IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ವಲಸೆ ಜನಸಂಖ್ಯೆ ಭಾರತದಲ್ಲೇ ಅತ್ಯಧಿಕ

ವಲಸೆ ಜನಸಂಖ್ಯೆ ಭಾರತದಲ್ಲೇ ಅತ್ಯಧಿಕ

ವಿಶ್ವಸಂಸ್ಥೆಯ ಜಾಗತಿಕ ವಲಸೆ ವರದಿ (2018) ಅನ್ವಯ ಭಾರತದ ವಲಸೆ ಜನಸಂಖ್ಯೆ ವಿಶ್ವದಲ್ಲೇ ಅತ್ಯಧಿಕ. ಸುಮಾರು 15.6 ಲಕ್ಷ ಮಂದಿ ಭಾರತೀಯರು ವಿಶ್ವದ ವಿವಿಧೆಡೆಗಳಲ್ಲಿ ವಾಸವಿದ್ದಾರೆ ಎಂದು ವರದಿ ಹೇಳಿದೆ. ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ಭಾರತೀಯ ವಲಸೆ ಜನಸಂಖ್ಯೆ ಒಟ್ಟು ಅಂತರರಾಷ್ಟ್ರೀಯ ವಲಸೆಗಾರರ ಶೇಕಡ 6ರಷ್ಟಿದೆ. ಅಂತರರಾಷ್ಟ್ರೀಯವಾಗಿ ಸುಮಾತು 243 ದಶಲಕ್ಷ ಮಂದಿ ವಲಸೆಗಾರರು ಇದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅಂದರೆ ವಿಶ್ವದಲ್ಲಿ 243 ಲಕ್ಷ ಮಂದಿ ತಾವು ಹುಟ್ಟಿದ ದೇಶದಿಂದ ಹೊರದೇಶಗಳಲ್ಲಿ ವಾಸವಿದ್ದಾರೆ.

ವರದಿಯ ಪ್ರಕಾರ, ಮೆಕ್ಸಿಕೋ ಅತ್ಯಧಿಕ ವಲಸೆ ಜನರನ್ನು ಹೊಂದಿದ ಎರಡನೇ ರಾಷ್ಟ್ರವಾಗಿದೆ. ರಷ್ಯಾ, ಚೀನಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಂತರದ ಸ್ಥಾನಗಳಲ್ಲಿವೆ. ಭಾರತೀಯ ವಲಸೆಗಾರರಲ್ಲಿ ಗಲ್ಫ್ ದೇಶಗಳಲ್ಲಿ ಅತ್ಯಧಿಕ ಮಂದಿ ವಾಸವಿದ್ದು, ಸುಮಾರು 35 ಲಕ್ಷ ಮಂದಿ ಅಂದರೆ ಭಾರತದ ವಲಸೆ ಜನಸಂಖ್ಯೆಯ ಶೇಕಡ 22ರಷ್ಟು ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ವಾಸವಿದ್ದಾರೆ.

2010ನೇ ಇಸ್ವಿಯಲ್ಲಿ ದಾಖಲಾದ ಪ್ರಮಾಣಕ್ಕೆ ಹೋಲಿಸಿದರೆ, ಜಾಗತಿಕ ಮಟ್ಟದಲ್ಲಿ ವಲಸೆ ಜನಸಂಖ್ಯೆ ಶೇಕಡ 10ರಷ್ಟು ಹೆಚ್ಚಿದೆ. ಅಂದರೆ ವಿಶ್ವದಲ್ಲಿ ಇರುವ 730 ಕೋಟಿ ಮಂದಿಯ ಪೈಕಿ 30ಕ್ಕೆ ಒಬ್ಬರು ವಲಸೆಗಾರರಾಗಿದ್ದಾರೆ. ಆದಾಗ್ಯೂ ವಿಶ್ವದ ಒಟ್ಟು ಜನಸಂಖ್ಯೆಯನ್ನು ಲೆಕ್ಕಹಾಕಿದರೆ, ವಲಸೆ ಸಂಖ್ಯೆಯ ಹೆಚ್ಚಳ ಸಾಮಾನ್ಯವಾಗಿ ತಟಸ್ಥವಾಗಿದೆ. 2010ರಲ್ಲಿ 3.2ರಷ್ಟಿದ್ದ ಪ್ರಗತಿದರ 2015ರಲ್ಲಿ 3.3ಕ್ಕೆ ಹೆಚ್ಚಿದೆ.

