IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಹೈದಬಾರಾಬಾದ್‍ನಲ್ಲಿ ಇಟ್ಕೂ ಸ್ಥಾಪನೆಗೆ ಯುನೆಸ್ಕೊ ಜತೆ ಒಪ್ಪಂದ

ಹೈದಬಾರಾಬಾದ್‍ನಲ್ಲಿ ಇಟ್ಕೂ ಸ್ಥಾಪನೆಗೆ ಯುನೆಸ್ಕೊ ಜತೆ ಒಪ್ಪಂದ

ಕೇಂದ್ರ ಸರ್ಕಾರವು ಯುನೆಸ್ಕೊ ಸಹಯೋಗದಲ್ಲಿ ತೆಲಂಗಾಣದ ರಾಜಧಾನಿ ಹೈದಬಾರಾದ್ನಲ್ಲಿ ಅಂತರರಾಷ್ಟ್ರೀಯ ತರಬೇತಿ ಕೇಂದ್ರವನ್ನು ಸಾಗರಶಾಸ್ತ್ರ ಕಾರ್ಯಾಚರಣೆಗಾಗಿ ತೆರೆಯಲು ಒಪ್ಪಂದ ಮಾಡಿಕೊಂಡಿದೆ. ಇದನ್ನು ಕೆಟಗರಿ 2 ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ.

ಒಪ್ಪಂದದ ಮುಖ್ಯ ಉದ್ದೇಶವೆಂದರೆ, ಹಿಂದೂ ಮಹಾಸಾಗರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ದೇಶಗಳ ಸಾಮಥ್ರ್ಯವೃದ್ಧಿಗೆ ಪೂರಕವಾದ ತರಬೇತಿ ಕೇಂದ್ರವನ್ನು ಅಭಿವೃದ್ಧಿಪಡಿಸುವುದು. ಇದರ ಜತೆಗೆ ಹಿಂದೂ ಮಹಾಸಾಗರದ ಗಡಿಯಲ್ಲಿರುವ ಆಫ್ರಿಕನ್ ದೇಶಗಳಿಗೆ ಮತ್ತು ಅಟ್ಲಾಂಟಿಕ್ ಸಾಗರ ಪ್ರದೇಶದ ಸಣ್ಣ ದ್ವೀಪಗಳಿಗೆ ಯುನೆಸ್ಕೊ ಚೌಕಟ್ಟಿನಡಿ ಸೌಲಭ್ಯವನ್ನು ಕಲ್ಪಿಸಲಾಗುವುದು.

ಸಾಗರಶಾಸ್ತ್ರ ಕಾರ್ಯಾಚರಣೆ

ಇದು ವ್ಯವಸ್ಥಿತ ಸಾಗರಶಾಸ್ತ್ರ ಅಧ್ಯಯನಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುವ ಯೋಜನೆಯಾಗಿದುದ, ವಿವಿಧ ಸೇವಾ ವಲಯಗಳಿಗೆ ಅಂದರೆ ಮೀನುಗಾರರು, ಶಿಪ್ಪಿಂಗ್, ಬಂದರು, ವಿಕೋಪ ನಿರ್ವಹಣೆ, ಪರಿಸರ, ಕರಾವಳಿ ರಾಜ್ಯಗಳು, ನೌಕಾಪಡೆ, ಕರಾವಳಿ ಕಾವಲು ಪಡೆ, ಸಾಗರ ತೀರದ ಉದ್ದಿಮೆಗಳು ತಮ್ಮ ದೈನಂದಿನ ಚಟುವಟಿಕೆಗಳನ್ನು ನೆರವೇರಿಸಲು ನೆರವಾಗುವುದು ಇದರ ಉದ್ದೇಶ.

