IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಡಬ್ಲ್ಯುಟಿಓ ಸದಸ್ಯದೇಶಗಳ ಸಭೆಗೆ ಭಾರತ ಆತಿಥ್ಯ

ಡಬ್ಲ್ಯುಟಿಓ ಸದಸ್ಯದೇಶಗಳ ಸಭೆಗೆ ಭಾರತ ಆತಿಥ್ಯ

ವಿಶ್ವ ವ್ಯಾಆರ ಸಂಸ್ಥೆಯ ಸದಸ್ಯ ದೇಶಗಳ ಶೃಂಗಸಭೆಯನ್ನು 2018ರಲ್ಲಿ ಭಾರತ ಆಂಯೋಜಿಸಲು ನಿರ್ಧರಿಸಿದೆ. ಆಹಾರ ಭದ್ರತೆ ಮತ್ತು ಇತರ ಪ್ರಮುಖ ವಿಷಯಗಳಿಗೆ ಸದಸ್ಯ ದೇಶಗಳ ಬೆಂಬಲವನ್ನು ಪಡೆಯುವುದು ಇದರ ಉದ್ದೇಶಇದನ್ನು ಕೈಗಾರಿಕಾ ಮತ್ತು ವಾಣಿಜ್ಯ ಖಾತೆ ಸಚಿವ ಸುರೇಶ್ ಪ್ರಭು ಅವರು ಪ್ರಕಟಿಸಿದರು. ಸಿದ್ಧ ಉಡುಪುಗಳ ರಫ್ತು ಉತ್ತೇಜನ ಮಂಡಳಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಮಾತನಾಡುವ ವೇಳೆ ಸಚಿವರು ವಿಷಯವನ್ನು ಪ್ರಕಟಿಸಿದರು.

ಪ್ರಮುಖ ಅಂಶಗಳು

ಅಭಿವೃದ್ಧಿ ಹೊಂದಿದ ದೇಶಗಳು ಹೊಸ ವಿಷಯಗಳಾದ ಹೂಡಿಕೆ ಸೌಲಭ್ಯ, - ಕಾಮರ್ಸ್ಗೆ ನಿಯಮಾವಳಿಗಳನ್ನು ರೂಪಿಸುವುದು, ಲಿಂಗಭೇದವನ್ನು ತಡೆಯುವ ನಿಟ್ಟಿನಲ್ಲಿ ನೀತಿ ರೂಪಿಸುವುದು, ಮೀನುಗಾರಿಕೆಗೆ ಸಬ್ಸಿಡಿ ಕಡಿತಗೊಳಿಸುವುದು, ಅಕ್ರಮ ಮೀನುಗಾರಿಕೆಗೆ ಕಡಿವಾಣದಂಥ ಹೊಸ ವಿಷಯಗಳನ್ನು ಡಬ್ಲ್ಯುಟಿಓ ವ್ಯಾಪ್ತಿಗೆ ತರುವ ಬಗ್ಗೆ ಗುಂಪುಗಳನ್ನು ರಚಿಸಿಕೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರಸ್ತಾವಿತ ಸಭೆಯು ವಿಶೇಷ ಮಹತ್ವ ಪಡೆದಿದೆ.

ಭಾರತ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಕೃಷಿ ವಿಷಯಗಳನ್ನು ಪ್ರಸ್ತಾವಿಸಲು ಉತ್ಸುಕವಾಗಿದೆ. ಇದು ಹೊಸ ವಿಷಯಗಳ ಬಗ್ಗೆ ಧ್ವನಿ ಎತ್ತುವ ನಿಟ್ಟಿನಲ್ಲಿ ಒತ್ತಡ ತರುತ್ತಿದೆ. ಅದರಲ್ಲೂ ಮುಖ್ಯವಾಘಿ ವ್ಯಾಪಾರ ವಿಷಯಗಳ ಬಗ್ಗೆ ಒಪ್ಪಂದ ಮಾತುಕತೆಗಳನ್ನು ನಡೆಸುತ್ತಿದೆ. ಸಭೆಯು ಬಹುಪಕ್ಷೀಯ ಪ್ರಕ್ರಿಯೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಹಿನ್ನೆಲೆ

ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿ ಇತ್ತೀಚೆಗೆ ನಡೆದ ವಿಶ್ವವ್ಯಾಪಾರ ಸಂಸ್ಥೆಯ ಸಚಿವ ಮಟ್ಟದ 11ನೇ ಸಭೆಯಲ್ಲಿ, ಸಾರ್ವಜನಿಕ ಹಕ್ಕುದಾರಿಕೆ ವಿಷಯವನ್ನು ಒಪ್ಪಿಕೊಳ್ಳಲು ಅಮೆರಿಕ ನಿರಾಕರಿಸಿದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿತ್ತು. 164 ಸದಸ್ಯ ದೇಶಗಳು ವಿಷಯದಲ್ಲಿ ಒಮ್ಮತಕ್ಕೆ ಬರಲು ವಿಫಲವಾದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಮುಂದುವರಿದಿದೆ.

ಅಮೆರಿಕ ಮತ್ತು ಇತರ ಅಭಿವೃದ್ಧಿ ದೇಶಗಳು ಆಹಾರ ಭದ್ರತೆ ಪ್ರಕ್ರಿಯೆ ಕುರಿತಂತೆ ಸರ್ಕಾರಿ ಹಕ್ಕುದಾರಕೆಯನ್ನು ತಡೆದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಇದು ಭಾರತ ಹಾಗೂ ಇತರ ಅಭಿವೃದ್ಧಿಶೀಲ ದೇಶಗಳಿಗೆ ಮಾರಕವಾಗಲಿದೆ. ಆದಾಗ್ಯೂ ಸದಸ್ಯದೇಶಗಳು ಮೀನುಗಾರಿಕೆ ಮೇಲಿನ ಸಬ್ಸಿಡಿಯನ್ನು ತೆಗೆದುಹಾಕುವ ಸಂಬಂಧ 2019 ಡಿಸೆಂಬರ್ನಲ್ಲಿ ನಡೆಯುವ ಮುಂದಿನ ಸಚಿವಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲು ನಿರ್ಧರಿಸಿವೆ.

Comment