ಗಮನಾರ್ಹ ಅಂಶವೆಂದರೆ, ಉದ್ಯೋಗದ ವಯಸ್ಸಿನ ಅಂದರೆ 20-64 ವರ್ಷ ವಯೋಮಿತಿಯವರು ವಲಸೆ ಜನರಲ್ಲಿ ಅತ್ಯಧಿಕ ಅಂದರೆ ಶೇಕಡ 72ರಷ್ಟು ಪಾಲು ಹೊಂದಿದ್ದಾರೆ. ಅಂತರರಾಷ್ಟ್ರೀಯ ವಲಸೆಗಾರರಲ್ಲಿ ಅರ್ಧದಷ್ಟು ಮಂದಿ, ಏಷ್ಯಾದಲ್ಲಿ ಹುಟ್ಟಿದವರು. ಅದರಲ್ಲೂ ಮುಖ್ಯವಾಗಿ ಭಾರತ, ಚೀನಾ ಮತ್ತು ಇತರ ದಕ್ಷಿಣ ಏಷ್ಯಾ ದೇಶಗಳ ಮೂಲದವರು.

1970 ದಶಕದಿಂದೀಚೆಗೆ ಅಮೆರಿಕ ವಲಸೆ ಜನರ ಗಮ್ಯ ತಾಣವಾಗುತ್ತಿದೆ. ಅಮೆರಿಕದಲ್ಲಿ ವಾಸವಿರುವ ವಿದೇಶಿ ಸಂಜಾತ ವ್ಯಕ್ತಿಗಳ ಸಂಖ್ಯೆ 12 ದಶಲಕ್ಷ ಇದ್ದರೆ, ಪ್ರಮಾಣ 2015ರಲ್ಲಿ 46.6 ದಶಲಕ್ಷ ಮಂದಿ ಆಗಿದ್ದಾರೆ. ಪೈಕಿ ಸುಮಾರು 20 ಲಕ್ಷ ಮಂದಿ ಭಾರತೀಯ ಮೂಲದವರು.

ಭಾರತೀಯ ವಲಸೆ ಜನರ ಪೂಕಿ 35 ಲಕ್ಷ ಮಂದಿ ಯುಎಇ, 20 ಲಕ್ಷ ಮಂದಿ ಅಮೆರಿಕ, 19 ಲಕ್ಷ ಮಂದಿ ಸೌದಿ ಅರೇಬಿಯಾ, 10 ಲಕ್ಷ ಮಂದಿ ಕುವೈತ್, 70 ಸಾವಿರ ಮಂದಿ ಓಮನ್, 70 ಸಾವಿರ ಮಂದಿ ಬ್ರಿಟನ್ ಹಾಗೂ 60 ಸಾವಿರ ಮಂದಿ ಕತಾರ್ನಲ್ಲಿ ವಾಸವಿದ್ದಾರೆ.

ವಿಶ್ವದ ಏಳು ಅಗ್ರ ವಲಸೆ ತಾಣಗಳೆಂದರೆ ಅಮೆರಿಕ (46.6 ದಶಲಕ್ಷ), ಜರ್ಮನಿ (12 ದಶಲಕ್ಷ), ರಷ್ಯಾ (11.6 ದಶಲಕ್ಷ), ಸೌದಿ ಅರೇಬಿಯಾ (10 ದಶಲಕ್ಷ), ಬ್ರಿಟನ್ (80 ದಶಲಕ್ಷ), ಕೆನಡಾ (78 ದಶಲಕ್ಷ).

