IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಎಂಐಟಿ ವಿಜ್ಞಾನಿಗಳಿಂದ ರಾತ್ರಿಯಲ್ಲಿ ಹೊಳೆಯುವ ಗಿಡ ಸೃಷ್ಟಿ

ಎಂಐಟಿ ವಿಜ್ಞಾನಿಗಳಿಂದ ರಾತ್ರಿಯಲ್ಲಿ ಹೊಳೆಯುವ ಗಿಡ ಸೃಷ್ಟಿ

ಮೆಸೆಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿಜ್ಞಾನಿಗಳು ವಿನೂತನವಾದ ಗಿಡವೊಂದನ್ನು ಸೃಷ್ಟಿಸಿದ್ದು, ಇದು ಮಬ್ಬು ಬೆಳಕಿನಲ್ಲಿ ಮತ್ತು ಕತ್ತಲೆಯಲ್ಲಿ ಕೂಡಾ ಹೊಳೆಯುವ ವಿಶಿಷ್ಟ ಗುಣಲಕ್ಷಣವನ್ನು ಹೊಂದಿದೆ. ಇದರ ಎಲೆಗಳಿಗೆ ನ್ಯಾನೊ ಕಣಗಳನ್ನು ಜೋಡಿಸಿರುವುದರಿಂದ ಗಿಡ ರಾತ್ರಿಯ ವೇಳೆಯಲ್ಲಿ ಹೊಳೆಯುತ್ತದೆ.

ಪ್ರಯೋಗದ ಮುಖ್ಯ ಉದ್ದೇಶವೆಂದರೆ, ಗಿಡಗಳನ್ನು ಡೆಸ್ಕ್ ಲ್ಯಾಂಪ್ ಆಗಿ ಬಳಸುವುದಾಗಿದೆ. ಇದಕ್ಕೆ ಗಿಡದ ಜೀರ್ಣಾಂಗ ವ್ಯವಸ್ಥೆಯನ್ನೇ ಆಧಾರವಾಗಿ ಇಟ್ಟುಕೊಳ್ಳಲಾಗಿದ್ದು, ಇದಕ್ಕೆ ಯಾವುದೇ ವಿದ್ಯುತ್ ಸಂಪರ್ಕದ ಅಗತ್ಯ ಇರುವುದಿಲ್ಲ.

ಪ್ರಮುಖ ಅಂಶಗಳು

ಹೊಳೆಯುವ ಗಿಡಗಳನ್ನು ಸೃಷ್ಟಿಸಲು ವಿಜ್ಞಾನಿಗಳು ಲುಸಿಫೆರೆಸ್ ಎಂಬ ವಿಶಿಷ್ಟ ಎಂಝಿಮ್ಗಳನ್ನು ಬಳಸಿದ್ದು, ಇದು ಅಗತ್ಯ ಹೊಳೆಯುವ ಅಂಶವನ್ನು ಒದಗಿಸುತ್ತದೆ. ಲೂಸಿಫೆರೆಸ್ ಲ್ಯೂಸಿಫೆರಿನ್ ಎಂಬ ಕಣವಾಗಿ ಕಾರ್ಯ ನಿರ್ವಹಿಸಲಿದ್ದು, ಇದು ಬೆಳಕಿನ ವಿಕಿರಣದ ಸಾಮಥ್ರ್ಯ ಹೊಂದಿರುತ್ತದೆ. ಇದರ ಜತೆಗೆ ಇದು ಕೋ ಎಂಝಿಮ್ ಎಂಬ ಇನ್ನೊಂದು ಕಣವನ್ನೂ ಬಳಸಿಕೊಳ್ಳಲಿದ್ದು, ಉತ ಉತ್ಪನ್ನಗಳ ರಾಸಾಯನಿಕ ಕ್ರಿಯೆಯನ್ನು ಇದು ತಡೆಯುತ್ತದೆ.

