IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಡಿಸೆಂಬರ್ 18: ಅಂತರರಾಷ್ಟ್ರೀಯ ವಲಸೆ ದಿನ

ಡಿಸೆಂಬರ್ 18: ಅಂತರರಾಷ್ಟ್ರೀಯ ವಲಸೆ ದಿನ

ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ದಿನವನ್ನು ಪ್ರತಿ ವರ್ಷದ ಡಿಸೆಂಬರ್ 18ರಂದು ಆಚರಿಸಲಾಗುತ್ತದೆ. ಇದು ವಲಸೆಗಾರರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಇದು ವಿಶ್ವಾದ್ಯಂತ ವಲಸೆ ಕಾರ್ಮಿಕರ ಹಾಗೂ ಅವರ ಕುಟುಂಬಗಳ ಹಕ್ಕುಗಳ ರಕ್ಷಣೆ ಅವರ ಕೊಡುಗೆಯನ್ನು ಗುರುತಿಸುವ ಕಾರ್ಯವನ್ನೂ ಮಾಡುತ್ತದೆ. ವರ್ಷದ ಆಚರಣೆಯ ತಿರುಳು "ವಿಶ್ವಾದ್ಯಂತ ಸುರಕ್ಷಿತ ವಲಸೆ" ಎಂದಾಗಿದೆ.

ನಿರಾಶ್ರಿತರು ಮತ್ತು ವಲಸೆಗಾರರ ಸಂರಕ್ಷಣೆ

2016 ಸೆಪ್ಟೆಂಬರ್ನಲ್ಲಿ ವಿಶ್ವಸಂಸಥೆಯ ಸಾಮಾನ್ಯ ಸಭೆ ನಿರ್ಣಯವನ್ನು ಕೈಗೊಂಡು, ದೊಡ್ಡ ಪ್ರಮಾಣದ ವಲಸೆಗಾರರ ಚಲನೆಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ಒದಗಿಸಲು ನಿರ್ಧರಿಸಿತು. ಇದಕ್ಕಾಗಿಯೇ ಪ್ರತ್ಯೇಕ ಶೃಂಗವನ್ನೂ ಆಯೋಜಿಸಲಾಗಿತ್ತು. ಬದ್ಧತೆಯನ್ನು ಒಟ್ಟಾಗಿ ನ್ಯೂಯಾರ್ಕ್ ನಿರಾಶ್ರಿತರ ಮತ್ತು ವಲಸೆ ಒಪ್ಪಂದ ಎಂದು ಕರೆಯಲಾಗುತ್ತದೆ.

ನ್ಯೂಯಾರ್ಕ್ ಒಪ್ಪಂದವು ಪ್ರಮುಖವಾಗಿ ಅಂತರರಾಷ್ಟ್ರೀಯ ಸುರಕ್ಷತಾ ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶ ಹಾಗೂ ಬದ್ಧತೆ ಹೊಂದಿದೆ. ಇದರ ಅನ್ವಯ ವಿಶ್ವಸಂಸ್ಥೆಯ ಎಲ್ಲ ಸದಸ್ಯ ದೇಶಗಳು ವಲಸೆಗಾರರಿಗೆ ಸೂಕ್ತ ಭದ್ರತೆ ಹಾಗೂ ಸುರಕ್ಷತೆ ಒದಗಿಸಬೇಕಾಗುತ್ತದೆ. ಇದು 2018ರಲ್ಲಿ ಎರಡು ಹೊಸ ಜಾಗತಿಕ ಒಪ್ಪಂದಗಳನ್ನು ಮಾಡಲಿದೆ.

ಹಿನ್ನೆಲೆ

ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಡಿಸೆಂಬರ್ 18ನ್ನು ಅಂತರರಾಷ್ಟ್ರೀಯ ವಲಸೆ ದಿನ ಎಂದು ಘೋಷಿಸಿದೆ. ವಿಶ್ವಾದ್ಯಂತ 2000ದಲ್ಲಿ ವಲಸೆ ಹೆಚ್ಚಿದ ಹಿನ್ನೆಲೆಯಲ್ಲಿ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು. ಇದು ವಲಸೆ ಕಾರ್ಮಿಕರ ಮತ್ತು ಅವರ ಕುಟುಂಬದ ಸದಸ್ಯರ ಹಕ್ಕುಗಳ ರಕ್ಷಣೆಯ ಕುರಿತು ಮಾಡಿಕೊಂಡ ಒಪ್ಪಂದದ ನೆನಪಿಗಾಗಿ ದಿನವನ್ನು ಆಚರಿಸಲಾಗುತ್ತಿದೆ. 1990 ಡಿಸೆಂಬರ್ 18ರಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.

Comment