IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ದೆಹಲಿಯಲ್ಲಿ 4ನೇ ಭಾರತ- ಆಸ್ಟ್ರೇಲಿಯಾ- ಜಪಾನ್ ತ್ರಿಪಕ್ಷೀಯ ಮಾತುಕತೆ

ದೆಹಲಿಯಲ್ಲಿ 4ನೇ ಭಾರತ- ಆಸ್ಟ್ರೇಲಿಯಾ- ಜಪಾನ್ ತ್ರಿಪಕ್ಷೀಯ ಮಾತುಕತೆ

4ನೇ ಭಾರತ- ಆಸ್ಟ್ರೇಲಿಯಾ- ಜಪಾನ್ ತ್ರಿಪಕ್ಷೀಯ ಮಾತುಕತೆ ನವದೆಹಲಿಯಲ್ಲಿ ನಡೆದಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಡಾ.ಎಸ್.ಜೈಶಂಕರ್, ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಖಾತೆ ಕಾರ್ಯದರ್ಶಿ ಆಡಮ್‍ಸನ್ ಮತ್ತು ಜಪಾನ್‍ನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶಿನ್‍ಶುಕೆ ಜೆ.ಸುಗಿಯಮಾ ಜಂಟಯಾಗಿ ಇದನ್ನು ಆಯೋಜಿಸಿದ್ದರು.

ಪ್ರಮುಖ ಅಂಶಗಳು

ಮೂರೂ ಪಕ್ಷಗಳು ಪ್ರಮುಖವಾಗಿ ತನ್ನ ದೇಶಗಳ ಹಿತಾಸಕ್ತಿಯನ್ನು ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಸಮನ್ವಯಗೊಳಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಶಾಂತಿ, ಪ್ರಜಾಪ್ರಭುತ್ವ, ಆರ್ಥಿಕ ಪ್ರಗತಿ ಮತ್ತು ನಿಯಮಾಧರಿತ ವ್ಯವಸ್ಥೆಯನ್ನು ಈ ಭಾಗದಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಪರಸ್ಪರ ಹಂಚಿಕೆಯ ಬದ್ಧತೆಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಮೂರೂ ದೇಶಗಳ ಮುಖಂಡರು ಅಭಿಪ್ರಾಯಪಟ್ಟರು. ಏಷಿಯನ್ ಸದಸ್ಯದೇಶಗಳಿಗೆ ಬೆಂಬಲ ನೀಡುವುದಾಗಿಯೂ ಮುಖಂಡರು ಘೋಷಿಸಿದರು. ಎಲ್ಲ ರಾಜಕೀಯ ಹಾಗೂ ಭದ್ರತಾ ವಾಸ್ತುಶಿಲ್ಪವನ್ನು ಭಾರತ- ಫೆಸಿಫಿಕ್ ಪ್ರದೇಶದಲ್ಲಿ ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

ಮೂರೂ ದೇಶಗಳ ಮುಖಂಡರು ಏಷ್ಯಾ- ಫೆಸಿಫಿಕ್ ಪ್ರದೇಶದ ಸಾಗರ ಭದ್ರತೆಗೆ ಸಹಭಾಗಿತ್ವ ನೀಡಲು ಕೂಡಾ ಒಪ್ಪಿಕೊಂಡಿವೆ. ಇದರ ಜತೆಗೆ ವಿಕೋಪ ಸ್ಪಂದನೆ ಸಾಮಥ್ರ್ಯವನ್ನು ಹೆಚ್ಚಿಸುವಲ್ಲಿ ಕೂಡಾ ಇದು ನೆರವಾಗಲಿದೆ. ಭಯೋತ್ಪಾದನೆ ಪಿಡುಗು ಬಗೆಹರಿಸುವುದು ಮತ್ತು ಯಾವುದೇ ಬಗೆಯ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಪರಸ್ಪರ ಸಹಕಾರ ಹಾಗೂ ಸಹಭಾಗಿತ್ವ ಒದಗಿಸಲು ಕೂಡಾ ಮೂರೂ ದೇಶಗಳು ಒಪ್ಪಿಕೊಂಡಿವೆ.

ಪ್ರಾದೇಶಿಕ ಸಂಪರ್ಕವನ್ನು ಬಲಗೊಳಿಸುವ ಬಗ್ಗೆ ಕೂಡಾ ಮೂವರು ಮುಖಂಡರು ಪರಸ್ಪರ ಚರ್ಚೆ ನಡೆಸಿದರು. ಈ ಮಹತ್ವದ ಸಂವಾದ ಯೋಜನೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಅಗತ್ಯವನ್ನು ಕೂಡಾ ಪ್ರತಿಪಾದಿಸಿದರು. ಜಪನ್‍ನ ಸಚಿವರು ಮುಂದಿನ ಸುತ್ತಿನ ಮಾತುಕತೆಯನ್ನು ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಸಲು ಪ್ರಸ್ತಾವ ಮುಂದಿಟ್ಟರು.

Comment