IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಸಖಿ ಏಕಬಿಂದು ಕೇಂದ್ರದ ಪಾತ್ರದ ಬಗ್ಗೆ ಕಾರ್ಯಾಗಾರ

ಸಖಿ ಏಕಬಿಂದು ಕೇಂದ್ರದ ಪಾತ್ರದ ಬಗ್ಗೆ ಕಾರ್ಯಾಗಾರ

ಸಖಿ ಏಕಬಿಂದು ಕೇಂದ್ರದ ಪಾತ್ರಗಳ ಬಗ್ಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರಾಷ್ಟ್ರೀಯ ಕಾರ್ಯಾಗಾರವನ್ನು ನವದೆಹಲಿಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಇದು ಮಹಿಳೆಯರ ವಿರುದ್ಧದ ಹಿಂಸೆಗೆ ಬಹು ವಲಯ ಸ್ಪಂದನೆಯನ್ನು ಬಲಗೊಳಿಸುವ ಉದ್ದೇಶ ಹೊಂದಿದೆ. ಇದನ್ನು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಸಂಜಯಗಾಂಧಿ ಉದ್ಘಾಟಿಸಿದರು.

ಪ್ರಮುಖ ಅಂಶಗಳು

ಸುಮಾರು 400 ಸಖಿ ಏಕಬಿಂದು ಕೇಂದ್ರಗಳು ಹಾಗೂ ನೋಡೆಲ್ ಅಧಿಕಾರಿಗಳು ವಿವಿಧ ರಾಜ್ಯಗಳಿಂದ ಆಗಮಿಸಿದ್ದರು. 33 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಇದು ಮಹಿಳೆಯರ ವಿರುದ್ಧದ ಹಿಂಸೆಗೆ ಬಹು ವಲಯ ಸ್ಪಂದನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಮಾನವಾದ ವೇದಿಕೆಯನ್ನು ಸೃಷ್ಟಿಸಿಕೊಡುವಲ್ಲಿ ಮತ್ತು ಇದನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ವದ್ದಾಗಿದೆ. ಇದು ಮಹಿಳೆಯರ ವಿರುದ್ಧದ ಹಿಮಸೆಗೆ ಬಹು ವಲಯ ಸ್ಪಂದನೆಯನ್ನು ಬಲಗೊಳಿಸುವ ಸಖಿ ಏಕಬಿಂದು ಕೇಂದ್ರವನ್ನು ಬಲಗೊಳಿಸುವ ನಿಟ್ಟಿನಲ್ಲೂ ಚರ್ಚೆ ನಡೆಸಿದೆ.

ಸಖಿ ಯೋಜನೆ

ಸಖಿ ಏಕಬಿಂದು ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 2015ರ ಏಪ್ರಿಲ್ 1ರಿಂದ ಜಾರಿಗೊಳಿಸಿದೆ. ಇದು ದೌರ್ಜನ್ಯ ಅಥವಾ ಹಿಂಸೆಗೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ನೆರವು, ಪೊಲಿಸ್ ನೆರವು, ಕಾನೂನು ನೆರವು ಮತ್ತು ಪ್ರಕರಣ ನಿರ್ವಹಣೆ, ಮಾನಸಿಕ ಸಲಹೆ ಸೇರಿದಂತೆ ಎಲ್ಲ ಅಗತ್ಯ ನೆರವು ನೀಡುವುದು ಇದರ ಉದ್ದೇಶ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಶಖಿ ಏಕಬಿಂದು ಕೇಂದ್ರವನ್ನು 2015ರ ಮಾರ್ಚ್‍ನಲ್ಲಿ ಆರಂಭಿಸಿದೆ. ಈ ಯೋಜನೆಯಡಿ ಸಖಿ ಕೇಂದ್ರಗಳನ್ನು ದೇಶಾದ್ಯಂತ ಹಂತಹಂತವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಮೊದಲ ಹಂತದಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲಾ ಒಂದು ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. 150 ಹೆಚ್ಚುವರಿ ಕೇಂದ್ರಗಳನ್ನು ಎರಡನೇ ಹಂತದಲ್ಲಿ ಸ್ಥಾಪಿಸಲಾಗಿದೆ. 50 ಹೆಚ್ಚುವರಿ ಸಖಿ ಕೇಂದ್ರಗಳ ಸ್ಥಾಪನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇತ್ತೀಚೆಗೆ ಅನುಮೋದನೆ ನೀಡಿದೆ. ಪ್ರಸ್ತುತ 168 ಸಣಿ ಕೇಂದ್ರಗಳು 32 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದು, ಇದುವರೆಗೆ ಕೇಂದ್ರಕ್ಕೆ ಸುಮಾರು 70 ಸಾವಿರ ದೂರುಗಳು ಬಂದಿವೆ.

Comment