IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮೇಘಾಲಯದಲ್ಲಿ ದೇಶದ ಮೊಟ್ಟಮೊದಲ ಸಾಮಾಜಿಕ ಪರಿಶೋಧನೆ ಕಾನೂನು

ಮೇಘಾಲಯದಲ್ಲಿ ದೇಶದ ಮೊಟ್ಟಮೊದಲ ಸಾಮಾಜಿಕ ಪರಿಶೋಧನೆ ಕಾನೂನು

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಸಾಮಾಜಿಕ ಪರಿಶೋಧನೆ (ಸೋಶಿಯಲ್ ಆಡಿಟ್) ಕಾನೂನನ್ನು ಜಾರಿಗೊಳಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಮೇಘಾಲಯ ಪಾತ್ರವಾಗಿದೆ. ಮೇಘಾಲಯ ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಸಾರ್ವಜನಿಕ ಸೇವೆಗಳ ಸಾಮಾಜಿಕ ಪರಿಶೋಧನೆ ಕಾಯ್ದೆ- 2017ನ್ನು ಮೇಘಾಲಯ ವಿಧಾನಸಭೇ ಆಂಗೀಕರಿಸಿದೆ. ಇದರ ಅನ್ವಯ ಎಲ್ಲ ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರವನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸಲಾಗುತ್ತದೆ. ಯೋಜನೆಗೆ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಶಿಲ್ಲಾಂಗ್ ರಾಷ್ಟ್ರೀಯ ಸಮನ್ವಯ ಕೇಂದ್ರದಲ್ಲಿ ಚಾಲನೆ ನೀಡಿದರು.

ಪ್ರಮುಖ ಅಂಶಗಳು

ಕಾನೂನನ್ನು ಜಾರಿಗೆ ತರುವ ಮುನ್ನ ಎಲ್ಲ ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಾಮಾಜಿಕ ಪರಿಶೋಧನೆಯನ್ನು ನಾಗರಿಕ ಸಮಾಜ ಸಂಘಟನೆಗಳ ಮುಂದಾಳುತ್ವದಲ್ಲಿ ಪರಿಶೋಧನೆ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ಯಾವುದೇ ಕಾನೂನು ಮಾನ್ಯತೆ ಇರಲಿಲ್ಲ. ಇದು ದೇಶದಲ್ಲೇ ವಿನೂತನ ಹಾಗೂ ಮೊಟ್ಟಮೊದಲ ಪ್ರಯತ್ನವಾಗಿದ್ದು, ಮೇಘಾಲಯ ವಿಧಾನಸಭೆ ಇದಕ್ಕೆ 2017 ಏಪ್ರಿಲ್ನಲ್ಲಿ ಅನುಮೋದನೆ ನೀಡಿತ್ತು, ಇದರ ಅಂಗವಾಗಿ ಸರ್ಕಾರದ 26 ಯೋಜನೆಗಳನ್ನು 18 ಗ್ರಾಮಗಳಲ್ಲಿ ಸಾರ್ವಜನಿಕ ಸಾಮಾಜಿಕ ಪರಿಶೋಧನೆಗೆ ಗುರಿಪಡಿಸಲಾಗಿತ್ತು. ಪ್ರಸ್ತುತ ಇದು ಮೇಘಾಲಯದಲ್ಲಿ 11 ಇಲಾಖೆಗಳ 21 ಯೋಜನೆಗಳಿಗೆ ಅನ್ವಯಿಸುತ್ತದೆ.

ಕಾನೂನಿನ ಅನ್ವಯ, ಸಾಮಾಜಿಕ ಪರಿಶೋಧನೆ ಸೌಲಭ್ಯ ಅಧಿಕಾರಿಯನ್ನು ನೇಮಕ ಮಾಡುವುದು ಕಡ್ಡಾಯವಾಗಿದ್ದು, ಇವರು ಜನರ ಜತೆ ಸೇರಿ ಸಾಮಾಜಿಕ ಪರಿಶೋಧನೆ ನಿರ್ವಹಿಸಬೇಕಾಗುತ್ತದೆ. ಸೌಲಭ್ಯ ನೀಡುವ ಅಧಿಕಾರಿ ಪರಿಶೋಧನೆಯ ವರದಿಯನ್ನು ಗ್ರಾಮಸಭೆಗಳಲ್ಲಿ ನೀಡಬೇಕಾಗುತ್ತದೆ. ಇವರು ಕೆಲ ಒಳ ಹೊಳಹುಗಳನ್ನು ಕೂಡಾ ಬಹಿರಂಗಪಡಿಸಲಿದ್ದು, ಇದು ಅಂತಿಮವಾಗಿ ಸ್ವಾಯತ್ತ ಪರಿಶೋಧಕರಿಗೆ ಸಹಕಾರಿಯಾಗುತ್ತದೆ.

