IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತ- ಮಾಲ್ಡೀವ್ಸ್ ದ್ವಿಪಕ್ಷೀಯ ಮಿಲಿಟರಿ ಕಾರ್ಯಾಚರಣೆ

ಭಾರತ- ಮಾಲ್ಡೀವ್ಸ್ ದ್ವಿಪಕ್ಷೀಯ ಮಿಲಿಟರಿ ಕಾರ್ಯಾಚರಣೆ

ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಎಂಟನೇ ಆವೃತ್ತಿಯ ದ್ವಿಪಕ್ಷೀಯ ಮಿಲಿಟರಿ ಕಾರ್ಯಾಚರಣೆ ಎಕುವೆರಿನ್-2017 ಕರ್ನಾಟಕದ ಬೆಳಗಾವಿಯಲ್ಲಿ ನಡೆಯಿತು. ಕಾರ್ಯಾಚರಣೆಯ ಮುಖ್ಯ ಉದ್ದೇಸವೆಂದರೆ, ಉಭಯ ದೇಶಗಳ ಸೇನೆಗಳ ನಡುವೆ ಸೇನಾ ತರಬೇತಿಗೆ ವ್ಯವಸ್ಥೆ ಮಾಡುವುದು. ಅದರಲ್ಲೂ ಮುಖ್ಯವಾಗಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ವಿಶೇಷವಾದ ನೈಪುಣ್ಯವನ್ನು ಸಾಧಿಸುವುದು ಇದರ ಮುಖ್ಯ ಉದ್ದೇಶ.

ಪ್ರಮುಖ ಅಂಶಗಳು

ಕಾರ್ಯಾಚರಣೆಯ ಮುಖ್ಯವಾದ ಗಮನ ಇರುವುದು ಎರಡೂ ದೇಶಗಳ ಸೇನೆಗಳು ಕಾರ್ಯಾಚರಣೆಯ ವಿಧಿವಿಧಾನಗಳನ್ನು ಕರಗತ ಮಾಡಿಕೊಳ್ಳುವುದು. ನಗರ ಮತ್ತು ಅರೆನಗರ ಪ್ರದಶಗಳಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಲು ಅಗತ್ಯವಾದ ಸರ್ವಸನ್ನದ್ಧತೆಯನ್ನು ರೂಢಿಸಿಕೊಳ್ಳುವುದು. ವಿಶ್ವಸಂಸ್ಥೆಯ ಸನ್ನದಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಇದು ಉಭಯ ಸೇನೆಗಳ ನಡುವೆ ಪರಸ್ಪರ ಅವಲಂಬನೆ ಮತ್ತು ಸಹಕಾರ- ಸಮನ್ವಯವನ್ನು ಸಾಧಿಸಲು ನೆರವಾಗಲಿದ್ದು, ಆಯಕಟ್ಟಿನ ಮತ್ತು ತಾಂತ್ರಿಕ ಕೌಶಲವನ್ನು ಹೆಚ್ಚಿಸಿಕೊಳ್ಳಲು ಗಮನ ಹರಿಸಲಾಗುವುದು. ಕಾರ್ಯಾಚರಣೆಯು ಎರಡೂ ಸೇನೆಗಳಿಗೆ ಜಂಟಿ ಕಾರ್ಯಾಚರಣೆಯನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ.

ಬಾರಿಯ ಕಾರ್ಯಾಚರಣೆಯಲ್ಲಿ, ಮಾಲ್ಡೀವ್ಸ್ ತಂಡವನ್ನು ಇಬ್ಬರು ಅಧಿಕಾರಿಗಳು ಹಾಗೂ ಇತರ 43 ಮಂದಿ ವಿವಿಧ ರ್ಯಾಂಕ್ಗಳ ಅಧಿಕಾರಿಗಳು ಪ್ರತಿನಿಧಿಸುತ್ತಿದ್ದಾರೆ. ಇದರ ಜತೆಗೆ ಭಾರತದ ವತಿಯಿಂದ ಗೂರ್ಖಾ ರೈಫಲ್ಸ್ ಬೆಟಾಲಿಯನ್ ಮೂವರು ಅಧಿಕಾರಿಗಳು, ಮೂವರು ಕಿರಿಯ ನಿಯೋಜಿತ ಅಧಿಕಾರಿಗಳು ಮತ್ತು 39 ಮಂದಿ ಇತರ ಶ್ರೇಣಿಗಳ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಹಿನ್ನೆಲೆ

ಭಾರತೀಯ ಸೇನೆ ಮತ್ತು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಯು ಜಂಟಿಯಾಗಿ ಎಕುವೆರಿನ್ ಕಾರ್ಯಾಚರಣೆಯನ್ನು 2009ರಿಂದಲೂ ನಡೆಯುತ್ತಾ ಬಂದಿವೆ. ಎಕುವೆರಿನ್ ಎಂದರೆ ಮಾಲ್ಡೀವನ್ ಭಾಷೆಯಲ್ಲಿ ಸ್ನೇಹಿತರು ಎಂಬ ಅರ್ಥ. ಪ್ರತಿ ಪರ್ಯಾಯ ವರ್ಷಗಳಲ್ಲಿ ಉಭಯ ದೇಶಗಳಲ್ಲಿ ಇದು ನಡೆಯುತ್ತದೆ. ಕಳೆದ ಬಾರಿಯ ಕಾರ್ಯಾಚರಣೆ ಮಾಲ್ಡೀವ್ಸ್ ಖಡ್ಡೂ ಲಮ್ಮು ಅಟೋಲ್ನಲ್ಲಿ ನಡೆದಿತ್ತು. ಇದರಲ್ಲಿ ಕಳೆದ ಬಾರಿ ಸಾಗರ ಹಾಗೂ ಸೇನಾ ವಲಯದಲ್ಲಿ ಭಯೋತ್ಪಾದನಾ ವಿರೋಧಿ ಚಟುವಟಿಕೆಯನ್ನು ನಡೆಸಲು ಗಮನ ಹರಿಸಲಾಗಿತ್ತು.

Comment