IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಎಫ್‍ಎಸ್‍ಓಸಿ ತಂತ್ರಜ್ಞಾನ: ಅಲ್ಫಾಬೆಟ್ ಜತೆ ಆಂಧ್ರ ಒಪ್ಪಂದ

ಎಫ್‍ಎಸ್‍ಓಸಿ ತಂತ್ರಜ್ಞಾನ: ಅಲ್ಫಾಬೆಟ್ ಜತೆ ಆಂಧ್ರ ಒಪ್ಪಂದ

ಆಂಧ್ರಪ್ರದೇಶ ಸರ್ಕಾರ ಆಲ್ಫಾಬೆಟ್ ಇನ್ಕಾರ್ಪೊರೇಷನ್ ಗೂಗಲ್ ಎಕ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡು ಉಚಿತ ಬಾಹ್ಯಾಕಾಶ ಸಂವಹನ ತಂತ್ರಜ್ಞಾನವನ್ನು ಭಾರತಕ್ಕೆ ತರಲು ಉದ್ದೇಶಿಸಿದೆ.

ಎಫ್ಎಸ್ಓಸಿ ತಂತ್ರಜ್ಞಾನ ಯೋಜನೆಯ ಮುಖ್ಯ ಉದ್ದೇಶವೆಂದರೆ ಉನ್ನತ ಗುಣಮಟ್ಟದ ಮತ್ತು ಕೈಗೆಟುವ ದರದಲ್ಲಿ ಡಿಜಿಟಲ್ ಸೇವೆಯನ್ನು ಇಂಟರ್ನೆಟ್ ಮೂಲಕ ರಾಜ್ಯ ಸರ್ಕಾರದ ಫೈಬರ್ ಗ್ರಿಡ್ ಯೋಜನೆಗಳಿಗೆ ಒದಗಿಸುವುದು.

ಎಫ್ಎಸ್ಓಸಿ ತಂತ್ರಜ್ಞಾನವನ್ನು ಬಳಸಿಕೊಂಡು ಆಂಧ್ರಪ್ರದೇಶ ಸರ್ಕಾರ ಉತ್ತಮ ಬ್ಯಾಂಡ್ವಿಡ್ತ್ ಡಾಟಾ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಇದನ್ನು ಪ್ರತಿ ಕುಟುಂಬಕ್ಕೆ ಹಾಗೂ ಬುಡಕಟ್ಟು ಮನೆಗಳಿಗೆ ಒದಗಿಸಲು ಉದ್ದೇಶಿಸಲಾಗಿದೆ. ಗೂಗಲ್ ಎಕ್ಸ್ ಲ್ಯಾನ್ನೊಂದಿಗೆ ಎಫ್ಎಸ್ಓಸಿಯನ್ನು ಆಂಧ್ರಪ್ರದೇಶದಲ್ಲಿ ಒದಗಿಸಲು ಮಾಡಿಕೊಂಡ ಒಪ್ಪಂದ ಅನ್ವಯ, ಆಂಧ್ರಪ್ರದೇಶ ವಿಶ್ವದಲ್ಲೇ ಹೈಸ್ಪೀಡ್ ಇಂಟರ್ನೆಟ್ ವೈರ್ಲೆಸ್ ಸಂಪರ್ಕವನ್ನು ಒದಗಿಸುವ ರಾಜ್ಯ ಎಮಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು 20 ಕಿಲೋಮೀಟರ್ ದೂರದವರೆಗೆ 20 ಜಿಬಿಪಿಎಸ್ ವೇಗದ ಇಂಟರ್ನೆಟ್ ಸೇವೆ ಒದಗಿಸಬಲ್ಲದು.

ಒಪ್ಪಂದದ ಅನ್ವಯ, ಎಕ್ಸ್ ಲ್ಯಾಬ್ಗಳು ಆರಂಭಿಕ ಹಂತದಲ್ಲಿ ರಾಜ್ಯ ಸರ್ಕಾರಕ್ಕೆ 2000 ಎಫ್ಎಸ್ಓಸಿ ಲಿಂಕ್ ಒದಗಿಸಲಿದೆ. ಇದರ ಜತೆಗೆ ಎಕ್ಸ್ ಎಂಜಿನಿಯರಿಂಗ್ ತಜ್ಞರನ್ನು ಎಲ್ಲ ಸ್ಥಳಗಳಲ್ಲಿ ನಿಯೋಜಿಸಲಿದೆ. ಇವರು ಸರ್ಕಾರಿ ಅಧಿಕಾರಿಗಳ ಜತೆ ಸೇರಿ ಎಫ್ಎಸ್ಓಸಿ ಲಿಂಕ್ ನಿಯೋಜಿಸಲು ಸೂಕ್ತವಾದ ಸ್ಥಳಗಳನ್ನು ಆಯ್ಕೆ ಮಾಡುವರು. ಇದು ಆಂಧ್ರಪ್ರದೇಶ ಸರ್ಕಾರದ ಜತೆ ಸ್ಥಳೀಯ ಕಚೇರಿಯನ್ನೂ ಸ್ಥಾಪಿಸಲಿದ್ದು, ಯೋಜನೆಯ ಸುಲಲಿತ ಅನುಷ್ಠಾನಕ್ಕೆ ಅಗತ್ಯ ಬೆಂಬಲವನ್ನು ನೀಡಲಿದೆ.

ಮಹತ್ವ

ಮಹತ್ವದ ಪಾಲುದಾರಿಕೆಯಿಂದಾಗಿ, ರಾಜ್ಯದ ಡಿಜಿಟಲ್ ಮೂಲಸೌಕರ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಸಿಗಲಿದೆ. ಇದು ಪ್ರತ್ಯೇಕಿತ ಕಣಿವೆ ಪ್ರದೇಶಗಳನ್ನು, ಅರಣ್ಯ ಪ್ರದೇಶವನ್ನು, ನದಿ ಹಾಗೂ ರೈಲ್ವೆ ಕ್ರಾಸಿಂಗ್ಗಳಲ್ಲಿ ಸೌಲಭ್ಯ ಕಲ್ಪಿಸುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಫೈಬರ್ ಗ್ರಿಡ್ ಯೋಜನೆ

ಆಂಧ್ರಪ್ರದೇಶ ಸರ್ಕಾರದ ಫೈಬರ್ ಗ್ರಿಡ್ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ ಪ್ರತಿ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಒದಗಿಸಲು ಉದ್ದೇಶಿಸಿದೆ. ಇದು 1.45 ಕೋಟಿ ಕುಟುಂಬಗಳಿಗೆ ಮತ್ತು 60 ಸಾವಿರ ಶಾಲೆಗಳಿಗೆ ಇಂಟರ್ನೆಟ್ ಸಂಪರ್ಕ ಒದಗಿಸುವ ಗುರಿ ಹೊಂದಿದೆ. ಇದರ ಜತೆಗೆ 12198 ಪಂಚಾಯ್ತಿಗಳು, 10 ಸಾವಿರ ಸರ್ಕಾರಿ ಕಚೇರಿಗಳು, 670 ಮಂಡಲ ಕಚೇರಿಗಳು, 96 ಪೌರಸಂಸ್ಥೆಗಳು, 14 ಮಹಾನಗರ ಪಾಲಿಕೆಗಳು, 6000 ಆರೋಗ್ಯ ಕೇಂದ್ರಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಿದೆ.

Comment