ಅಗ್ರ ಏಳು ವಲಸೆ ಜನರ ದೇಶಗಳೆಂದರೆ ಭಾರತ (15.6 ದಶಲಕ್ಷ), ಮೆಕ್ಸಿಕೊ (12.3 ದಶಲಕ್ಷ), ರಷ್ಯಾ (10.6), ಚೀನಾ (00.5), ಬಾಂಗ್ಲಾದೇಶ 7.2, ಪಾಕಿಸ್ತಾನ 5.9 ಮತ್ತು ಉಕ್ರೇನ್ 5.8 ದಶಲಕ್ಷ.

ಅಂತರರಾಷ್ಟ್ರೀಯ ವಲಸೆ ಸಂಸ್ಥೆ

ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಎನ್ನುವುದು ಅಂತರ ಸರ್ಕಾರಿ ಸಂಸ್ಥೆಯಾಗಿದ್ದು, ಸರ್ಕಾರಗಳಿಗೆ ಮತ್ತು ವಲಸೆಗಾರರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತದೆ. ಇದರಲ್ಲಿ ನಿರಾಶ್ರಿತರು, ದೇಶೀಯವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳು ಮತ್ತು ವಲಸೆ ಕಾರ್ಮಿಕರು ಸೇರುತ್ತಾರೆ.

ಅಂತರರಾಷ್ಟ್ರೀಯ ವಲಸೆ ಸಂಸ್ಥೆ 1951ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದು ಯೂರೋಪ್ ಅಂತರ ಸರ್ಕಾರ ಸಮಿತಿಯಾಗಿ ಇದು ಅಸ್ತಿತ್ವಕ್ಕೆ ಬಂದಿದೆ. ಇದು ಎರಡನೇ ಜಾಗತಿಕ ಯುದ್ಧದಲ್ಲಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಪುನರ್ವಸತಿ ನೀಡುವ ಉದ್ದೇಶದಿಂದ ಸ್ಥಾಪನೆಯಾಗಿದೆ. ಇದಕ್ಕೆ ವಿಶ್ವಸಂಸ್ಥೆ ಸಾಮನ್ಯಸಭೆಯ ಕಾಯಂ ವೀಕ್ಷಕ ಸ್ಥಾನ 1992ರಲ್ಲಿ ಲಭಿಸಿದೆ. ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಮತ್ತು ವಿಶ್ವಸಂಸ್ಥೆ ನಡುವೆ ಒಪ್ಪಂದಕ್ಕೆ 1996ರಲ್ಲಿ ಸಹಿ ಮಾಡಲಾಗಿದೆ.

ಅಂತರರಾಷ್ಟ್ರೀಯ ವಲಸೆ ಸಂಸ್ಥೆ ನಾಲ್ಕು ವಿಸ್ತø ಕ್ಷೇತ್ರಗಳನ್ನು ಹೊಂದಿದ್ದು, ವಲಸೆ ಮತ್ತು ಅಭಿವೃದ್ಧಿ, ವಲಸೆಗಾರರಿಗೆ ಸೌಲಭ್ಯ ಕಲ್ಪಿಸುವುದು, ವಲಸೆ ನಿಯಂತ್ರಣ ಮತ್ತು ಬಲಾತ್ಕಾರದ ವಲಸೆಯನ್ನು ತಡೆಯುವುದು ಹೀಗೆ ನಾಲ್ಕು ಕ್ಷೇತ್ರಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. 166 ಸದಸ್ಯ ದೇಶಗಳು ಇದ್ದು, 8 ದೇಶಗಳು ವೀಕ್ಷಕ ಸ್ಥಾನಮಾನವನ್ನು ಹೊಂದಿವೆ. ಇದು 100 ದೇಶಗಳಲ್ಲಿ ಕಚೇರಿಗಳನ್ನು ಹೊಂದಿದ್ದು, 9500 ಮಂದಿ ಸಿಬ್ಬಂದಿ ಹಾಗೂ 450 ಅಧಿಕಾರಿಗಳು ವಿಶ್ವಾದ್ಯಂತ ಇರುತ್ತಾರೆ.

Comment