IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

60 ಮೆಗಾವ್ಯಾಟ್ ಸಾಮಥ್ರ್ಯದ ತುರೈಲ್ ಜಲವಿದ್ಯುತ್ ಯೋಜನೆಗೆ ಮೋದಿ ಚಾಲನೆ

60 ಮೆಗಾವ್ಯಾಟ್ ಸಾಮಥ್ರ್ಯದ ತುರೈಲ್ ಜಲವಿದ್ಯುತ್ ಯೋಜನೆಗೆ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರು ಮಿಜೋರಾಂ ರಾಜಧಾನಿ ಐಜ್ವಾಲ್ನಲ್ಲಿ 60 ಮೆಗಾವ್ಯಾಟ್ ಸಾಮಥ್ರ್ಯದ ತುರೈಲ್ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಿದರು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮಿಜೋರಾಂನಲ್ಲಿ ಸರ್ಕಾರದಿಂದ ನಿರ್ಮಾಣವಾದ ಮೊಟ್ಟಮೊದಲ ಬೃಹತ್ ಜಲವಿದ್ಯುತ್ ಯೋಜನೆಯಾಗಿದೆ.

ಇದು ರಾಜ್ಯದ ಸಾಮಾಜಿಕ- ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಮಿಜೋರಾಂ ಕೂಡಾ ಸಿಕ್ಕಿಂ ಮತ್ತು ತ್ರಿಪುರಾ ಬಳಿಕ ಅಧಿಕ ವಿದ್ಯುತ್ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದಂತಾಗಿದೆ.

ಪ್ರಮುಖ ಅಂಶಗಳು

ತುರೈಲ್ ಜಲವಿದ್ಯುತ್ ಯೋಜನೆಯನ್ನು ತುರೈಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದು ಬರಕ್ ನದಿಯ ಉಪನದಿಯಾಗಿದೆ. ಯೋಜನೆಗೆ 1998ರಲ್ಲಿ ಅನುಮೋದನೆ ಸಿಕ್ಕಿತ್ತು. ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಇದಕ್ಕೆ ಅನುಮೋದನೆ ನೀಡಿದ್ದರು. ಇದು ಕೇಂದ್ರ ಸರ್ಕಾರಿ ವಲಯದ ಯೋಜನೆಯಾಗಿದ್ದು, 1302 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದನ್ನು ಈಶಾನ್ಯ ವಿದ್ಯುತ್ ನಿಗಮ ವಿದ್ಯುತ್ ಸಚಿವಾಲಯದಡಿ ಕಾರ್ಯಗತಗೊಳಿಸಿದೆ.

ಜಲವಿದ್ಯುತ್ ಯೋಜನೆಯು 251 ದಶಲಕ್ಷ ಯೂನಿಟ್ ವಿದ್ಯುತ್ತನ್ನು ಪ್ರತಿ ವರ್ಷ ಉತ್ಪಾದಿಸಲಿದೆ. 45 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೇಖರಣೆಯಾದ ನೀರಿನಿಂದ ಇದು ಉತ್ಪಾದನೆಯಾಗಲಿದೆ. ಇದು ರಾಜ್ಯದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಅನುವು ಮಾಡಿಕೊಡುತ್ತದೆ ಹಾಗೂ ಮೀನುಗಾರಿಕೆ ಅಭಿವೃದ್ದಿಗೆ ಕೂಡಾ ನೆರವಾಗಲಿದೆ.

Comment