IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ರಾಷ್ಟ್ರಿಯ ಆಯುಷ್ ಮಿಷನ್ ಮುಂದುವರಿಕೆಗೆ ಒಪ್ಪಿಗೆ

ರಾಷ್ಟ್ರಿಯ ಆಯುಷ್ ಮಿಷನ್ ಮುಂದುವರಿಕೆಗೆ ಒಪ್ಪಿಗೆ

ನ್ಯಾಷನಲ್ ಆಯುಷ್ ಮಿಷನ್‍ನ ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಯನ್ನು 2017ರ ಏಪ್ರಿಲ್‍ನಿಂದ 2020ರ ವರೆಗೆ ವಿಸ್ತರಿಸಲು ಮತ್ತು ಇದಕ್ಕೆ 2400 ಕೋಟಿ ರೂಪಾಯಿ ಅನುದಾನ ನಿಗದಿಪಡಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಆಯುಷ್ ಸೇವೆಗಳನ್ನು ಮಿತವೆಚ್ಚದಲ್ಲಿ ಮುಂದಿನ ಮೂರು ವರ್ಷಗಳ ವರೆಗೆ ನೀಡಲು ಒಪ್ಪಿಗೆ ನೀಡಲಾಯಿತು.

ರಾಷ್ಟ್ರೀಯ ಆಯುಷ್ ಮಿಷಿನ್ (ಎನ್‍ಎಎಮ್)

ರಾಷ್ಟ್ರೀಯ ಆಯುಷ್ ಮಿಷಿನ್ (ಎನ್‍ಎಎಮ್) ಯೋಜನೆಯನ್ನು 2014ರಲ್ಲಿ ಆರಂಭಿಸಲಾಗಿದೆ. ಇದನ್ನು ಆಯುಷ್ ಸಚಿವಾಲಯ ಅನುಷ್ಠಾನಕ್ಕೆ ತಂದಿದೆ. ಇದರ ಮುಖ್ಯ ಉದ್ದೇಶವೆಂದರೆ, ಆಯುಷ್ ಸೇವೆಗಳು ಮಿತವೆಚ್ಚದಲ್ಲಿ ಲಭ್ಯವಾಗುವಂತೆ ಮಾಡುವುದು. ಇದು ಆರೋಗ್ಯ ಕ್ಷೇತ್ರಗಳಲ್ಲಿನ ಅಂತರವನ್ನು ಕಡಿಮೆ ಮಾಡುವ ಉದ್ದೇಸ ಹೊಂದಿದ್ದು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ನೀಡುತ್ತಿರುವ ಆಯುಷ್ ಸೇವೆ ಮತ್ತು ಶಿಕ್ಷಣವನ್ನು ಬೆಂಬಲಿಸುವ ನಿಟ್ಟಿನಲ್ಲಿ ಪ್ರಮುಖವಾಗಲಿದೆ. ಅದರಲ್ಲೂ ಮುಖ್ಯವಾಗಿ ಆರೋಗ್ಯ ಸೇವೆಗಳು ಲಭ್ಯವಾಗದ ಸ್ಥಳಗಳಲ್ಲಿ ಕೈಗೆಟುಕುವ ದರದಲ್ಲಿ ಆಯುಷ್ ವೈದ್ಯಕೀಯ ಸೇವೆಯನ್ನು ನೀಡುವುದು ಈ ಯೋಜನೆಯ ಉದ್ದೇಶ.

ರಾಷ್ಟ್ರೀಯ ಆಯುಷ್ ಮಿಷಿನ್ (ಎನ್‍ಎಎಮ್) ಮುಖ್ಯವಾಗಿ ಭಾರತದ ಸಾಂಪ್ರದಾಯಿಲ ಹಾಗೂ ಪಾರಂಪರಿಕ ವೈದ್ಯಶಾಸ್ತ್ರವನ್ನು ಪುನರುಜ್ಜೀವನಗೊಳಿಸುವುದು. ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಇದರ ವ್ಯಾಪ್ತಿಯಲ್ಲಿ ಬರುತ್ತದೆ. ಈ ವೈದ್ಯಕೀಯ ಶಾಸ್ತ್ರಗಳನ್ನು ಜ್ಞಾನಭಂಡಾರ ಹಾಗೂ ರೋಗ ಬರದಂತೆ ತಡೆಯುವ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡುವ ಶಾಸ್ತ್ರ ಎಂದು ಪರಿಗಣಿಸಲಾಗಿದೆ.

ನಿರೀಕ್ಷಿತ ಪರಿಣಾಮ

ಆಯುಷ್ ಸೇವೆಗಳು ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ದೊರಕುವಂತೆ ಮಾಡುವುದು ಇದರ ಮುಖ್ಯ ಉದ್ದೇಶ. ಈ ಕ್ಷೇತ್ರದಲ್ಲಿ ಉತ್ತಮ ಔಷಧಿ ಮತ್ತು ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಒದಗಿಸುವುದು ಇದರ ಉದ್ದೇಶ. ಆಯುಷ್ ಶಿಕ್ಷಣವನ್ನು ಸುಸಜ್ಜಿತ ಹಾಗೂ ವಿಸ್ತøತ ಮಟ್ಟದಲ್ಲಿ ನೀಡುವುದು ಇದರ ಉದ್ದೇಶ. ಜತೆಗೆ ಇಂಥ ಸಂಸ್ಥೆಗಳನ್ನು ಹೆಚ್ಚಿಸುವ ಗುರಿಯನ್ನೂ ಈ ರಾಷ್ಟ್ರೀಯ ಆಯುಷ್ ಮಿಷಿನ್ (ಎನ್‍ಎಎಮ್) ಯೋಜನೆ ಹೊಂದಿದೆ.

ಸುಧಾರಿತ ಗುಣಮಟ್ಟದ ಆಯುಷ್ ಸೇವೆಗಳ ಲಭ್ಯತೆಯನ್ನು ಎಲ್ಲ ಗುಣಮಟ್ಟದ ಫಾರ್ಮಸಿಗಳಲ್ಲಿ ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದು. ಇದರ ಜತೆಗೆ ಕಾನೂನು ಜಾರಿ ವ್ಯವಸ್ಥೆಯನ್ನೂ ಬಿಗಿಗೊಳಿಸುವುದು ಯೋಜನೆಯ ಗುರಿಯಾಗಿದೆ. ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದನ್ನು ಜನ ಸ್ವೀಕರಿಸುವಂತೆ ಮಾಡುವುದು ಕೂಡ ಈ ಆರೋಗ್ಯ ವ್ಯವಸ್ಥೆಯ ಮುಖ್ಯ ಉದ್ದೇಶ. ಗಿಡಮೂಲಿಕೆಗಳ ಕಚ್ಚಾವಸ್ತುಗಳಿಗೆ ದೇಶೀಯ ಬೇಡಿಕೆ ಹೆಚ್ಚಿಸುವುದು ಮತ್ತು ರಫ್ತು ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ.

Comment