IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

65 ಅಗತ್ಯ ಔಷಧಿಗಳ ಬೆಲೆ ನಿಗದಿ

65 ಅಗತ್ಯ ಔಷಧಿಗಳ ಬೆಲೆ ನಿಗದಿ

ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು 65 ಅಗತ್ಯ ಔಷಧಿಗಳ ಬೆಲೆಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಮಧುಮೇಹ, ನೋವು, ಸೋಂಕು ಮತ್ತು ಅಧಿಕ ರಕ್ತದ ಒತ್ತಡಕ್ಕೆ ಚಿಕಿತ್ಸೆ ನೀಡುವ ಔಷಧಿಗಳು ಸೇರಿವೆ. 65 ಅಗತ್ಯ ಔಷಧಿಗಳು ಔಷಧಗಳ (ಬೆಲೆ ನಿಯಂತ್ರಣ) ಆದೇಶ (ಡಿಪಿಸಿಓ)- 2013 ಶೆಡ್ಯೂಲ್ 1 ಅಡಿಯಲ್ಲಿ ಬರುವ ಔಷಧಿಗಳಾಗಿವೆ.

ಪ್ರಮುಖ ಅಂಶಗಳು

ಒಂದನೇ ಶೆಡ್ಯೂಲ್ನಲ್ಲಿ ಸೇರಿರುವ ಔಷಧಿಗಳ ಉತ್ಪಾದಕ ಸಂಸ್ಥೆಗಳು, ಬ್ರಾಂಡೆಡ್ ಅಥವಾ ಜೆನರಿಕ್ ಔಷಧಿಗಳ ಮಾರಾಟಗಾರರು ಅಥವಾ ಎರಡೂ ಬಗೆಯ ಔಷಧಿಗಳನ್ನು ತಯಾರಿಸುವ ಹಾಗೂಮಾರಾಟ ಮಾಡುವ ಸಂಸ್ಥೆಗಳು ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ. ಇಂಥ ಸಂಸ್ಥೆಗಳು ಬೆಲೆ ಪರಿಷ್ಕರಣೆ ಸಂದರ್ಭದಲ್ಲಿ ಇಂಥ ಔಷಧಿಗಳ ಬೆಲೆ ಅಧಿಕವಾಗಿದ್ದರೆ, ಬೆಲೆ ಕಡಿಮೆ ಮಾಡುವ ಕ್ರಮ ಕೈಗೊಳ್ಳಬೇಕಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ 65 ಔಷಧಿಗಳ ಉತ್ಪಾದಕ ಕಂಪನಿಗಳು ಮೂರು ತಿಂಗಳಿಗೊಮ್ಮೆ ಎನ್ಪಿಪಿಎಗೆ ಸಮಗ್ರ ಫಾರ್ಮಸ್ಯೂಟಿಕಲ್ ಡಾಟಾಬೇಸ್ ನಿರ್ವಹಣೆ ವ್ಯವಸ್ಥೆಯನ್ನು ಸಲ್ಲಿಸಬೇಕಾಗುತ್ತದೆ. ಇವರ ಹೊರತಾಗಿ ಯಾವುದೇ ಉತ್ಪಾದಕರು ಉತ್ಪಾದನೆಯನ್ನು ನಿಲ್ಲಿಸಲು ಮುಂದಾದಲ್ಲಿ ಎನ್ಇಪಿಎನಿಂದ ಆರು ತಿಂಗಳು ಮುಂಚಿತವಾಗಿ ಅನುಮತಿ ಪಡೆದಿರಬೇಕಗುತ್ತದೆ ಹಾಗೂ ಎನ್ಪಿಪಿಎ ಉತ್ಪಾದನೆ ನಿಲ್ಲಿಸಲು ಅನುಮತಿ ನೀಡಿದ ಬಳಿಕ ಉತ್ಪಾದನೆ ನಿಲ್ಲಿಸಬೇಕಾಗುತ್ತದೆ.

ನ್ಯಾಷನಲ್ ಫಾರ್ಮಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್ಪಿಪಿಎ)

ನ್ಯಾಷನಲ್ ಫಾರ್ಮಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್ಪಿಪಿಎ) ಎನ್ನುವುದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧಗಳ ಇಲಾಖೆಯಡಿ ಕಾರ್ಯನಿರ್ವಹಿಸುವ ಸ್ವತಂತ್ರ ಸಂಥೆಯಾಗಿದ. ಇದನ್ನು 1997ರಲ್ಲಿ ಆರಂಭಿಸಲಾಗಿದೆ. ಇದರ ಕಾರ್ಯಸೂಚಿ ಎಂದರೆ, ದೊಡ್ಡ ಪ್ರಮಾಣದ ಔಷಧಗಳ ಬೆಲೆಯನ್ನು ನಿಯಂತ್ರಿಸುವುದು, ಪರಿಷ್ಕರಿಸುವುದು ಅಥವಾ ನಿಗದಿಪಡಿಸುವುದು. ಜತೆಗೆ ಡಿಪಿಸಿಓ 2013 ಅನ್ವಯ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸುವುದು.

ನ್ಯಾಷನಲ್ ಫಾರ್ಮಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್ಪಿಪಿಎ), ಡಿಪಿಸಿಓ 2013 ಅನ್ವಯ ಅಗತ್ಯ ಔಷಧಿಗಳನ್ನು ಶೆಡ್ಯೂಲ್ 1ರಲ್ಲಿ ಸೇರಿಸಲಾಗಿದೆ. ಅಗತ್ಯ ಔಷಧಿಗಳನ್ನು ಲೆಕ್ಕಾಚಾರ ಮಾಡುವ ವಿಧಾನವು ತೀರಾ ಸರಳವಾಗಿದ್ದು, ಇಡೀ ಚಿಕಿತ್ಸಾ ವ್ಯವಸ್ಥೆಯಲ್ಲಿ ಮಾರಾಟವಾಗುವ ಔಷಧಿಗಳ ಶೇಕಡ 1ರಷ್ಟು ಉತ್ಪನ್ನಗಳ ಸರಾಸರಿ ಬೆಲೆಯಾಗಿದೆ. ಬೆಲೆ ನಿಯಂತ್ರಣ ವ್ಯವಸ್ಥೆಯಡಿ ಬಾರದ ಔಷಧಿಗಳ ಬೆಲೆಯನ್ನು ಉತ್ಪಾದಕರು ವಾರ್ಷಿಕ ಶೇಕಡ 10ರಷ್ಟು ಹೆಚ್ಚಿಸಲು ಅಧಿಕಾರ ಇರುತ್ತದೆ.

Comment