ಮೂರು ವಿಶೇಷ ಅಂಶಗಳನ್ನು ಪ್ಯಾಕೇಜ್ ರೂಪದಲ್ಲಿ ಸಿಲಿಕಾ ನ್ಯಾನೊಕಣಗಳಲ್ಲಿ ಅಳವಡಿಸಿ ನೀಡಲಾಗುತ್ತದೆ. 10 ನ್ಯಾನೊಮೀಟರ್ ವ್ಯಾಸದ ಕಣ ಲ್ಯೂಸಿಫೆರೆಸ್ಗಳನ್ನು ಹಿಡಿದಿಡುತ್ತದೆ. ಇವು ಸ್ವಲ್ಪ ದೊಡ್ಡದಾದ ಪಿಎಲ್ಜಿಎ ಪಾಲಿಮರ್ ಕಣಗಳನ್ನು ಕೂಡಾ ಬಳಸಿಕೊಳ್ಳಲಿದ್ದು, ಲ್ಯೂಸಿಫೆರಿನ್ ಮತ್ತು ಸಹ ಎಂಝೋಮ್ ಕಣಗಳನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ.

ಗಿಡದ ಎಲೆಗಳಿಗೆ ನ್ಯಾನೊ ಕಣಗಳನ್ನು ಪಡೆಯುವ ಸಲುವಾಗಿ ವಿಜ್ಞಾನಿಗಳು ಮೊದಲು ಅಮಾನತುಗೊಂಡ ಕಣಗಳ ಮಿಶ್ರಣವನ್ನು ತಯಾರಿಸುತ್ತಾರೆ. ಬಳಿಕ ಎಲೆಗಳನ್ನು ಮಿಶ್ರಣದಲ್ಲಿ ಮುಳುಗಿಸಿ, ಬಳಿಕ ಅಧಿಕ ಒತ್ತಡಕ್ಕೆ ಇದನ್ನು ತೆರೆಯಲಾಗುತ್ತದೆ. ಇದರಿಂದಾಗಿ ಕಣಗಳು ಎಲೆಗಳ ಒಳಗೆ ಸ್ಟೊಮಾಟಾ ಎಂಬ ಸಣ್ಣ ರಂಧ್ರಗಳ ಮೂಲಕ ಪ್ರವೇಶಿಸುತ್ತವೆ.

ಕಣಗಳು ಲ್ಯೂಸಿಫೆರೆನ್ ಮತ್ತು ಸಹ ಎಂಝೀಮ್ಗಳನ್ನು ಬಿಡುಗಡೆ ಮಾಡುತ್ತದೆ. ಎಲೆಯ ಒಳಪದರದಲ್ಲಿ, ಸಣ್ಣ ಕಣಗಳು ಬೆಳಕನ್ನು ಸೂಸುತ್ತವೆ. ಪಿಎಲ್ಜಿಎ ಕಣಗಳು ನಿಧಾನವಾಗಿ ಲ್ಯೂಸಿಫೆರೆನ್ಗಳನ್ನು ಬಿಡುಗಡೆ ಮಾಡುತ್ತವೆ. ಇವು ಗಿಡಗಳ ಕೋಶಗಳನ್ನು ಪ್ರವೇಶಿಸುತ್ತವೆ. ಲ್ಯೂಸಿಫೆರೆಸ್ ರಾಸಾಯನಿಕ ಕ್ರಿಯೆಗಳನ್ನು ನಡೆಸಿ, ಹೊಳೆಯುವಂತೆ ಮಾಡುತ್ತದೆ. ಪ್ರಯೊಘದಲ್ಲಿ ಲ್ಯೂಸಿಫೆರೆನ್ಯುಕ್ತ ಗಿಡಗಳು ಸುಮಾರು 45 ನಿಮಿಷಗಳ ಕಾಲ ಹೊಳೆಯುತ್ತವೆ.

ಮಹತ್ವ

ಕೆಲಸದ ಸ್ಥಳಗಳಲ್ಲಿ ಗಿಡಗಳನ್ನು ಹೊಳೆಯುವಂತೆ ಮಾಡಿ ಬೆಳಕಿನ ಮೂಲವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ತಂತ್ರಜ್ಞಾನದ ಆಧಾರದಲ್ಲಿ ಕಡಿಮೆ ತೀವ್ರತೆಯ ಕೊಠಡಿಯೊಳಗಿನ ಬೆಳಕಿನ ವ್ಯವಸ್ಥೆ ಅಥವಾ ಮರಗಳನ್ನೇ ಬೀದಿದೀಪವಾಗಿ ಬಳಸುವ ಸಾಧ್ಯತೆಯನ್ನು ತೆರೆದುಕೊಟ್ಟಿದೆ.

Comment