IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ತುಂಗಾ ತೀರದುದ್ದಕ್ಕೂ ಪ್ಲಾಸ್ಟಿಕ್ ನಿಷೇಧ

ತುಂಗಾ ತೀರದುದ್ದಕ್ಕೂ ಪ್ಲಾಸ್ಟಿಕ್ ನಿಷೇಧ

ಪ್ಲಾಸ್ಟಿಕ್ ವಸ್ತುಗಳಾದ ಕ್ಯಾರಿ ಬ್ಯಾಗ್, ಪ್ಲೇಟ್ ಹಾಗೂ ಚಮಚಾ ಮಾರಾಟ ಹಾಗೂ ದಾಸ್ತಾನನ್ನು ಹರಿದ್ವಾರ ಮತ್ತು ಹೃಷಿಕೇಶದಲ್ಲಿ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಆದೇಶ ನೀಡಿದೆ. ಇದರ ಜತೆಗೆ ಉತ್ತರಕಾಶಿಯ ಮೇಲ್ಭಾಗದವರೆಗೂ ಗಂಗಾನದಿಯುದ್ದಕ್ಕೂ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಎನ್ಜಿಟಿ ಆದೇಶ ಹೊರಡಿಸಿದೆ.

ಇದು ಗಂಗಾನದಿಯ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಹಾಗೂ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಪರಿಸರವಾದಿ ಎಂ.ಸಿ.ಮೆಹ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ಆದೇಶ ನೀಡಿದೆ.

ಪ್ರಮುಖ ಅಂಶಗಳು

ಆದೇಶವನ್ನು ಧಿಕ್ಕರಿಸಿದರೆ 5000 ರೂಪಾಯಿ ದಂಡ ವಿಧಿಸಲು ಕೂಡಾ ಎನ್ಜಿಟಿ ನಿರ್ಧರಿಸಿದೆ. ಜತೆಗೆ ಇದನ್ನು ನಿಯಂತ್ರಿಸಲು ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೂಡಾ ಎನ್ಜಿಟಿ ಸೂಚಿಸಿದೆ. ಹಿಂದೆ ಎನ್ಜಿಟಿ ಸಂಬಂಧ ಆದೇಶ ಹೊರಡಿಸಿದ್ದರೂ, ನಿಟ್ಟಿನಲ್ಲಿ ಆಗಿರುವ ಪ್ರಯತ್ನಗಳು ಶೂನ್ಯ ಎಂಬ ಕಾರಣಕ್ಕೆ ಮತ್ತೆ ಹೊಸದಾಗಿ ಸೂಚನೆ ನೀಡಲಾಗಿದೆ. ಪ್ಲಾಸ್ಟಿಕ್ ಅತಿಯಾದ ಬಳಕೆ ಹಾಗೂ ಬಳಕೆಯಾದ ಪ್ಲಾಸ್ಟಿಕ್ಕನ್ನು ಗಂಗಾನದಿಯಲ್ಲಿ ಬಿಸಾಕುವುದು ಪವಿತ್ರ ನದಿ ಎನಿಸಿಕೊಂಡಿರುವ ಗಂಗೆಯ ಮಲಿತನತೆಗೆ ಕಾರಣವಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ)ಯನ್ನು 2010ರಲ್ಲಿ ಸ್ಥಾಪಿಸಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ- 2010ಕ್ಕೆ ಅನುಗುಣವಾಗಿ ಇದನ್ನು ಸೃಷ್ಟಿಸಲಾಗಿದೆ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಹಾಗೂ ನ್ಯಾಯಸಮ್ಮತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಎನ್ಜಿಟಿ ಸ್ಥಾಪನೆಯಾಗಿದೆ. ಇದರ ಜತೆಗೆ ಅರಣ್ಯ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲ ಬಳಕೆಗೆ ಕೂಡಾ ಇದು ನೆರವಾಗುತ್ತದೆ. ಇದು ಪರಿಸರ, ಅರಣ್ಯ ಮತ್ತು ಜನರಿಗೆ ಹಾಗೂ ಆಸ್ತಿಪಾಸ್ತಿಗಳಿಗೆ ಆಗುವ ಹಾನಿಯನ್ನು ತಡೆಯಲು ನೆರವಾಗುತ್ತದೆ. ನಿರ್ಲಕ್ಷಿತ ಪರಿಸರ ಬದ್ಧತೆ ಮತ್ತು ಮೂಲಸೌಕರ್ಯ ಯೋಜನೆಗಳ ಕೊರತೆ ಬಗ್ಗೆ ಕೂಡಾ ಎನ್ಜಿಟಿ ಗಮನ ಹರಿಸುತ್ತದೆ.

ಎನ್ಇಟಿಗೆ ಸಹಜ ನ್ಯಾಯದ ಆಧಾರವಿದ್ದು, 1908ರಲ್ಲಿ ರಚನೆಯಾದ ಅಪರಾಧ ದಂಡಸಂಹಿತೆ ಅನ್ವಯ ಅನುಸರಿಸುವ ವಿಧಿವಿಧಾನಗಳಿಗೆ ಅನುಗುಣವಾಗಿ ಇದು ವಿಚಾರಣೆ ನಡೆಸುವುದಿಲ್ಲ. ಇದು ಪರಿಸರ ಸಂಬಂಧಿ ವಿಚಾರಗಳ ಬಗ್ಗೆ ದೂರುಗಳು ಬಂದಾಗ ಆರು ತಿಂಗಳ ಒಳಗಾಗಿ ಇದನ್ನು ಬಗೆಹರಿಸಲು ವ್ಯವಸ್ಥೆ ಅನುಕೂಲವಾಗಿದೆ. ಎನ್ಜಿಟಿಯ ಪ್ರಮುಖ ವಿಚಾರಣೆಗಳು ದೆಹಲಿಯಲ್ಲಿ ನಡೆಯುತ್ತವೆ. ಇದರ ಜತೆಗೆ ಭೋಪಾಲ್, ಪುಣೆ, ಚೆನ್ನೈ, ಕೊಲ್ಕತ್ತಾ ಮತ್ತಿತರ ಕಡೆಗಳಲ್ಲಿ ಕೂಡಾ ಎನ್ಜಿಟಿ ಕಾರ್ಯ ನಿರ್ವಹಿಸುತ್ತಿದೆ.

Comment