IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕಬೋನ್ ಪೋಲಿಯೊ ಮುಕ್ತ ದೇಶ

ಕಬೋನ್ ಪೋಲಿಯೊ ಮುಕ್ತ ದೇಶ

ವಿಶ್ವ ಆರೋಗ್ಯ ಸಂಸ್ಥೆಯು ಕಬೋನ್ ದೇಶವನ್ನು ಪೋಲಿಯೊಮುಕ್ತ ದೇಶ ಎಂದು ಘೋಷಿಸಿದೆ. ಕೇಂದ್ರ ಆಫ್ರಿಕಾ ದೇಶದಲ್ಲಿ ಯಾವುದೇ ಹೊಸ ಪ್ರಕರಣಗಳು ಅಥವಾ ಶಂಕಿತ ಪ್ರಕರಣಗಳು ವರದಿಯಾಗದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ಆದರೆ ರೋಗಲಕ್ಷಣದ ಸಾಧ್ಯತೆಯ ಬಗ್ಗೆ ನಿರಂತರವಾಗಿ ಕಣ್ಗಾವಲು ಇಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮಾಡಿದೆ.

ಪೋಲಿಯೊ

ಪೋಲಿಯೊ ವೈರಸ್ ಸೋಂಕುರೋಗವಾಗಿದ್ದು, ಪೋಲಿಯೊ ವೈರಸ್ ಇದಕ್ಕೆ ಕಾರಣವಾಗುತ್ತದೆ. ಇದು ಚಿಕ್ಕಮಕ್ಕಳಿಗೆ ದಾಳಿ ಮಾಡಿ ಕಾಯಂ ಪಾಶ್ರ್ವವಾಯುವಿಗೆ ಕಾರಣವಾಗುತ್ತದೆ. ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಇದು ಮುಖ್ಯವಾಗಿ ಮೌಖಿಕವಾಗಿ ಅಂದರೆ ಮಲಿನ ನೀರು ಅಥವಾ ಆಹಾರದ ಮೂಲಕ ಹರಡುತ್ತದೆ. ಇದು ದೇಹವನ್ನು ಪ್ರವೇಶಿಸಿದ ಬಳಿಕ, ಕರುಳಿನಲ್ಲಿ ಅಧಿಕಸಂಖ್ಯೆಯಲ್ಲಿ ಬೆಳೆಯುತ್ತದೆ. ಇಲ್ಲಿಂದ ಇಡೀ ನರಮಂಡಲಕ್ಕೆ ದಾಳಿ ಮಾಡಿ ಪಾಶ್ರ್ವವಾಯುವಿಗೆ ಕಾರಣವಾಗುತ್ತದೆ.

ಇದರ ಆರಂಭಿಕ ಲಕ್ಷಣಗಳೆಂದರೆ, ಜ್ವರ, ಸುಸ್ತು, ತಲೆನೋವು, ವಾಂತಿ, ಕುತ್ತಿಗೆ ಸೆಟೆದುಕೊಳ್ಳುವಿಕೆ, ಮೊಣಕಾಲು ನೋವು. ಕೆಲವು ಪ್ರಕರಣದಲ್ಲಿ ಕಾಯಂ ಪಾಶ್ರ್ವವಾಯುವಿಗೂ ಇದು ಕಾರಣವಾಗುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದನ್ನು ಲಸಿಕೆ ಮೂಲಕ ತಡೆಯಲು ಸಾಧ್ಯವಿದೆ.

ಜಾಗತಿಕ ಪೋಲಿಯೊ

ಜಾಗತಿಕ ಮಹಾಮಾರಿಯ ಪ್ರಮಾಣ 1988ಕ್ಕೆ ಹೋಲಿಸಿದರೆ ಶೇಕಡ 99ರಷ್ಟು ಇಳಿದಿದೆ. ಆಗ ಇದು 125 ದೇಶಗಳಲ್ಲಿ ಸಾಂಕ್ರಾಮಿಕ ರೋಗವಾಗಿದ್ದು, 3.5 ಲಕ್ಷ ಪೋಲಿಯೊ ಪ್ರಕರಣಗಳು ವರದಿಯಾಗಿದ್ದವು. ಇದೀಗ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲಾಗಿದ್ದು, ಅಪ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಇದು ಸೀಮಿತವಾಗಿದೆ. 2016ರಲ್ಲಿ ಎರಡೂ ದೇಶಗಳಲ್ಲಿ ತಲಾ ಎರಡು ಪ್ರಕರಣಗಳು ದಾಖಲಾಗಿವೆ ಹಾಗೂ ವಿಶ್ವಾದ್ಯಂತ 37 ಪ್ರಕರಣಗಳು ವರದಿಯಾಗಿವೆ.

Comment