IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಝೆಡ್‍ಎಸ್‍ಐನಿಂದ 157 ಅನ್ಯ ದಾಳಿಕೋರ ಪ್ರಾಣಿಗಳ ಪಟ್ಟಿ

ಝೆಡ್‍ಎಸ್‍ಐನಿಂದ 157 ಅನ್ಯ ದಾಳಿಕೋರ ಪ್ರಾಣಿಗಳ ಪಟ್ಟಿ

ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ (ಝೆಡ್ಎಸ್) ಮೊಟ್ಟಮೊದಲ ಬಾರಿಗೆ 157 ಅನ್ಯ ದಾಳಿಕೋರ ಪ್ರಾಣಿ ಪ್ರಬೇಧವನ್ನು ಪಟ್ಟಿ ಮಡಿದೆ. ಇದು ದಾಳಿಕೋರ ಮೈಕ್ರೋಬ್ಗಳಿಂದ ಹೊರತಾಗಿದೆ.

ರಾಷ್ಟ್ರೀಯ ದಾಳಿಕೋರ ಅನ್ಯ ಪ್ರಭೇಧಗಳ ಸಮ್ಮೇಳನದ ವೇಳೆ ಪಟ್ಟಿಯನ್ನು ಪ್ರಕಟಿಸಲಾಯಿತು. ಝೆಡ್ಎಸ್ ಹಾಗೂ ಬಟಾನಿಕಲ್ ಸರ್ವೇ ಆಫ್ ಇಂಡಿಯಾ ಜಂಟಿಯಾಗಿ ಸಮ್ಮೇಳನವನ್ನು ಆಯೋಜಿಸಿದ್ದವು.

ದಾಳಿಕೋರ ಪ್ರಾಣಿ ಪ್ರಬೇಧಗಳು

ದಾಳಿಕೋರ ಪ್ರಬೇಧದ ಪ್ರಾಣಿಗಳು ಸಾಮಾನ್ಯವಾಗಿ ಉದ್ದೇಶಪೂರ್ವಕ ಅಥವಾ ಆಕಸ್ಮಿಕವಾಗಿ ತಮ್ಮ ಸಹಜ  ಸ್ಥಳಗಳಿಂದ ಹೊರಹಾಕಲ್ಪಟ್ಟಾಗ, ಇವು ಬೇರೆಡೆ ಆಕ್ರಮಣಕಾರಿಯಾಗುತ್ತವೆ ಹಾಗೂ ಇದು ಪರಿಸರ ಸಮತೋಲನಕ್ಕೆ ಧಕ್ಕೆಯಾಗಲು ಕಾರಣವಾಗುತ್ತವೆ. ದಾಳಿಕೋರ ಪ್ರಾಣಿ ಪ್ರಭೇಧಗಳು ಜೀವವೈವಿಧ್ಯ ಹಾಗೂ ಮಾನವ ಕಲ್ಯಾಣಕ್ಕೆ ಅಪಾಯಕಾರಿಯಾಗಿವೆ. ಇವು ಕೃಷಿ ಹಾಗೂ ಜೀವವೈವಿಧ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ.

ಇಂಥ ದಾಳಿಕೋರ ಪ್ರಬೇಧಗಳ ಸಾಮಾನ್ಯ ಲಕ್ಷಣಗಳೆಂದರೆ ಕ್ಷಿಪ್ರ ಪುನರತ್ಪತ್ತಿ ಮತ್ತು ಅಭಿವೃದ್ಧಿ, ಅತ್ಯಧಿಕ ಖಿನ್ನತೆಯ ಸಾಮಥ್ರ್ಯ, ವಿವಿಧ ಆಹಾರ ವಿಧಾನದಲ್ಲಿ ಉಳಿದುಕೊಳ್ಳುವ ಸಾಮಥ್ರ್ಯ. ಜತೆಗೆಇದು ಹೊಸ ವಾತಾವರಣಕ್ಕೆ ಸುಲಭವಾಗಿ ಒಗ್ಗಿಕೊಳ್ಳುವ ಸಾಮಥ್ರ್ಯ ಹೊಂದಿವೆ.

