IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸೆಂಡೈ ಚೌಕಟ್ಟು ತರಬೇತಿದಾರರಿಗೆ ತರಬೇತಿ

ಸೆಂಡೈ ಚೌಕಟ್ಟು ತರಬೇತಿದಾರರಿಗೆ ತರಬೇತಿ

ಮೊಟ್ಟಮೊದಲ ರಾಷ್ಟ್ರಮಟ್ಟದ ತರಬೇತಿದಾರರ ತರಬೇತಿ ಕಾರ್ಯಕ್ರಮವನ್ನು ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆಇದು ಹಲವು ಕೇಂದ್ರೀಯ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಇದು ಮುಖ್ಯವಾಗಿ ವಿಪತ್ತು ಅಪಾಯ ಕಡಿಮೆಗೊಳಿಸುವ ಕುರಿತ ಸೆಂಡೈ ಅಭಿವೃದ್ಧಿ ಕ್ರಿಯಾಯೋಜನೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಲಿದೆ.

ಇದನ್ನು ರಾಷ್ಟ್ರೀಯ ವಿಕೋಪ ನಿರ್ವಹಣೆ ಪ್ರಾಧಿಕಾರವು ವಿಶ್ವಸಂಸ್ಥೆಯ ವಿಕೋಪ ಕಡಿಮೆ ಮಾಡುವ ಜಾಗತಿಕ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದೆ.

ಇದು ಸಾಂಡೈ ಚೌಕಟ್ಟಿನ ಅಡಿಯಲ್ಲಿ ಹಮ್ಮಿಕೊಂಡ ಮೊಟ್ಟಮೊದಲ ತರಬೇತಿ ಕಾರ್ಯಕ್ರಮವಾಗಿದ್ದು, ಇದು ಸಾಮಥ್ರ್ಯ ವೃದ್ಧಿಯ ಉದ್ದೇಶವನ್ನು ಹೊಂದಿದೆ. ಸಾಂಡೈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯ ಮೌಲ್ಯಮಾಪನಕ್ಕೆ ಮತ್ತು ವ್ಯಾಖ್ಯಾನಿತ ಸೂಚಕಗಳನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಇದು ಸಲಹಾ ಕಾರ್ಯಕ್ರಮ ಮತ್ತು ತರಬೇತಿಯನ್ನು ನೀಡುವಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಸಜ್ಜುಗೊಳಿಸಲಗಿದೆ.

ವಿಕೋಪ ಅಪಾಯ ಕಡಿಮೆಗೊಳಿಸುವ ಕುರಿತ ಸೆಂಡೈ ಚೌಕಟ್ಟು

ವಿಕೋಪ ಅಪಾಯ ಕಡಿಮೆಗೊಳಿಸುವ ಕುರಿತ ಸೆಂಡೈ ಚೌಕಟ್ಟು 2015ರಲ್ಲಿ ಜಾರಿಗೆ ಬಂದಿದ್ದು, 2030 ವರೆಗೆ ಇದು ಜಾರಿಯಲ್ಲಿರುತ್ತದೆ. ಇದು ವಿಶ್ವಸಂಸ್ಥೆಯ ಸದಸ್ಯ ದೇಶಗಳು ಅನುಮೋದಿಸಿದ ಒಪ್ಪಂದವಾಗಿದ್ದು, 2015 ವಿಶ್ವ ವಿಕೋಪ ಕಡಿಮೆಗೊಳಿಸುವ ಸಮ್ಮೇಳನದ ವೇಳೆ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಜಪಾನ್ ಸೆಂಡೈ ನಗರದಲ್ಲಿ ಸಮ್ಮೇಳನ ನಡೆದಿತ್ತು. ಇದು ಸ್ವಯಂ ಇಚ್ಛೆಯ ಹಾಗೂ ಕಾನೂನಾತ್ಮಕವಾಗಿ ಬದ್ಧವಲ್ಲದ ಒಪ್ಪಂದವಾಗಿದ್ದು, ವಿಶ್ವಸಂಸ್ಥೆಯ ಸದಸ್ಯ ದೇಶಗಳ ಪ್ರಾಥಮಿಕ ಪಾತ್ರವು ವಿಕೋಪ ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿದೆ. ಚೌಕಟ್ಟು 15 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ.

