನ್ನು ನೀಡಿದಂತಾಗುತ್ತದೆ. ಇದು ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗಿ ವಲಯಕ್ಕೆ ಮುಕ್ತವಾಗಿಸಲುವ ಮಹತ್ವದ ಕ್ರಮವಾಗಿದ್ದು, ಇದು ದೇಶದ ಆರ್ಥಿಕತೆಗೆ ಉತ್ತೇಜನ ನೀಡುವಲ್ಲೂ ಸಹಕಾರಿಯಾಗಲಿದೆ. ಇದು ಮಹತ್ವಾಕಾಂಕ್ಷಿ ಕಲ್ಲಿದ್ದಲು ವಲಯದ ಸುಧಾರಣೆಯಾಗಿದ್ದು, 1973 ಗಣಿಗಳ ರಾಷ್ಟ್ರೀಕರಣದ ಬಳಿಕ ಬಂದಿರುವ ಮಹತ್ವಪೂರ್ಣ ಸುಧಾರಣೆ ಎಂದು ಇದು ಎನಿಸಿಕೊಳ್ಳಲಿದೆ.

ಇದು ಕಲ್ಲಿದ್ದಲು ಗಣಿಗಾರಿಕೆಯನ್ನು ಸರ್ಕಾರಿ ಏಕಸ್ವಾಮ್ಯದಿಂದ ಮುಕ್ತಗೊಳಿಸಲಿದ್ದು, ವಲಯದ ವಾಸ್ತವವಾಗಿ ಪೈಪೋಟಿಗೆ ಅಥವಾ ಸ್ಪರ್ಧಾತ್ಮಕತೆಗೆ ತೆರೆದುಕೊಳ್ಳಲಿದೆ. ಇದರಿಂದಾಗಿ ಅತ್ಯುತ್ತಮವಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲೂ ಸಾಧ್ಯವಾಗಲಿದೆ. ಇದು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಮತ್ತು ಗಣಿಗಾರಿಕೆ ಉದ್ಯಮದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಗೂ ನೆರವಾಗಲಿದೆ. ಇದು ಕಡಿಮೆ ವೆಚ್ಚದ ಕಲ್ಲಿದ್ದಲು ಲಭ್ಯತೆಗೂ ಕಾರಣವಾಗಲಿದ್ದು, ದೇಶದಲ್ಲಿ ಶೇಕಡ 70ರಷ್ಟು ಉಷ್ಣವಿದ್ಯುತ್ ಸ್ಥಾವರಗಳು ಕಲ್ಲಿದ್ದಲನ್ನೇ ಅವಲಂಬಿಸಿರುವುದರಿಂದ ಕ್ಷೇತ್ರಕ್ಕೂ ಇದು ಅನುಕೂಲವಾಗಲಿದೆ. ದೇಶದ ಪೂರ್ವರಾಜ್ಯಗಳು ವಿಧಾನದಿಂದಾಗಿ ಹೆಚ್ಚಿನ ಪ್ರಯೋಜನ ಪಡೆಯಲಿವೆ.

Comment