IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ತಂಬಾಕು ಉತ್ಪನ್ನಗಳ ಮೇಲೆ ದೊಡ್ಡ ಎಚ್ಚರಿಕೆ ಚಿತ್ರ: ಆದೇಶ ಅಮಾನ್ಯ

ತಂಬಾಕು ಉತ್ಪನ್ನಗಳ ಮೇಲೆ ದೊಡ್ಡ ಎಚ್ಚರಿಕೆ ಚಿತ್ರ: ಆದೇಶ ಅಮಾನ್ಯ

ತಂಬಾಕು ಉತ್ಪನ್ನಗಳ ಪ್ಯಾಕ್ಗಳ ಒಟ್ಟು ಗಾತ್ರದ ಶೇಕಡ 85ರಷ್ಟು ಭಾಗದಲ್ಲಿ ದೊಡ್ಡ ಚಿತ್ರವನ್ನು ಒಳಗೊಂಡ ಎಚ್ಚರಿಕೆ ಸಂದೇಶ ಇರಬೇಕು ಎಂದು ಕಡ್ಡಾಯಪಡಿಸುವ ತಿದ್ದುಪಡಿ ಮಸೂದೆಯನ್ನು ಕರ್ನಾಟಕ ಹೈಕೋರ್ಟ್ ಅಮಾನ್ಯ ಮಾಡಿದೆ. ಇದು ಸಂವಿಧಾನಾತ್ಮಕ ವಿಧಿವಿಧಾನಗಳ ಉಲ್ಲಂಘನೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಎಚ್ಚರಿಕೆ ನಿಯಮದ ಅನ್ವಯ ಶೇಕಡ 40ರಷ್ಟು ಸಚಿತ್ರ ಎಚ್ಚರಿಕೆಯನ್ನು ತಂಬಾಕು ಉತ್ಪನ್ನಗಳ ಪ್ಯಾಕೇಟ್ಗಳಲ್ಲಿ ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಸಂಬಂಧ ಹಿಂದೆ ಇದ್ದ ನಿಯಮಾವಳಿ ಮುಂದುವರಿಯಲಿದೆ.

ದೇಶದ ವಿವಿಧ ಕಡೆಗಳಿಂದ ವಿವಿಧ ತಂಬಾಕು ಉತ್ಪಾದನಾ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ತಂಬಾಕು ಉತ್ಪನ್ನಗಳ ಪ್ಯಾಕ್ಗಳ ಒಟ್ಟು ಗಾತ್ರದ ಶೇಕಡ 85ರಷ್ಟು ಭಾಗದಲ್ಲಿ ದೊಡ್ಡ ಚಿತ್ರವನ್ನು ಒಳಗೊಂಡ ಎಚ್ಚರಿಕೆ ಸಂದೇಶ ಇರಬೇಕು ಎಂದು ಕಡ್ಡಾಯಪಡಿಸುವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

ಹಿನ್ನೆಲೆ

ಸಿಗರೇಟ್ ಕಂಪನಿಗಳು ಮತ್ತು ಇತರ ತಂಬಾಕು ಉತ್ಪನ್ನ ಕಂಪನಿಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ತಿದ್ದುಪಡಿ ನಿಯಮಾವಳಿ (ಸಿಓಟಿಪಿಎ)-2014 2016 ಏಪ್ರಿಲ್ನಿಂದ ಜಾರಿಗೆ ಬಂದಿತ್ತು. ಇದು ತಂಬಾಕು ಉತ್ಪನ್ನಗಳ ಪ್ಯಾಕ್ಗಳ ಒಟ್ಟು ಗಾತ್ರದ ಶೇಕಡ 85ರಷ್ಟು ಭಾಗದಲ್ಲಿ ದೊಡ್ಡ ಚಿತ್ರವನ್ನು ಒಳಗೊಂಡ ಎಚ್ಚರಿಕೆ ಸಂದೇಶ ಇರಬೇಕು ಎಂದು ಕಡ್ಡಾಯಪಡಿಸಿತ್ತು. ಮುನ್ನ ಎಚ್ಚರಿಕೆ ಸಂದೇಶದ ಗಾತ್ರ ಒಟ್ಟು ಪ್ಯಾಕೇಜ್ ಸ್ಥಳಾವಕಾಶದ ಶೇಕಡ 40 ಇರಬೇಕು ಎಂದು ಸೂಚಿಸಲಾಗಿತ್ತು. ತಂಬಾಕು ಉತ್ಪನ್ನಗಳ ಪ್ಯಾಕ್ಗಳ ಒಟ್ಟು ಗಾತ್ರದ ಶೇಕಡ 85ರಷ್ಟು ಭಾಗದಲ್ಲಿ ದೊಡ್ಡ ಚಿತ್ರವನ್ನು ಒಳಗೊಂಡ ಎಚ್ಚರಿಕೆ ಸಂದೇಶ ಇರಬೇಕು ಎಂದು ಕಡ್ಡಾಯಪಡಿಸುವ ತಿದ್ದುಪಡಿ ನಿಯಮಾವಳಿ ವಿರುದ್ಧದ ಎಲ್ಲ ಪ್ರಕರಣಗಲನ್ನು ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್ಗೆ ವರ್ಗಾಯಿಸಿತ್ತು. ಎಲ್ಲ ಅರ್ಜಿಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡುವಂತೆ ಹೈಕೋರ್ಟ್ಗೆ ಸೂಚಿಸಲಾಗಿತ್ತು.

