IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಆರೋಗ್ಯ ವಲಯದಲ್ಲಿ ಸಹಕಾರಕ್ಕೆ ಭಾರತ- ಮೊರಾಕ್ಕೊ ಒಪ್ಪಂದ

ಆರೋಗ್ಯ ವಲಯದಲ್ಲಿ ಸಹಕಾರಕ್ಕೆ ಭಾರತ- ಮೊರಾಕ್ಕೊ ಒಪ್ಪಂದ

ಆರೋಗ್ಯ ವಲಯದಲ್ಲಿ ಪರಸ್ಪರ ಸಹಕಾರಕ್ಕೆ ಭಾರತ- ಮೊರಾಕ್ಕೊ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದದ ಚೌಕಟ್ಟಿನಡಿಯಲ್ಲಿ ಉಭಯ ದೇಶಗಳು ಗುರುತಿಸಲಾದ ಕ್ಷೇತ್ರಗಳಲ್ಲ ಜಂಟಿಯಾಗಿ ಕಾರ್ಯ ನಿರ್ವಹಿಸಲಿವೆ. ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಇದು ಇದು ಉಭಯ ದೇಶಗಳಿಗೆ ನೆರವಾಗಲಿವೆ.

ಒಪ್ಪಂದದ ಮುಖ್ಯ ವಲಯಗಳು

ಒಪ್ಪಂದದಡಿ ಗುರುತಿಸಲಾಗಿರುವ ಪ್ರಮುಖ ಕ್ಷೇತ್ರಗಳು ಕೆಳಗಿನಂತಿವೆ.

  • ಸಾಂಕ್ರಾಮಿಕ ರೋಗಗಳು
  • ಹೆರಿಗೆ, ಮಕ್ಕಳ ಅಭಿವೃದ್ಧಿ ಮತ್ತು ನವಜಾತ ಶಿಶುಗಳ ಆರೋಗ್ಯ
  • ಉತ್ತಮ ವಿಧಾನಗಳ ವಿನಿಮಯಕ್ಕಾಗಿ ಆಸ್ಪತ್ರೆಗಳ ನಡುವೆ ಸಂಪರ್ಕ ಸಾಧಿಸುವುದು
  • ಆರೋಗ್ಯ ಸೇವೆಗಳ ಮತ್ತು ಆಸ್ಪತ್ರೆಗಳ ಆಡಳಿತ ಮತ್ತು ನಿರ್ವಹಣೆಗೆ ಸೂಕ್ತ ತರಬೇತಿ ವ್ಯವಸ್ಥೆಯನ್ನು ರೂಪಿಸುವುದು.
  • ಸಾಂಕ್ರಾಮಿಕವಲ್ಲದ ಇತರ ರೋಗಗಳಾದ ಮಕ್ಕಳ ಹೃದಯ ರೋಗ ಮತ್ತು ಕ್ಯಾನ್ಸರ್ ರೋಗಕ್ಕೆ ಹೆಚ್ಚಿನ ಗಮನ ಹರಿಸುವುದು.

ಇದಲ್ಲದೇ ಮತ್ತೊಂದು ಒಪ್ಪಂದವನ್ನು ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಎಜ್ಯುಕೇಶನ್ ಮತ್ತು ಸಂಶೋಧನಾ ಸಂಸ್ಥೆ ಮತ್ತು ಮೊರಾಕ್ಕೊದ ಮರಕೇಶ್ ಮೊಹ್ಮದ್ 6 ಯುನಿವರ್ಸಿಟಿ ಹಾಸ್ಪಿಟನ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಅನ್ವಯ ಎರಡೂ ಸಂಸಥೆಗಳು ಟೆಲಿಮೆಡಿಸಿನ್ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಿಕೊಂಡಿವೆ. ಇದರಲ್ಲಿ ಮುಖ್ಯವಾಗಿ ಗಮನ ಹರಿಸಲಾದ ಕ್ಷೇತ್ರವೆಂದರೆ ಶಿಕ್ಷಣ, ಟೆಲೆ ಆರೋಗ್ಯ ಸುರಕ್ಷೆ, ತಾಂತ್ರಿಕ ಸಹಕಾರವನ್ನು ಸಾಂಕ್ರಾಮಿಕ ರೋಗ ನಿಯಂತ್ರಣ ಕ್ಷೇತ್ರದಲ್ಲಿ ಏರ್ಪಡಿಸುವುದು ಹಾಗೂ ಎರಡನೇ ಅಭಿಪ್ರಾಯವನ್ನು ಸಂಕೀರ್ಣ ಪ್ರಕರಣಗಳಲ್ಲಿ ಪಡೆಯಲಾಗುತ್ತದೆ.

Comment