ಸಾಮಾಜಿಕ ಪರಿಶೋಧನೆ ಕಾನೂನಿನ ಮಹತ್ವ

ಸಾಮಾಜಿಕ ಪರಿಶೋಧನೆ ಕಾನೂನು ಸಾಮಾಜಿಕ ಪರಿಶೋಧನೆಯನ್ನು ವ್ಯವಸ್ಥೆಯ ಭಾಗವಾಗಿ ರೂಪಿಸಿದೆ. ಮೊದಲು ಇದು ನಾಗರಿಕ ಸಮಾಜದ ಯೋಜನೆಯಾಗಿದ್ದು, ಇದಕ್ಕೆ ಕಾನೂನಾತ್ಮಕ ಮಾನ್ಯತೆ ಇರಲಿಲ್ಲ. ಜತೆಗೆ ಇದು ಕಡ್ಡಾಯವೂ ಆಗಿರಲಿಲ್ಲ. ಸಾಮಾಜಿಕ ಪರಿಶೋಧನೆಯು ವ್ಯವಸ್ಥೆಯಲ್ಲಿ ಆಗಿರುವ ಲೋಪವನ್ನು ಸರಿಪಡಿಸುವಲ್ಲಿ ಮಹತ್ವದ್ದಾಗಿದೆ. ಪರಿಕಲ್ಪನೆಯು ಜನರಿಗೆ ನೇರವಾಗಿ ಹೇಗೆ ಹಣ ವೆಚ್ಚವಾಗಿದೆ ಎನ್ನುವುದನ್ನು ತಿಳಿಸುವ ಮೂಲಕ ಮಾಹಿತಿ ಅಂತರವನ್ನು ತಡೆಯಲು ಸಹಕರಿಸುತ್ತದೆ. ಇದು ತಳಮಟ್ಟದಲ್ಲಿ ನೇರವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ.

ಇದು ಮೊಟ್ಟಮೊದಲ ಬಾರಿಗೆ ದೇಶದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕಾನೂನು ಅಭಿವೃದ್ಧಿ ಯೋಜನೆ ರೂಪಿಸುವಲ್ಲಿ, ಫಲಾನುಭವಿಗಳ ಆಯ್ಕೆಯಲ್ಲಿ, ಯೋಜನೆಯ ಮೇಲ್ವಿಚಾರಣೆಯಲ್ಲಿ, ವ್ಯಾಜ್ಯಗಳನ್ನು ಬಗೆಹರಿಸುವಲ್ಲಿ, ಕಾಮಗಾರಿಯ ಪರಿಶೋಧನೆಯನ್ನು ವಾರ್ಷಿಕವಾಗಿ ಮಾಡುತ್ತದೆ.

ಸಾಮಾಜಿಕ ಪರಿಶೋಧನೆಯನ್ನು ತಳಮಟ್ಟದ ಪರಿಶೋಧನಾ ವ್ಯವಸ್ಥೆ ಎಂದು ಪರಿಗಣಿಸಲಾಗಿದ್ದು, ಇದು ಜನರಿಂದಲೇ ಮೂಲವನ್ನು ಹೊಂದಿದೆ. ಇದು ಪರಿಶೋಧನೆಯನ್ನು ಹೆಚ್ಚು ಅರ್ಥಪೂರ್ಣವಾಗಿ ಮಾಡಲಿದೆ. ಇದನ್ನು ವಿಸ್ತø ಹೊಣೆಗಾರಿಕೆಯ ಚೌಕಟ್ಟಿನ ಅವಿಭಾಜ್ಯ ಅಂಗ ಎಂದು ಪರಿಗಣಿಸಲಾಗಿದೆ. ಇದು ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯ ಸಂಸ್ಥೀಕರಣಕ್ಕೆ ಕೂಡಾ ಇದು ಅನುಕೂಲವಾಗಲಿದೆ.

Comment