ಪ್ರಕರಣ

ಭಾರತದ ತಂಬಾಕು ಸಂಸ್ಥೆ ಮತ್ತು ಇತರ ಹಲವು ಕಾಸಗಿ ಸಂಘ ಸಂಸ್ಥೆಗಳು, ತಂಬಾಕು ಉತ್ಪನ್ನಗಳ ಪ್ಯಾಕ್ಗಳ ಒಟ್ಟು ಗಾತ್ರದ ಶೇಕಡ 85ರಷ್ಟು ಭಾಗದಲ್ಲಿ ದೊಡ್ಡ ಚಿತ್ರವನ್ನು ಒಳಗೊಂಡ ಎಚ್ಚರಿಕೆ ಸಂದೇಶ ಇರಬೇಕು ಎಂದು ಕಡ್ಡಾಯಪಡಿಸುವ ತಿದ್ದುಪಡಿ ನಿಯಮಾವಳಿಗೆ ವಿರೋಧ ವ್ಯಕ್ತಪಡಿಸಿ, ನಿಯಮಾವಳಿಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. ಇದು ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಕಳ್ಳಸಾಗಾಣಿಕೆಗೆ ನೆರವಾಗಲಿದೆ ಎಂದು ಅರ್ಜಿದಾರರು ವಾದಿಸಿದ್ದರು.

ತಂಬಾಕು ಉದ್ಯಮದ ಸ್ಥಿತಿ

ತಂಬಾಕಿನ ಅಪಾಯಗಳನ್ನು ಅನಗತ್ಯ ಕಾರಣಗಳಿಗೆ ಭಯಾನಕವಾಗಿ ಬಿಂಬಿಸಲಾಗುತ್ತಿದೆ ಎಂಬ ವಾದವನ್ನು ತಂಬಾಕು ಉದ್ಯಮ ವಾದಿಸುತ್ತಾ ಬಂದಿತ್ತು. ಯಾವುದೇ ವೈಜ್ಞಾನಿಕ ಅಧ್ಯಯನ ಅಥವಾ ಹಿನ್ನೆಲೆ ಇಲ್ಲದೇ ಅನಗತ್ಯವಾಗಿ ಇದನ್ನು ಬಿಂಬಿಸಲಾಗುತ್ತಿದೆ ಎಂದು ವಾದಿಸಿತ್ತು. ಜಾಗತಿಕವಾಗಿ ಸರಾಸರಿ ಶೇಕಡ 30ರಷ್ಟು ಪ್ಯಾಕೇಜ್ ಸ್ಥಳಾವಕಾಶದಲ್ಲಿ ಮಾತ್ರ ಎಚ್ಚರಿಕೆಯ ಸಂದೇಶ ನೀಡಬೇಕು ಎಂಬ ಕಾನೂನು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಧಿಕ ಸಿಗರೇಟ್ ಸೇದುವ ದೇಶಗಳಾದ ಅಮೆರಿಕ, ಚೀನಾ ಹಾಗೂ ಜಪಾನ್ನಲ್ಲಿ ಕೇವಲ ಬರಹದ ಸಂದೇಶ ಮಾತ್ರ ಇದೆ ಎಂದು ವಾದಿಸಿದ್ದವು. ದೇಶಗಳು ಒಟ್ಟು ಸಿಗರೇಟ್ ಸೇವನೆಯ ಶೇಕಡ 51ರಷ್ಟು ಭಾಗವನ್ನು ಬಳಸುತ್ತವೆ.

ಹೈಕೋಟ್ ತೀರ್ಪು

ಕೇಂದ್ರ ಆರೋಗ್ಯ ಸಚಿವಾಲಯವು ಇಂಥ ನಿಯಮಾವಳಿಯನ್ನು ರೂಪಿಸಲು ಯಾವುದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ. ಆರೋಗ್ಯ ಸಚಿವಾಲಯಕ್ಕೆ ಇಂಥ ನಿಯಮಾವಳಿ ರೂಪಿಸುವ ಅಧಿಕಾರ ಇದ್ದರೂ, ಅಂಥ ಕಾನೂನು ಸಂವಿಧಾನಾತ್ಮಕ ಮೌಲ್ಯಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ 19 (19) (ಜಿ) ವಿಧಿಯ ಅನ್ವಯ ಯಾವುದೇ ವಹಿವಾಟನ್ನು ನಡೆಸಲು ಅತಾರ್ಕಿಕ ನಿರ್ಬಂಧಗಳನ್ನು ವಿಧಿಸಲು ಅವಕಾಶವಿಲ್ಲ ಎಂದು ಕೋರ್ಟ್ ತೀರ್ಪು ಸ್ಪಷ್ಟಪಡಿಸಿದೆ.

ತಂಬಾಕು ಬೆಳೆಗಾರರ ದೃಷ್ಟಿಯಿಂದ ಇಂಥ ನಿಯಮಾವಳಿಯು ಸಂವಿಧಾನದ 14ನೇ ವಿಧಿ ಅನ್ವಯ ನೀಡಿರುವ ಸಮನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಏಕೆಂದರೆ ಚಿತ್ರ ಹಾಗೂ ಸಂದೇಶಕ್ಕೆ ಯಾವುದೇ ಹೋಲಿಕೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನಿಯಮಾವಳಿಗಳನ್ನು ಜನರನ್ನು ಹೆದರಿಸುವ ಸಲುವಾಗಿ ಮಾಡಬಾರದು. ಅಧಿಸೂಚನೆ ಹೊರಡಿಸುವ ಸಲುವಾಗಿ ಮಾಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Comment