IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆಟೊಮೊಬೈಲ್ ಕೌಶಲ ಅಭಿವೃದ್ಧಿಗೆ ಒಪ್ಪಂದ

ಆಟೊಮೊಬೈಲ್ ಕೌಶಲ ಅಭಿವೃದ್ಧಿಗೆ ಒಪ್ಪಂದ

ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ಜತೆ ಒಪ್ಪಂದ ಮಾಡಿಕೊಂಡು ಭಾರತದಲ್ಲಿ ಆಟೊಮೊಬೈಲ್ ಕ್ಷೇತ್ರದಲ್ಲಿ ಸ್ಕಿಲ್ ಇಂಡಿಯಾ ಕ್ಷೇತ್ರದಲ್ಲಿ ತರಬೇತಿ ನೀಡಲು ಮುಂದಾಗಿದೆ. ಆಟೊಮೊಬೈಲ್ ಉದ್ಯಮ ಕ್ಷೇತ್ರದಲ್ಲಿ ಇದು ಸಹಭಾಗಿತ್ವ ಸಾಧಿಸಲಿದೆ.

ಒಡಂಬಡಿಕೆಯ ಮುಖ್ಯ ಉದ್ದೇಶವೆಂದರೆ, ಉದ್ಯೋಗಾವಕಾಶವನ್ನು ಆಟೊಮೊಬೈಲ್ ಮಾರಾಟ, ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿ ಸೃಷ್ಟಿಸುವುದು. ಇದು ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿ ಮಹತ್ವದ್ದಾಗಿದೆ.

ಪ್ರಮುಖ ಅಂಶಗಳು

ಒಡಂಬಡಿಕೆ ಅನ್ವಯ ಮಾರುತಿ ಸುಜುಕಿಯು ಕೌಶಲ ಅಭಿವೃದ್ಧೀ ಮತ್ತು ಉದ್ಯಮಶೀಲತೆ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ತರಬೇತಿ ವಿಭಾಘದ ಮಹಾನಿರ್ದೇಶಕರ ಸಲಹೆಯ ಅನ್ವಯ, ಆಟೊಮೊಬೈಲ್ ಉದ್ಯಮಕ್ಕೆ ಅಗತ್ಯವಾದ ತರಬೇತಿ ಮಾದರಿಯನ್ನು ರೂಪಿಸಲಿದೆ. ಯೋಜನೆಯಡಿ ಕಂಪನಿಯು ದೇಶಾದ್ಯಂತ ಕೋರ್ಸ್ಗಳನ್ನು ಆಯೋಜಿಸಲಿದೆ. ಇದಕ್ಕಾಗಿ ಐಟಿಐಗಳಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲಿದೆ. ಜತೆಗೆ ವಿವಿಧ ತರಬೇತಿ ಕೇಂದ್ರಗಳ ಪಾಲುದಾರಿಕೆಯಲ್ಲಿ ಇದು ಜಾರಿಯಾಗಲಿದೆ. ಜತೆಗೆ ಪ್ರಾದೇಶಿಕ ತರಬೇತಿ ಕೇಂದ್ರಗಳು, ವ್ಯಾಪಾರಿಗಳು ಹಾಗೂ ಮಾರುತಿ ಸುಜುಕಿ ಮಾರಾಟಗಾರರ ಜತೆಗೆ ಸಹಭಾಗಿತ್ವವನ್ನು ಸಾಧಿಸಲಾಗುತ್ತದೆ.

ಯೋಜನೆಯಡಿ ವಿತರಿಸಲು ಉದ್ದೇಶಿಸಿದ ವಿವಿಧ ಯೋಜನೆಗಳಲ್ಲಿ ಉತ್ಪಾದನೆ, ಸ್ವಯಂಚಾಲಿತ ಬಾಡಿ ರಿಪೇರಿ, ಅಟೋಮೋಟಿವ್ ಸರ್ವೀಸ್ ಮತ್ತು ದುರಸ್ತಿ, ಆಟೊಮೇಟಿವ್ ಪೆಯಿಂಟ್ ರಿಪೇರ್ನಂಥ ಕ್ಷೇತ್ರಗಳು ಸೇರಿವೆ. ಇದರ ಜತೆಗೆ ಮೌಲ್ಯ ಸರಣಿಯಲ್ಲಿ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡುವುದು ಕೂಡಾ ಇದರಲ್ಲಿ ಸೇರಿದೆ.

ಕೋರ್ಸ್ಗಳು ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (ಎನ್ಸಿವಿಟಿ) ಅನುಮೋದನೆ ಪಡೆದಿರುತ್ತವೆ ಹಾಗೂ ಕೋರ್ಸ್ ಪೂರ್ಣಗೊಂಡ ಬಳಿಕ ಇಲ್ಲಿಂದ ಅರ್ಹ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡುವ ವ್ಯವಸ್ಥೆಯೂ ಇರುತ್ತದೆ.

Comment