IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಲಡಾಕ್‍ನಲ್ಲಿ ಲೋಸರ್ ಹಬ್ಬ

ಲಡಾಕ್‍ನಲ್ಲಿ ಲೋಸರ್ ಹಬ್ಬ

ಹಿಮಾಲಯ ಪ್ರಾಂತ್ಯ ಜಮ್ಮು ಮತ್ತು ಕಾಶ್ಮೀರದ ಲಡಾಕ್ನಲ್ಲಿ ಸಾಂಪ್ರದಾಯಿಕ ಲೋಸರ್ ಹಬ್ಬವನ್ನು ಹೊಸ ವರ್ಷ ಆರಂಭದ ದಿನವಾಗಿ ಆಚರಿಸಲಾಯಿತು. 10 ದಿನಗಳ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಧಾರ್ಮಿಕ ಹಾಗೂ ವಸತಿ ಪ್ರದೇಶಗಳಲ್ಲಿ ದೀಪಗಳನ್ನು ಬೆಳಗಿಸಿ ಸಂಭ್ರಮಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜನ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಲೋಸರ್ ಎನ್ನುವುದು ಲಡಾಕ್ ಮತ್ತು ಟಿಬೇಟ್ ಪ್ರದೇಶದಲ್ಲಿ ಹೊಸ ವರ್ಷದ ಹಬ್ಬವಾಗಿದೆ. ಇದು ಡಿಸೆಂಬರ್ನಲ್ಲಿ ಬರುತ್ತದೆ. ಲೋಸಾರ್ ಎನ್ನುವುದು ಟಿಬೆಟಿಯನ್ ಭಾಷೆಯಲ್ಲಿ ಹೊಸ ವರ್ಷ ಎಂಬ ಅರ್ಥ ಹಂದಿದೆ. ಇದು ಭಾಗದ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಲಡಾಖ್ ಬೌದ್ಧ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಶ್ರದ್ಧಾಭಕ್ತಿಯಿಂದ ಇದನ್ನು ಆಚರಿಸಲಾಗುತ್ತಿದೆ.

ವೈವಿಧ್ಯಮಯ ಹಾಗೂ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು, ಪ್ರಾಚೀನ ವಿಧಿವಿಧಾನಗಳು ಹಾಗೂ ಸಾಂಪ್ರದಾಐಇಕ ಕಲಾ ಪ್ರದರ್ಶನಗಳು ಹಬ್ಬದಲ್ಲಿ ನಡೆಯುತ್ತವೆ. ಇದು ಅತ್ಯಾಕರ್ಷಕ ಸಂಗೀತ ಹಬ್ಬವೂ ಆಗಿದ್ದು, ನೃತ್ಯ ಮತ್ತು ಆಚರಣೆ, ಸಂಬಂಧಿಕರ ಜತೆ ಭೋಜನ ಸವಿಯುವುದು ಮತ್ತಿತರ ಆಚರಣೆಗಳು ಇರುತ್ತವೆ. ಮನೆಗಳನ್ನು ವಿಶೇಷ ಅಲಂಕಾರಗಳಿಂದ ಶೃಂಗರಿಸಲಾಗುತ್ತದೆ. ಪ್ರಾರ್ಥನಾ ಧ್ವನವನ್ನು ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಹಾರಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

Comment