IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಈಶಾನ್ಯ ರಾಜ್ಯಗಳ ಕೈಗಾರಿಕೆಗಳಿಗೆ ಹೂಡಿಕೆ ಸಬ್ಸಿಡಿ

ಈಶಾನ್ಯ ರಾಜ್ಯಗಳ ಕೈಗಾರಿಕೆಗಳಿಗೆ ಹೂಡಿಕೆ ಸಬ್ಸಿಡಿ

ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಮಿತಿ, ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯ ಪ್ರದೇಶಗಳಲ್ಲಿ ಆರಂಭವಾಗುವ ಕೈಗಾರಿಕೆಗಳಲ್ಲಿ ಮಾಡುವ ಹೂಡಿಕೆಗೆ ಸಬ್ಸಿಡಿ ನೀಡಿ ಕೇಂದ್ರ ಸರ್ಕಾರ ಸೂಕ್ತ ಆದೇಶ ಹೊರಡಿಸಿದೆ. ಪ್ರಸ್ತಾವನೆ ಅನ್ವಯ ಒಟ್ಟು 264.67 ಕೊಟಿ ರೂಪಾಯಿ ನೆರವು ಸಿಗಲಿದೆ.

ಇದಕ್ಕೆ ಕೇಂದ್ರ ಸರ್ಕಾರದ ಬಂಡವಾಳ ಹೂಡಿಕೆ ಸಬ್ಸಿಡಿ ಯೋಜನೆಯಡಿ ಒಪ್ಪಿಗೆ ನೀಡಲಾಗಿದೆ. ಕೇಂದ್ರೀಯ ಬಂಡವಾಳ ಹೂಡಿಕೆ ಉತ್ತೇಜನ ಪ್ರೋತ್ಸಾಹಕ ನೀತಿ (ಸಿಸಿಐಎಸ್ಎಸ್) ಅನ್ವಯ ವಿಶೇಷ ನೀತಿ ಆಯೋಜಿಸಲಾಗಿದೆ. ಕೇಂದ್ರ ಸರ್ಕಾರವು ಯೋಜನೆಯನ್ನು ಈಶಾನ್ಯ ಪ್ರದೇಶ ಕೈಗಾರಿಇಕಾ ಉತ್ತೇಜನಾ ಯೋಜನೆಯಡಿ ಸೇರಿಸಲು ಸೆರಿಸಲು ನಿರ್ಧರಿಸಿದೆ.

ಮಹತ್ವ

ಕೈಗಾರಿಕೆಗಳಿಗೆ ಸಬ್ಸಿಡಿ ಮಂಜೂರು ಮಾಡುವುದರಿಂದ ಹಾಲಿ ಕಾರ್ಯಾಚರಣೆ ನಡೆಸುತ್ತಿರುವ ಘಟಕಗಳಿಗೆ ಹೆಚ್ಚಿನ ವಿಶ್ವಾಸಸಿಗಲಿದೆ ಮತ್ತು ಎಂಟು ರಾಜ್ಯಗಳಲ್ಲಿ ಇದಕ್ಕೆ ವಿಪಲವಾದ ಅವಕಾಶವಿದೆ. ಸಿಕ್ಕಿಂಗೆ ಕೂಡಾ ಸೌಲಭ್ಯ ಸಿಗುತ್ತದೆ. 5000 ಕೋಟಿ ರೂಪಾಯಿವರೆಗಿನ ಹೂಡಿಕೆ ಪ್ರಸ್ತವಾಗಳನ್ನು ಪರಿಶೀಲಿಸಲು ಉದ್ದೇಶಿಸಲಾಗಿದೆ. ಯೋಜನೆಗಳಿಗೆ ಅಂತಿಮವಾಗಿ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ನಿರ್ಧರಿಸಿದೆ.

Comment