IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕೇಂದ್ರ ಸರ್ಕಾರದಿಂದ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಒಪ್ಪಿಗೆ

ಕೇಂದ್ರ ಸರ್ಕಾರದಿಂದ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಒಪ್ಪಿಗೆ

ಕೇಂದ್ರ ಸರ್ಕಾರ ಕೇಂದ್ರ ಪ್ರಾಯೋಜಿತ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಒಪ್ಪಿಗೆ ನೀಡಿದೆ. 2017-18ನೇ ಸಾಲಿನಲ್ಲಿ ಇದು ಜರಿಗೆ ಬರಲಿದೆ. ಯೋಜನೆಗೆ ಶೇಕಡ 100ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ಒದಗಿಸುತ್ತದೆ ಹಾಗೂ 2020 ಮಾರ್ಚ್ವರೆಗೆ ಈಶಾನ್ಯ ರಾಜ್ಯಗಳಲ್ಲಿ ನಿರ್ದಿಷ್ಟ ಮೂಲಸೌಕರ್ಯ ವಲಯದಲ್ಲಿನ ಅಂತರವನ್ನು ಬಗೆಹರಿಸಲು ಇದು ಪೂರಕವಾಗಲಿದೆ.

ಎನ್ಇಎಸ್ಐಡಿಎಸ್ ಲಕ್ಷಣಗಳು

Pಕೇಂದ್ರ ಪ್ರಾಯೋಜಿತ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯು ಮುಖ್ಯವಾಗಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದು ಪ್ರಮುಖವಾಗಿ ಕೆಳಗಿನ ಕ್ಷೇತ್ರಗಳನ್ನು ಇದು ಒಳಗೊಳ್ಳುತ್ತದೆ.

  1. ಭೌತಿಕ ಮೂಲಸೌಕರ್ಯವಾದ ನೀರು ಸರಬರಾಜು, ವಿದ್ಯುತ್, ಸಂಪರ್ಕ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಯನ್ನು ಒಳಗೊಳ್ಳಲಿದೆ.
  2. ಸಾಮಾಜಿಕ ವಲಯದ ಮೂಲಸೌಕರ್ಯಗಳು. ಇದರಲ್ಲಿ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗುತ್ತದೆ.

ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಪ್ರಯೋಜನಗಳು

ಕೇಂದ್ರ ಸರ್ಕಾರದ ಕೇಂದ್ರ ಪ್ರಾಯೋಜಿತ ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸೃಷ್ಟಿಸಲಾದ ಮೂಲಸೌಕರ್ಯದಿಂದ ಕೇವಲ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಕ್ಷೇತ್ರಗಳನ್ನು ಬಲಪಡಿಸುವುದು ಮಾತ್ರವಲ್ಲದೇ, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾಗಿ ಪ್ರಚಾರವಾಗದೇ ಇರುವ ಪ್ರವಾಸೋದ್ಯಮ ವಲಯದ ಅವಕಾಶಗಳನ್ನು ಕೂಡಾ ಬಳಕೆ ಮಾಡಿಕೊಳ್ಳುವುದು ಇದರ ಉದ್ದೇಶ. ಮೂಲಕ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಿಕೊಡಲಾಗುತ್ತದೆ. ಯೋಜನೆಯು ಇಡೀ ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ.

ಎನ್ಎಲ್ಸಿಪಿಆರ್ ನಿಧಿ

ಇದಕ್ಕಾಗಿ ಕೇಂದ್ರ ಸರ್ಕಾರವು ಹಾಲಿ ಇರುವ ಲ್ಯಾಪ್ಸ್ ಆಗದ ಕೇಂದ್ರೀಯ ಸಂಪನ್ಮೂಲಗಳ ನಿಧಿಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2020 ಮಾರ್ಚ್ವರೆಗೆ ಯೋಜನೆ ಜಾರಿಯಲ್ಲಿರುತ್ತದೆ. ಇದರ ಅನುದಾನ ಹಂಚಿಕೆ ಪ್ರಮಾಣ 90 : 10 ಅಂತರದಲ್ಲಿರುತ್ತದೆ. ಇದಕ್ಕೆ 53 ಸಾವಿರ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಇದು ಎಲ್ಲ ಜಾರಿ ಹಂತದಲ್ಲಿರುವ ಯೋಜನೆಗಳು ಪೂರ್ಣಗೊಳ್ಳಲು ನೆರವಾಗಲಿದೆ.

ಇದರ ವಿಸ್ತøತವಾದ ಉದ್ದೇಶವೆಂದರೆ, ಈಶಾನ್ಯ ರಾಜ್ಯಗಳಲ್ಲಿ ಸಾಮಾಜಿಕ ಮೂಲಸೌಕರ್ಯ ವಲಯದಲ್ಲಿ ತ್ವರಿತವಾದ ಅಭಿವೃದ್ಧಿ ಸಾಧಿಸಲು ನೆರವಾಗುವುದು. ಅದರಲ್ಲೂ ಮುಖ್ಯವಾಗಿ ಕೆಲ ವಲಯಗಳಿಗೆ ಸಿಕ್ಕಿಂನಲ್ಲಿ ಭಾರಿ ಪ್ರಮಾಣದ ನೆರವು ಬರುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವುದು.

ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ ಎನ್ಎಲ್ಸಿಪಿಆರ್ನಿಂದ ಇದಕ್ಕೆ ಅನುದಾನ ಮಂಜೂರು ಮಾಡಲಿದ್ದು, ವಿವಿಧ ಈಶಾನ್ಯ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಇದು ನೆರವಾಗಲಿದೆ. ಎನ್ಎಲ್ಸಿಪಿಆರ್ ಕೇಂದ್ರ ಯೋಜನೆಯಡಿ ಸಾಮಾನ್ಯ ಬಜೆಟ್ನಲ್ಲಿ ಇದಕ್ಕೆ ಅಗತ್ಯವಾದ ನೆರವು ನೀಡಲಾಗುತ್ತದೆ.

Comment