IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

2000 ವರೆಗಿನ ವಹಿವಾಟಿಗೆ ಎಂಡಿಆರ್ ಶುಲ್ಕ ಸರ್ಕಾರ ಭರಿಸಲಿದೆ

2000 ವರೆಗಿನ ವಹಿವಾಟಿಗೆ ಎಂಡಿಆರ್ ಶುಲ್ಕ ಸರ್ಕಾರ ಭರಿಸಲಿದೆ

ಡೆಬಿಟ್ ಕಾರ್ಡ್ಗಳು, ಭಿಮ್ ಯುಪಿಐ ಅಥವಾ ಆಧಾರ್ ಸಂಬಂಧಿತ ಪಾವತಿ ವ್ಯವಸ್ಥೆಯಡಿ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕವನ್ನು ಸರ್ಕಾರವೇ ಭರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಡಿಜಿಟಲ್ ವಹಿವಾಟನ್ನು ಉತ್ತೇಜಿಸುವುದು ಇದರ ಉದ್ದೇಶ. ಇದು 2018 ಜನವರಿ 1 ರಿಂದ ಎರಡು ವರ್ಷಗಳವರೆಗೆ ಅಸ್ತಿತ್ವದಲ್ಲಿರುತ್ತದೆ. ಇದನ್ನು ಬ್ಯಾಂಕ್ಗಳಿಗೆ ಸರ್ಕಾರ ಮರುಪಾವತಿ ಮಾಡುತ್ತದೆ.

ಇಂಥ ವಹಿವಾಟಿನ ವೆಚ್ಚ ಸಂರಚನೆ

ಇದಕ್ಕಾಗಿ ನಿಯೋಜಿಸಲಾಗಿರುವ ಉನ್ನತ ಮಟ್ಟದ ಸಮಿತಿಯು ಇಂಥ ವಹಿವಾಟಿನ ಉದ್ಯಮದ ವೆಚ್ಚ ಸಂರಚನೆಯನ್ನು ನಿರ್ಧರಿಸುತ್ತದೆ. ಇದು ಯಾವ ವಹಿವಾಟಿಗೆ ಎಷ್ಟು ಮರುಪಾವತಿ ಮಾಡಬೇಕು ಎಂಬ ಮಟ್ಟವನ್ನು ನಿರ್ಧರಿಸುತ್ತದೆ. ಸಮಿತಿಯಲ್ಲಿ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಕಾರ್ಯದರ್ಶಿ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಸಿಇಓ ಇರುತ್ತಾರೆ. ನಡೆಯಿಂದಾಗಿ ಸರ್ಕಾರಕ್ಕೆ 2512 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ. ಪೈಕಿ 1050 ಕೋಟಿ ರೂಪಾಯಿಯನ್ನು 2018-19ರಲ್ಲಿ ಮತ್ತು 1462 ಕೋಟಿ ರೂಪಾಯಿಗಳನ್ನು 2019 ಮತ್ತು 2020ರಲ್ಲಿ ಸರ್ಕಾರದಿಂದ ಭರಿಸಲಾಗುತ್ತದೆ.

ಮಹತ್ವ

ಅನುಮೋದನೆಯನ್ನು ಸಚಿವ ಸಂಪುಟ ನೀಡಿರುವ ಹಿನ್ನೆಲೆಯಲ್ಲಿ, ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಯಾವುದೇ ಹೆಚ್ಚುವರಿ ಹೊರೆ ಆಗುವುದಿಲ್ಲ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಪಾವತಿ ವಿಧಾನವನ್ನು ಅನುಸರಿಸಲು ಕಾರಣವಾಗಲಿದೆ. ಇದು ನಗದು ಆರ್ಥಿಕತೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ. ಇದು ಡಿಜಿಟಲ್ ವಹಿವಾಟಿನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲ ನೆರವಾಗಲಿದೆ.

ಎಂಡಿಆರ್ ಎಂದರೇನು?

