IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ನೀತಿ ಆಯೋಗದಿಂದ ಎಟಿಎಲ್ ಸಮುದಾಯ ದಿನ

ನೀತಿ ಆಯೋಗದಿಂದ ಎಟಿಎಲ್ ಸಮುದಾಯ ದಿನ

ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾನ್ಸ್‍ಫಾರ್ಮರಿಂಗ್ ಇಂಡಿಯಾ (ನೀತಿ) ಆಯೋಗದ ಅಟಲ್ ಇನ್ನೊವೇಶನ್ ಮಿಷನ್ ಹೊಸದಾಗಿ ಅಟಲ್ ಥಿಂಕರಿಂಗ್ ಪ್ರಯೋಗಾಲಯ ಸಮುದಾಯ ದಿನವನ್ನು ನವದೆಹಲಿಯಲ್ಲಿ ಆಯೋಜಿಸಿದೆ.

ಈ ದಿನದ ಅಂಗವಾಗಿ ಸಮುದಾಯ ಚಾಲಿತ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಇದರಲ್ಲಿ 25 ಮಂದಿ ಯುವ ಮಾರ್ಗದರ್ಶಕರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವರು. ಇದುವರೆಗೆ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸೇರ್ಪಡೆಯಾಗದ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಲಭಿಸಲಿದೆ.

ಈ ಮಾರ್ಗದರ್ಶಕರು ನವದೆಹಲಿಯ ನಾಲ್ಕು ಸ್ಥಳಗಳಿಗೆ ಭೇಟಿ ನೀಡಲಿದ್ದು, ವಿವಿಧ ಸ್ವಯಂಸೇವಾ ಸಂಸ್ಥೆಗಳಿಂದ ಆಗಮಿಸಿದ ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ಅನುಶೋಧನೆಗಳು ನೆರವಾಗಲಿವೆ ಎನ್ನುವ ಬಗ್ಗೆ ಮಾರ್ಗದರ್ಶನ ನೀಡುವರು.

ಅಟಲ್ ಥಿಂಕರಿಂಗ್ ಲ್ಯಾಬ್ ಸಮುದಾಯ ಚಾಲಿತ ಯೋಜನೆ

ಈ ವಿನೂತನ ಯೋಜನೆಯ ಮುಖ್ಯ ಉದ್ದೇಶವೆಂದರೆ ಅಟಲ್ ಥಿಂಗರಿಂಗ್ ಲ್ಯಾಬ್‍ನ ಪರಿಣಾಮವನ್ನು ಗರಿಷ್ಠಗೊಳಿಸುವುದು. ಇದಕ್ಕಾಗಿ ಔಪಚಾರಿಕ ಶಿಕ್ಷಣ ಸಂಸ್ಥೆಗಳಲ್ಲಿ ನೋಂದಣಿಯಾಗದ ಮಕ್ಕಳಿಗೆ ಅನುಶೋಧನೆಯನ್ನು ಪರಿಚಯಿಸುವುದು. ಅಟಲ್ ಥಿಂಕರಿಂಗ್ ಲ್ಯಾಬ್‍ನ ಮಾರ್ಗದರ್ಶನದಲ್ಲಿ ಇಂಥ ಮಕ್ಕಳನ್ನು ಸಮಸ್ಯೆಗಳನ್ನು ನಿವಾರಿಸುವ ವರ್ಗವಾಗಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶ. ಈ ಯೋಜನೆಯಡಿ ಪಾಲ್ಗೊಳ್ಳುವ ಸರ್ಕಾರೇತರ ಸಂಸ್ಥೆಗಳಲ್ಲಿ ಮುಖ್ಯವಾಗಿ ಅಂಗವಿಕಲ ಮಕ್ಕಳು, ಬೀದಿ ಬದಿ ಮಕ್ಕಳು, ಕೆಲಸ ಮಾಡುವ ಮಕ್ಕಳು ಮತ್ತು ಸಮಾಜದ ದುರ್ಬಲ ವರ್ಗದ ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡುವ ಸಂಸ್ಥೆಗಳು ಸೇರುತ್ತವೆ.