ಪ್ರಮುಖ ಅಂಶಗಳು

ಝೆಡ್ಎಸ್ ಒಟ್ಟು 157 ಪ್ರಬೇಧಗಳನ್ನು ಪಟ್ಟಿ ಮಾಡಿದ್ದು, ಪೈಕಿ 58 ನೆಲ ಮತ್ತು ಜಲ ಸಂಪನ್ಮೂಲದಲ್ಲಿ ಇವೆ. 99 ಪ್ರಬೇಧಗಳು ಸಾಗರ ಪರಿಸರದಲ್ಲಿ ಕಂಡುಬರುತ್ತವೆ. 58 ಆಕ್ರಮಣಕಾರಿ ಪ್ರಬೇಧಗಳು ನೆಲ ಮತ್ತು ಸಿಹಿ ನೀರಿನಲ್ಲಿ ಕಂಡುಬರುತ್ತವೆ. ಇದರಲ್ಲಿ 19 ಮೀನು ಪ್ರಬೇಧ, 31 ಆರ್ಥೊಪಾಡ್, 3 ಮೊಲ್ಯುಸೆಸ್ ಹಾಗೂ ಹಕ್ಕಿಗಳು, ಒಂದು ಸರೀಸೃಪ ಹಾಗೂ 2 ಸಸ್ತನಿಗಳು ಸೇರಿವೆ.

ಅನ್ಯ ಆಕ್ರಮಣಕಾರಿ ಪ್ರಬೇಧಗಳಲ್ಲಿ ಅಸಿಡಿಯಾ ಗರಿಷ್ಠ ಅಂದರೆ 31ರಷ್ಟಿದೆ. ಉಳಿದಂತೆ ಆರ್ಥೊಪಾಡ್ ಪ್ರಬೇಧಗಳು 26, ಅನ್ನೆಲಿಡ್ಸ್ 16, ಚಿಂದಾರಿಯನ್ 11, ಬ್ರೈಝೋನ್ಸ್ 6, ಮೊಲಾಸ್ಕಸ್ 5, ಕ್ಟೆನೊಪೊರಾ 3 ಹಾಗೂ ಎಂಟೋಪ್ರೋಕ್ಟಾದ ಒಂದು ಪ್ರಬೇಧ ಸೇರಿದೆ.

ಅಕಾಟಿನಾ ಫ್ಯುಲಿಕಾ (ಆಫ್ರಿಕಲ್ ಆಪಲ್ ಬಸವನಹುಳು): ಇದು ಅತ್ಯಂತ ಆಕ್ರಮಣಕಾರಿಯಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮೊಟ್ಟಮೊದಲು ಕಾಣಿಸಿಕೊಂಡಿದೆ. ಇದು ದೇಶಾದ್ಯಂತ ಇದ್ದು, ಹಲವು ದೇಶಿ ಪ್ರಬೇಧಗಳ ನಾಶಕ್ಕೆ ಇದು ಕಾರಣವಾಗಿದೆ.

ಪರಾಕಸೊಸ್ ಮಾರ್ಜಿನಟಸ್ (ಪಪಯಾ ಮೆಲೆ ಬಗ್): ಇದು ಕೇಂದ್ರ ಅಮೆರಿಕದ ಮೆಕ್ಸಿಕೊ ಮೂಲದ ಪ್ರಭೇಧ. ಇದು ಅಸ್ಸಾಂ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪಪ್ಪಾಯಿ ನಾಶಕ್ಕೆ ಕಾರಣವಾಗಿದೆ.

ಓಎನಾಕೊಕಸ್ ಸೊನೆಲೋಪ್ಸಿಸ್ (ಹತ್ತಿ ಹೇನು): ಇದು ಉತ್ತರ ಅಮೆರಿಕ ಮೂಲದ್ದು. ಇದು ಡೆಕ್ಕನ್ ಪ್ರಾಂತ್ಯದಲ್ಲಿ ಹತ್ತಿ ಬೆಳೆ ನಾಶಕ್ಕೆ ಕಾರಣವಾಗಿದೆ.

ಫೆರಿಗೊಪಿಲಿಕ್ಟಸ್ ಪರ್ಡಾಲೀಸ್ (ಅಮೆಜಾನ್ ಸೈಲಿಫಿನ್ ಕ್ಯಾಟ್ಫಿಶ್): ಇದು ಕೊಲ್ಕತ್ತಾದ ಜೌಗು ಪ್ರದೇಶದ ಮೀನು ಪ್ರಬೇಧ ನಾಶಕ್ಕೆ ಕಾರಣವಾಗಿದೆ.

Comment