IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸ್ಪೇಸ್‍ಎಕ್ಸ್ನಿಂದ ಮರುಬಳಕೆ ರಾಕೆಟ್ ಉಡಾವಣೆ

ಸ್ಪೇಸ್‍ಎಕ್ಸ್ನಿಂದ ಮರುಬಳಕೆ ರಾಕೆಟ್ ಉಡಾವಣೆ

ಅಮೆರಿಕ ಮೂಲದ ಖಾಸಗಿ ರಾಕೆಟ್ ಉಡಾವಣೆ ಕಂಪನಿಯದ ಸ್ಪೇಸ್ಎಕ್ಸ್ ಮೊಟ್ಟಮೊದಲ ಬಾರಿಗೆ ಯಶಸ್ವಿಯಾಗಿ, ಒಮ್ಮೆ ಬಳಸಿದ ಫಾಲ್ಕಾನ್ 9 ರಾಕೆಟ್ನಿಂದ ಡ್ರಾಗನ್ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿದೆ. ಎರಡು ಬಾರಿ ಹಾರಿರುವ ರಾಕೆಟ್ ಭಾಗಗಳನ್ನು ಒಟ್ಟಾಗಿ ಉಡಾಯಿಸಲಾಗಿದ್ದು, ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಮರುಪೂರೈಕೆ ಮಿಷನ್ ಭಾಗವಾಗಿ ಪ್ರಯೋಗ ಮಾಡಲಾಗಿದೆ.

ಪ್ರಮುಖ ಅಂಶಗಳು

ಮಿಷನ್ 20 ಯೋಜನೆಗಳ ಪೈಕಿ 13ನೇ ಯೋಜನೆಯಾಗಿದ್ದು. 160 ಶತಕೋಟಿ ಡಾಲರ್ ವೆಚ್ಚದಲ್ಲಿ ಇದನ್ನು ನಾಸಾದಿಂದ ಗುತ್ತಿಗೆ ಪಡೆದು ಅಭಿವೃದ್ಧಿüಪಡಿಸಲಾದೆ. ಯಶಸ್ವಿ ಉಡಾವಣೆಯ ಬಳಿಕ ಸ್ಪೇಸ್ಎಕ್ಸ್, ತನ್ನ ರಾಕೆಟ್ ಬೂಸ್ಟರ್ ಅನ್ನು ಫ್ಲೋರಿಡಾದ ಕೇಪ್ ಕಾರ್ನೆವಾಲ್ ನೆಲದ ಮೇಲೆ ಯಶಸ್ವಿಯಾಗಿ ಇಳಿಸಿದೆ.

ಬಳಸಿದ ಡ್ರಾಗಾನ್ ಬಾಹ್ಯಾಕಾಶ ನೌಕೆಯು ಇದೀಗ ಐಎಸ್ಎಸ್ ಹಾದಿಯಲ್ಲಿದೆ. ಇದು 4800 ಪೌಂಡ್ಗಳನ್ನು ಹೊಂದಿದ್ದು, ಐಎಸ್ಎಸ್ ಬಾಹ್ಯಾಕಾಶ ನೌಕೆಗಳನ್ನು ಒಳಗೊಂಡಿದೆ. ಸ್ಪೇಸ್ಎಕ್ಸ್ ಇದುವರೆಗೆ 20 ರಾಕೆಟ್ ಬೂಸ್ಟರ್ಗಳನ್ನು ಉಡಾವಣೆ ಬಳಿಕ ಸಂಗ್ರಹಿಸಿಕೊಂಡಿದ್ದು, ಇದು ಸಾಗರ ಮೇಲ್ಮೈನಲ್ಲಿ ತೇಲುತ್ತಿದೆ ಅಥವ ನೆಲದ ಮೇಲಿದೆ. ಇದನ್ನು ಮರುಬಳಕೆ ಮಾಡುವ ಉದ್ದೇಶ ಹೊಂದಿದೆ.