ಇದು ಹೊಣೆಗಾರಿಕೆಯನ್ನು ಹಂಚಿಕೊಳ್ಳುವ ಒಪ್ಪಂದವಾಗಿದ್ದು, ಸ್ಥಳೀಯ ಸರ್ಕಾರ, ಖಾಸಗಿ ವಲಯ ಮತ್ತು ಇತರ ಹಕ್ಕುದಾರ ವರ್ಗಗಳು ಹೊಣೆಗಾರಿಕೆಯನ್ನು ಹಂಚಿಕೊಳ್ಳಲಿವೆ. ಇದು ಹಿಂದೆ ಜಾರಿಯಲ್ಲಿದ್ದ ಹ್ಯೋಗೋ ಕ್ರಿಯಾಯೋಜನೆ ಚೌಕಟ್ಟಿನ ಮುಂದುವರಿದ ಒಪ್ಪಂದವಾಗಿದೆ. ಇದು ಬಹುತೇಕ ಅಂತರರಾಷ್ಟ್ರಿಯ ವಿಕೋಪ ನಿರ್ವಹಣೆಗೆ ಸಹಕಾರಿಯಾಗಿದೆ.

ಇದು ಸಾಮಾನ್ಯ ಗುಣಮಟ್ಟವನ್ನು ನಿಗದಿಪಡಿಸುವ ಒಪ್ಪಂದವಗಿದ್ದು, ಸಾಧನೆ ಮಾಡಬಹುದಾದ ಗುರಿಗಳನ್ನು ಹೊಂದಿದ ಸಮಗ್ರ ಚೌಕಟ್ಟಾಗಿದೆ. ಇದು ಕಾನೂನಾತ್ಮಕ ಹಿನ್ನೆಲೆ ಇರುವ ವಿಕೋಪ ಅಪಾಯ ಕಡಿಮೆ ಮಾಡುವ ಸಾಧನವಾಗಿದೆ. ಇದು ಸಮಗ್ರ ಹಾಗು ಎಲ್ಲರನ್ನೂ ಒಳಗೊಳ್ಳುವ ಸಾಂಸ್ಥಿಕ ಕ್ರಮಗಳನ್ನು ಕೈಗೊಂಡು, ಸ್ವಯಂಪ್ರೇರಿತವಾಗಿ ವಿಕೋಪ ತಡೆಯುವುದು, ತ್ವರಿತ ಹಾಗೂ ಪರಿಣಾಮಕಾರಿ ಸ್ಪಂದನೆಗೆ ಸದಾ ಸನ್ನದ್ಧವಾಗಿರುವುದು ಮತ್ತಿತರ ಕ್ರಮಗಳನ್ನು ಹೊಂದಿದೆ.

ಸೆಂಡೈ ಚೌಕಟ್ಟಿನ ನಾಲ್ಕು ನಿರ್ದಿಷ್ಟ ಆದ್ಯತೆಗಳೆಂದರೆ, ವಿಕೋಪ ಅಪಾಯವನ್ನು ಅರ್ಥ ಮಾಡಿಕೊಳ್ಲುವುದು, ವಿಕೋಪ ಅಪಾಯ ನಿರ್ವಹಿಸುವುದಕ್ಕೆ ಕುರಿತ ಆಡಳಿತ ವ್ಯವಸ್ಥೆಯನ್ನು ಬಲಗೊಳಿಸುವುದು, ಅಪಾಯ ಸಾಧ್ಯತೆಯನ್ನು ಕಡಿಮೆ ಮಾಡುವುದು, ವಿಕೋಪ ಅಪಾಯ ಕಡಿಮೆ ಮಾಡುವ ಸಂಬಂಧ ಹೂಡಿಕೆ ಮಾಡುವುದು ಹಾಗೂ ವಿಕೋಪ ಸನ್ನದ್ಧತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪರಿಣಾಮಕಾರಿ ಸ್ಪಂದನೆ ಮಾಡುವುದು.

Comment