ಯುನೆಸ್ಕೊದ ಸಿ2ಸಿ

ಯುನೆಸ್ಕೊ ನೆರವಿನಿಂದ ಸ್ಥಾಪನೆಯಾಗುವ ಕೇಂದ್ರವು ಸಾಮಥ್ರ್ಯ ಅಭಿವೃದ್ಧಿ ಮತ್ತು ತರಬೇತಿಯಲ್ಲಿ ನೆರವು ನೀಡುವ ಉದ್ದೇಶ ಹೊಂದಿದೆ. ಇದರ ಜತೆಗೆ ಜ್ಞಾನ ಹಂಚಿಕೆ ಮತ್ತು ಮಾಹಿತಿಗಳ ವಿನಿಮಯ ಮಾಡಿಕೊಳ್ಳುವ ಗುರಿ ಹೊಂದಿದೆ. ಇದು ಯುನೆಸ್ಕೊಗೆ ಮೌಲ್ಯಯುತ ಸಂಪನ್ಮೂಲಗಳನ್ನು ಒದಗಿಸಲು ನೆರವಾಗುವುದಲ್ಲದೇ ಅಂತರ ಸರ್ಕಾರಿ ಸಾಗರಶಾಸ್ತ್ರ ಆಯೋಗಕ್ಕೆ ಯುನೆಸ್ಕೊ ಕಾರ್ಯಚಟುವಟಿಕೆಗಳ ಮೇಲೆ ಕಣ್ಣಿಗೆ ಕಾಣುವಂಥ ಪರಿಣಾಮವನ್ನು ಬೀರುವ ನಿಟ್ಟಿನಲ್ಲಿ ಇದು ಕಾರ್ಯನಿರ್ವಹಿಸಲಿದೆ.

ಮಹತ್ವ

ಕೇಂದ್ರವು ಭಾರತ ದೇಶ ಹಿಂದೂ ಮಹಾಸಾಗರದಲ್ಲಿ ಅಗ್ರಗಣ್ಯ ದೇಶವಾಗಿ ಹೊರಹೊಮ್ಮಲು ಅವಕಾಶವನ್ನು ಸೃಷ್ಟಿಸಿಕೊಡಲಿದೆ. ಇದು ಪರಸ್ಪರ ಸಹಕಾರವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಭಾರತ ಹಾಗೂ ಹಿಂದೂ ಮಹಾಸಾಗರ ವಲಯದ ಇತರ ದೇಶಗಳ ನಡುವೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆಗೂ ಅವಕಾಶ ಮಾಡಿಕೊಡಲಿದೆ. ಸಾಗರ ಹಾಗೂ ಕರಾವಳಿಯ ಸುಸ್ಥಿರತೆಗೆ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ತಾಂತ್ರಿಕ ಹಾಗೂ ವ್ಯವಸ್ಥಾಪನೆ ಸಾಮಥ್ರ್ಯವನ್ನು ಹೆಚ್ಚಿಸಲು ಇದು ನೆರವಾಗಲಿದೆ. ಜತೆಗೆ ಸಾಗರ ಪ್ರದೇಶದ ನೈಸರ್ಗಿಕ ವಿಕೋಪಗಳನ್ನು ಎದುರಿಸುವ ನಿಟ್ಟಿನಲ್ಲೂ ಇದು ನೆರವಾಗಲಿದೆ. ಇದು ಸುಸ್ಥಿರ ಅಬಿವೃದ್ಧಿ ಗುರಿ-14 ಸಾಧಿಸುವ ನಿಟ್ಟಿನಲ್ಲಿ ಕೂಡಾ ಮಹತ್ವದ ಹೆಜ್ಜೆಯಾಗಿದೆ. ಇದರ ಜತೆಗೆ ಸಾಗರ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧೀಗೆಎ ಕೂಡಾ ಇದು ಪೂರಕವಾಗಲಿದೆ. ಇದು ಕನಿಷ್ಠ ಅಭಿವೃದ್ಧೀ ಹೊಂದಿದ ದೇಶಗಳ ಬಗೆಗಿನ ಬದ್ಧತೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲೂ ಮಹತ್ವದ್ದಾಗಿದೆ. ಇದರ ಜತೆಗೆ ಅಭಿವೃದ್ಧಿಶೀಲ ದೇಶಗಲು ಮತ್ತು ದ್ವೀಪರಾಷ್ಟ್ರಗಳ ಅಬಿವೃದ್ಧಿಗೂ ಕೊಡುಗೆ ನೀಡಲಿದೆ.

Comment