ಅಟಲ್ ಇನ್ನೊವೇಶನ್ ಮಿಷನ್

ನೀತಿ ಆಯೋಗದ ಅಟಲ್ ಇನ್ನೊವೇಶನ್ ಮಿಷನ್, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದು ದೇಶದಲ್ಲಿ ಉದ್ಯಮಶೀಲತೆ ಮತ್ತು ಅನುಶೋಧನೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಅಟಲ್ ಥಿಂಕರಿಂಗ್ ಲ್ಯಾಬ್‍ಗಳನ್ನು ದೇಶಾದ್ಯಂತ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ದೇಶದಲ್ಲಿ ಅನುಶೋಧನೆಯ ಪರಿಸರಕ್ಕೆ ಉತ್ತೇಜನ ನೀಡಲು ಪೂರಕವಾಗಿರುತ್ತದೆ. ಜತೆಗೆ ದೇಶದಲ್ಲಿ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ಕೂಡಾ ನೆರವಾಗುತ್ತದೆ.

ಇದರ ಮಮುಖ್ಯವಾದ ಉದ್ದೇಶವೆಂದರೆ ಅನುಶೋಧನೆಯ ವೇದಿಕೆಯನ್ನು ನಿರ್ಮಿಸಿಕೊಡುವುದು. ಇದರಲ್ಲಿ ಶಿಕ್ಷಣತಜ್ಞರು, ಸಂಶೋಧಕರು ಮತ್ತು ಉದ್ಯಮಿಗಳನ್ನು ತೊಡಗಿಸಿಕೊಳ್ಳಲಾಗುತ್ತದೆ. ಜತೆಗೆ ಇದಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಅನುಭವಗಳನ್ನು ಜೋಡಿಕೊಂಡು, ಭಾರತದಲ್ಲಿ ಸಾಂಸ್ಕøತಿಕ ಅನುಶೋಧನೆಗೆ ಅನುಕೂಲಕರ ವಾತಾವರಣ ನಿರ್ಮಿಸುವುದು. ಇದು ವಿಶ್ವಾದ್ಯಂತ ಜಾಗತಿಕ ಗುಣಮಟ್ಟದ ಅನುಶೋಧನೆ ಹಬ್‍ಗಳನ್ನು ಉತ್ತೇಜಿಸುವುದು ಮಾತ್ರವಲ್ಲದೇ ವಹಿವಾಟು ಕ್ಷೇತ್ರದ ಸ್ಟಾರ್ಟ್ ಅಪ್ ಉದ್ದಿಮೆಗಳನ್ನು ಮತ್ತು ಇತರ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಅದರಲ್ಲೂ ಮುಖ್ಯವಾಗಿ ತಂತ್ರಜ್ಞಾನ ಆಧರಿತ ವಲಯಕ್ಕೆ ಒತ್ತು ನೀಡುವುದು ಇದರ ಉದ್ದೇಶವಾಗಿದೆ.

ನೀತಿ ಆಯೋಗ

ನೀತಿ ಆಯೋಗವು ದೇಶದ ಅತ್ಯುನ್ನತ ಚಿಂತಕರ ಚಾವಡಿಯಾಗಿದ್ದು, ಕೇಮದ್ರ ಸರ್ಕಾರಕ್ಕೆ ಇದು ನೀತಿ ನಿರ್ದೇಶನ ಹಾಗೂ ನೀತಿಯ ಅಂಶಗಳ ಬಗ್ಗೆ ಸಾಧನಗಳನ್ನು ಒದಗಿಸಲಿದೆ. ಇದು ಸಾಮಾನ್ಯವಾಗಿ ಸಲಹಾ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರಕ್ಕೆ ವಿವಿಧ ನೀತಿಗಳನ್ನು ನಿರೂಪಿಸುವ ಸಂಬಂಧ ಅಗತ್ಯ ಸಲಹೆಗಳನ್ನು ನೀಡುತ್ತದೆ.

Comment