IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕೆಲ್ಪರ್ ಸೌರಮಂಡಲದಲ್ಲಿ ಮತ್ತೊಂದು ಹೊಸ ಗ್ರಹ ಪತ್ತೆ

ಕೆಲ್ಪರ್ ಸೌರಮಂಡಲದಲ್ಲಿ ಮತ್ತೊಂದು ಹೊಸ ಗ್ರಹ ಪತ್ತೆ

ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಕೆಪ್ಲರ್-90 ಸೌರ ವ್ಯವಸ್ಥೆಯಲ್ಲಿ ಎಂಟನೇ ಗ್ರಹವನ್ನು ಪತ್ತೆ ಮಾಡಿದೆ. ಕೆಪ್ಲರ್ 90 ಎನ್ನುವುದು ಸೂರ್ಯನನ್ನು ಹೋಲುವ ನಕ್ಷತ್ರವಾಗಿದ್ದು, ಭೂಮಿಯಿಂದ, 2545 ಬೆಳಕಿನ ವರ್ಷದಷ್ಟು ದೂರದಲ್ಲಿದೆ. ನೂತನ ಗ್ರಹಕ್ಕೆ ಕೆಪ್ಲರ್ 90 ಎಂದು ಹೆಸರಿಸಲಾಗಿದೆ.

ಕ್ರಿಸ್ತೋಪರ್ ಶಲ್ಲೆ ಮತ್ತು ಆಂಡ್ರೈ ವೆಂಡರ್ಬರ್ಗ್ ಅವರನ್ನೊಳಗೊಂಡ ಸಂಶೋಧಕರ ತಂಡ ಎಂಟನೇ ಗ್ರಹವನ್ನು ಪತ್ತೆ ಮಾಡಿದ್ದು, ಗೂಗಲ್ ಮೆಷಿನ್ ಲರ್ನಿಂಗ್ ಟೆಕ್ನಾಲಜಿ ಸಹಾಯದಿಂದ ಸಂಗ್ರಹಿಸಿದ ಮಾಹಿತ ಆಧಾರದಲ್ಲಿ ನಾಸಾದ ಕೆಪ್ಲರ್ ಬಾಹ್ಯಾಕಾಶ ಟೆಲೆಸ್ಕೋಪ್ ಮೂಲಕ ಪತ್ತೆ ಮಾಡಿದೆ.

ಮೆಷಿನ್ ಲರ್ನಿಂಗ್: ಇದು ಕೃತಕ ಬುದ್ಧಿಮತ್ತೆ ಕುರಿತ ವ್ಯವಸ್ಥೆಯಾಗಿದೆ. ಇದು ಗ್ರಹಗಳ ಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಹಾಗೂ ಮೆಷಿನ್ ಕಲಿಕಾ ದೃಷ್ಟಿಕೋನವು ಮಾನವನ ಮೆದುಳಿನ ನರಮಂಡಲವನ್ನು ಹೋಲುವ ವ್ಯವಸ್ಥೆಯಾಗಿದೆ. ಇಲ್ಲಿ ಕಂಪ್ಯೂಟರ್ಗಳು ಗ್ರಹಗಳನ್ನು ಗುರುತಿಸುವ ಕೌಶಲವನ್ನು ಹೊಂದಿದ್ದು, ಬೆಳಕಿನ ಅಧ್ಯಯನದಿಂದ ಇದು ಸಾಧ್ಯವಾಗಲಿದೆ. ಕೆಪ್ಲರ್ ಅಂಕಿ ಅಂಶಗಳನ್ನು ಆಧರಿಸಿ ಸೌರಮಂಡಲದಿಂದ ಹೊರತಾದ ಗ್ರಹಗಳನ್ನು ಇದು ಪತ್ತೆ ಮಾಡುತ್ತದೆ. ಗ್ರಹಗಳು ನಕ್ಷತ್ರದ ಎದುರು ಹಾದುಹೋಗುವಾಗ ಬೆಳಕಿನ ಪ್ರಖರತೆ ಕಡಿಮೆಯಾಗುತ್ತದೆ.

ಪ್ರಮುಖ ಅಂಶಗಳು

ಎಂಟನೇ ಗ್ರಹವಾದ ಕೆಪ್ಲರ್ 90 ಹೊಸದಾಗಿ ಪತ್ತೆಯಾಗಿದ್ದು, ಒಂದು ನಕ್ಷತ್ರ ಹೊಂದಿರಬಹುದಾದ ಗ್ರಹಗಳ ಸಂಖ್ಯೆಯನ್ನು ಅಂದಾಜಿಸಲು ನೆರವಾಗಲಿದೆ. ವಿಜ್ಞಾನಿಗಳು ಎಂಟಕ್ಕಿಂತ ಹೆಚ್ಚು ಗ್ರಹಗಳಿರುವ ನಕ್ಷತ್ರವನ್ನು ಇನ್ನೂ ಪತ್ತೆ ಮಾಡಬೇಕಾಗಿದೆ. ಕೆಪ್ಲರ್-90 ಕೂಡಾ ಸೂರ್ಯಮಂಡಲದ ವ್ಯವಸ್ಥೆಯನ್ನೇ ಹೋಲುತ್ತಿದೆ.

ಕೆಪ್ಲರ್ 90 ಕೆಪ್ಲರ್-90 ನಕ್ಷತ್ರದ ಅತ್ಯಂತ ಹೊರಗಿನ ವಲಯದ ಹಾಗೂ ಎಂಟನೇ ಗ್ರಹವಾಗಿದೆ. ಸೂರ್ಯನಿಂದ ಭೂಮಿ ಹೊಂದಿರುವಷ್ಟೇ ಅಂತರ ನಕ್ಷತ್ರ ಹಾಗೂ ಗ್ರಹದ ನಡುವೆ ಇದೆ. ಇದು 14.4 ದಿನಗಳಿಗೊಮ್ಮೆ ನಕ್ಷತ್ರದ ಕಕ್ಷೆಯ ಸುತ್ತ ಸುತ್ತುತ್ತದೆ. ಇದು ಭೂಮಿಗಿಂತ ಸುಮಾರು 30 ಪಟ್ಟು ದೊಡ್ಡದಾಗಿದೆ. ಇದರ ಸರಾಸರಿ ಉಷ್ಣತೆ 425 ಡಿಗ್ರಿ ಸೆಲ್ಷಿಯಸ್ ಎಂದು ಅಂದಾಜಿಸಲಾಗಿದೆ.

Comment