ಎಂಡಿಆರ್ ಎನ್ನುವುದು ವ್ಯಾಪಾರಿಗಳ ಮೇಲೆ ಬ್ಯಾಂಕ್ಗಳು ವಿಧಿಸುವ ಶುಲ್ಕವಾಗಿದೆ. ಗ್ರಾಹಕರಿಂದ ಪಾವತಿಗೆ ಪ್ರತಿಯಾಗಿ ಶೇಕಡಾವಾರು ಪ್ರಮಾಣವನ್ನು ಬ್ಯಾಂಕುಗಳು ಶುಲ್ಕವಾಗಿ ವಿಧಿಸುತ್ತದೆ. ಗ್ರಾಹಕರು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿದಾಗ ಶುಲ್ಕವನ್ನು ಬ್ಯಾಂಕ್ಗಳು ವಿಧಿಸುತ್ತವೆ. ಎಂಡಿಆರ್ ಶುಲ್ಕವನ್ನು ಸಾಮಾನ್ಯವಾಗಿ ಮೊದಲೇ ಮಾಡಿಕೊಂಡ ಒಪ್ಪಂದದ ಅನ್ವಯ ವಿಧಿಸಲಾಗುತ್ತದೆ. ಎಂಡಿಆರ್ ಬ್ಯಾಂಕ್ ವಿತರಿಸುವ ಕಾರ್ಡ್ಗೆ ಪರಿಹಾರ ದೊರಕಿಸಿಕೊಡುತ್ತದೆ. ಸ್ವೈಪಿಂಗ್ ಮಿಷನ್ ಅಳವಡಿಸಿದ ಬ್ಯಾಂಕ್ಗೆ ಶುಲ್ಕವನ್ನು ಆಕರಿಸಲಾಗುತ್ತದೆ. ಅಂತೆಯೇ ನೆಟ್ವರ್ಕ್ ಸೇವೆ ಒದಗಿಸುವ ಮಾಸ್ಟರ್ಕಾರ್ಡ್ ಅಥವಾ ವೀಸಾದಂಥ ಕಂಪನಿಗಳಿಗೆ ಸೇವಾ ಶುಲ್ಕ ನೀಡಲಾಗುತ್ತದೆ. ಭಾರತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಗರಿಷ್ಠ ಎಂಡಿಆರ್ ನಿಗದಿಪಡಿಸಿದೆ. ಮೊತ್ತವನ್ನು ಪ್ರತಿ ವಹಿವಾಟಿನ ಮೇಲೆ ವಿಧಿಸಲು ಅವಕಾಶವಿದೆ.

ಇತ್ತೀಚಿನ ಆರ್ಬಿಐ ಅಧಿಸೂಚನೆಯ ಪ್ರಕಾರ, 2018 ಜನವರಿ ಒಂದರಿಂದ ಸಣ್ಣ ವಹಿವಾಟುದಾರರು ಗರಿಷ್ಠ ಪ್ರಮಾಣದ ಎಂಡಿಆರ್ ಅಂದರೆ ಶೇಕಡ 0.40ರಷ್ಟು ಶುಲ್ಕವನ್ನು ತೆರಬೇಕಾಗುತ್ತದೆ. 20 ಲಕ್ಷ ರೂಪಾಯಿವರೆಗೆ ವಹಿವಾಟು ನಡೆಸುವ ವ್ಯಾಪಾರಸ್ಥರು ತಮ್ಮ ಬಿಲ್ ಮೌಲ್ಯದ ಶೇಕಡ 0.4 ಶುಲ್ಕ ಪಾವತಿಸುತ್ತಾರೆ. ವಹಿವಾಟು ಮೌಲ್ಯ 20 ಲಕ್ಷಕ್ಕಿಂತ ಅಧಿಕವಿದ್ದರೆ ಶೇಕಡ 0.9 ಶುಲ್ಕ ಫಾವತಿಸುತ್ತಾರೆ. ಆರ್ಬಿಐ ವಿತ್ತೀಯ ಗರಿಷ್ಠ ಮಿತಿಯನ್ನು 200 ರೂಪಾಯಿಗಳಿಗೆ ನಿಗದಿಪಡಿಸಿದೆ. ದೊಡ್ಡ ಮೊತ್ತಕ್ಕೆ 1000 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ನಿಯಮಾವಳಿಯ ಅನ್ವಯ ವ್ಯಾಪಾರಿಗಳು ಎಂಡಿಆರ್ ಮೊತ್ತವನ್ನು ತಮ್ಮ ಜೇಬಿನಿಂದ ಪಾವತಿಸುವುದಿಲ್ಲ ಹಾಗೂ ಅದನ್ನು ಗ್ರಾಹಕರಿಗೆ ವರ್ಗಾಯಿಸುವಂತೆಯೂ ಇಲ್ಲ.

Comment