ಸ್ಪೇಸ್ಎಕ್ಸ್

ಸ್ಪೇಸ್ ಎಕ್ಸ್ಪ್ಲೊರೇಶನ್ ಟೆಕ್ನಾಲಜೀಸ್ ಕಾರ್ಪೊರೇಷನ್ ಬಾಹ್ಯಾಕಾಶ ನೌಕೆಗಳ ಉತ್ಪಾದಕ ಸಂಸ್ಥೆಯಾಗಿದ್ದು,ಬಾಹ್ಯಾಕಾಶ ನೌಕೆಗಳ ಸೇವೆ ಮತ್ತು ಸಾರಿಗೆ ವ್ಯವಸ್ಥೆಯನ್ನೂ ಇದು ನಿರ್ವಹಿಸುತ್ತದೆ. ಇದರ ಕೇಂದ್ರ ಕಚೇರಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿದೆ.

ಇದು 2002ರಲ್ಲಿ ಸ್ಥಾಪನೆಯಾಗಿದ್ದು, ತೆಲ್ಸಾ ಮೋಟರ್ಸ್ ಸಿಇಓ ಮತ್ತು ಇಂಟರ್ನೆಟ್ ದೈತ್ಯ  ಪೇಪಾಲ್ ಜನಕ ಎಲೋನ್ ಮಸ್ಕ್ ಆರಂಭಿಸಿದರು. ಇದು ಬಾಹ್ಯಾಕಾಶ ಸಾರಿಗೆಯ ವೆಚ್ಚವನ್ನು ನಿಯಂತ್ರಿಸುವ ಮತ್ತು ಮಂಗಳ ಗ್ರಹದಲ್ಲಿ ವಸಾಹತು ಸ್ಥಾಪನೆಯ ಉದ್ದೇಶ ಹೊಂದಿದೆ.

ಸ್ಪೇಸ್ಎಕ್ಸ್ ಫಾಲ್ಕಾನ್-1 ಮತ್ತು ಫಾಲ್ಕಾನ್-9 ವಾಹಕಗಳನ್ನು ಅಭಿವೃದ್ಧಿಪಡಿಸಿದ್ದು, ಇವೆರಡನ್ನೂ ಮರುಬಳಕೆಯ ವಾಹಕವಾಗಿ ಬಳಸಲಾಗಿದೆ. ಇದು ಉಡಾವಣೆಯ ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಇದು ಡ್ರಾಗನ್ ಬಾಹ್ಯಾಕಾಶ ನೌಕೆಯನ್ನು ಕೂಡಾ ಅಭಿವೃದ್ಧಿಪಡಿಸಿದ್ದು, ಇದು ಐಎಸ್ಎಸ್ಗೆ ಕಾರ್ಗೊ ಸೇವೆ ಒದಗಿಸುತ್ತದೆ. ಇದು ಮಾನವಯುಕ್ತ ಡ್ರಾಗಾನ್ ಅನ್ನು ಕೂಡಾ ಅಭಿವೃದ್ಧಿಪಡಿಸಲಿದೆ. 2008ರಲ್ಲಿ ಸ್ಪೇಸ್ ಎಕ್ಸ್ ಮೊಟ್ಟಮೊದಲ ಖಾಸಗಿ ಉಪಗ್ರಹವನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ದ್ರವ ಇಂಧನದ ರಾಕೆಟ್ ಫಾಲ್ಕನ್-1 2008ರಲ್ಲಿ ಕಕ್ಷೆ ಸೇರಿತ್ತು. ಇದು ಮೊಟ್ಟಮೊದಲ ಖಾಸಗಿ ಬಾಹ್ಯಾಕಾಶ ಕಂಪನಿಯಾಗಿದೆ. 2010ರಲ್ಲಿ ಇದು ಡ್ರಾಗಾನ್ ಅನ್ನು ಯಶಸ್ವಿಯಾಗಿ ಮರುಬಳಕೆ ಮಾಡಿತ್ತು.

Comment