IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕೆನ್- ಬೆಟ್ವಾ ನದಿ ಜೋಡಣೆ ಯೋಜನೆಯ 2 ಹಂತ ವಿಲೀನಕ್ಕೆ ನಿರ್ಧಾರ

ಕೆನ್- ಬೆಟ್ವಾ ನದಿ ಜೋಡಣೆ ಯೋಜನೆಯ 2 ಹಂತ ವಿಲೀನಕ್ಕೆ ನಿರ್ಧಾರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೆನ್ ಬೆಟ್ವಾ ನದಿ ಜೋಡಣೆ ಯೋಜನೆಯ 1 ಮತ್ತು 2ನೇ ಹಂತದ ಕಾಮಗಾರಿಗಳನ್ನು ಜೋಡಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯ ಫಲಾನುಭವಿ ರಾಜ್ಯಗಳಲ್ಲೊಂದಾದ ಮಧ್ಯಪ್ರದೇಶ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಉತ್ತರ ಪ್ರದೇಶ ಈ ಯೋಜನೆಯ ಇನ್ನೊಂದು ಫಲಾನುಭವಿ ರಾಜ್ಯವಾಗಿದೆ. ಇದರಿಂದಾಗಿ ಯೋಜನಾ ವೆಚ್ಚವನ್ನು ಪರಿಷ್ಕರಿಸಬೇಕಾಗುತ್ತದೆ. ಮೊದಲ ಹಂತದ ಯೋಜನೆಯ ಅಂದಾಜು ವೆಚ್ಚ 18 ಸಾವಿರ ಕೋಟಿ ರೂಪಾಯಿ ಆಗಿದ್ದು, ಎರಡನೇ ಹಂತದ ಯೋಜನೆಯ ಅಂದಾಜು ವೆಚ್ಚ 8 ಸಾವಿರ ಕೋಟಿ ರೂಪಾಯಿಗಳಾಗಿರುತ್ತವೆ.

ಹಿನ್ನೆಲೆ

ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಡಿ ಕೆನ್ ಹಾಗೂ ಬೆಟ್ವಾ ನದಿಗಳನ್ನು ಜೋಡಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಈಗಾಗಲೇ ಬಹುತೇಕ ಎಲ್ಲ ಪರಿಸರಾತ್ಮಕ ಒಪ್ಪಿಗೆ ಸಿಕ್ಕಿದ್ದರೂ, ಈ ಯೋಜನೆಗೆ ಮಧ್ಯಪ್ರದೇಶ ಸರ್ಕಾರ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ ಯೋಜನೆಗೆ ತಡೆ ಉಂಟಾಗಿತ್ತು. ಈ ಯೋಜನೆಯ ಮೊದಲ ಹಂತದಲ್ಲಿ ಇಂಥದ್ದೇ ಮೂರು ಯೋಜನೆಗಳಾದ ಬಿನಾ ಕಾಂಪ್ಲೆಕ್ಸ್, ಲೋವರ್ ಆರ್ ಡ್ಯಾಮ್ ಮತ್ತು ಕೋಥಾ ಬ್ಯಾರೇಜ್ ಯೋಜನೆಗಳನ್ನು ಸೇರಿಸದ ಹಿನ್ನೆಲೆಯಲ್ಲಿ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿತ್ತು. ಈ ಮೂರು ಯೋಜನೆಗಳನ್ನು ಎರಡನೇ ಹಂತದಲ್ಲಿ ಅನುಷ್ಠಾನಗೊಳಿಸಲು ಉದ್ದೇಸಿಸಿದ್ದು, ಇದು ಮಧ್ಯಪ್ರದೇಶದ ಕೆನ್ ನದಿ ಹಾಗೂ ಉತ್ತರ ಪ್ರದೇಶದ ಬೆಟ್ವಾ ನದಿಗಳನ್ನು ಸಂಪರ್ಕಿಸಲಿದೆ.

ಸಂಯೋಜಿತ ಹಂತಗಳು

ಕೇಂದ್ರ ಸರ್ಕಾರ ಮಧ್ಯಪ್ರದೇಶ ಸರ್ಕಾರ ಎತ್ತಿದ್ದ ಈ ವಿವಾದವನ್ನು ಬಗೆಹರಿಸಿದೆ. ಈ ಎಲ್ಲ ಕಾರ್ಯಗಳನ್ನೂ ಮೊದಲ ಹಂತದಲ್ಲೇ ಪೂರ್ಣಗೊಳಿಸಲು ಇದೀಗ ನಿರ್ಧರಿಸಲಾಗಿದೆ. ಇದಕ್ಕೆ ಅನುಗುಣವಾಗಿ ವೆಚ್ಚವನ್ನು ಕೂಡಾ ಪರಿಷ್ಕರಿಸಲಾಗುತ್ತದೆ. ಇದೀಗ ಇಡೀ ಯೋಜನೆಯನ್ನು 90 : 10 ಅನುಪಾತದಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಶೇಕಡ 90 ಭಾಗವನ್ನು ಕೇಂದ್ರ ಸರ್ಕಾರ ಹಾಗೂ ಶೇಕಡ 10ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

ಕೆನ್- ಬೆಟ್ವಾ ನದಿ ಜೋಡಣೆ ಯೋಜನೆ

ಕೆನ್- ಬೆಟ್ವಾ ನದಿ ಜೋಡಣೆ ಯೋಜನೆಯ ಮುಖ್ಯ ಉದ್ದೇಶವೆಂದರೆ, ಕೆನ್ ನದಿಯ ಹೆಚ್ಚುವರಿ ನೀರನ್ನು ಬೆಟ್ವಾ ಕಣಿವೆ ಪ್ರದೇಶಕ್ಕೆ ಹರಿಸುವುದು. ಇದಕ್ಕಾಗಿ ಕಾಂಕ್ರಿಟ್ ಕಾಲುವೆಯನ್ನು ನಿರ್ಮಿಸಿ, ಭಾರತದ ಅತ್ಯಂತ ಬರಪೀಡಿತ ಪ್ರದೇಶವಾದ ಬುಂಡೇಲ್‍ಖಂಡ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ವಿವಿಧೋದ್ದೇಶ ಯೋಜನೆಯು ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ವಿವಿಧ ಭಾಗಗಳಿಗೆ ಪ್ರಯೋಜನವಾಗಲಿದೆ. ಈ ಭಾಗದ  ಎರಡು ರಾಜ್ಯಗಳ ಆರು ಜಿಲ್ಲೆಗಳ ನೀರಾವರಿ, ಕುಡಿಯುವ ನೀರು ಮತ್ತು ವಿದ್ಯುತ್ ಅಗತ್ಯತೆಯನ್ನು ಇದು ಪೂರೈಸಲಿದೆ.

ಈ ಯೋಜನೆಯಲ್ಲಿ ಎರಡು ವಿದ್ಯುತ್ ಉತ್ಪಾದನಾ ಘಟಕಗಳು ನಿರ್ಮಾಣವಾಗಲಿದ್ದು, 2/30 ಹಾಗೂ 3/6 ಮೆಗಾವ್ಯಾಟ್ ಸಾಮಥ್ರ್ಯದ ಘಟಕಗಳು ನಿರ್ಮಾಣವಾಗಲಿವೆ. ಮೇಲಿನ ಹಂತದಲ್ಲಿ 1.9 ಕಿಲೋಮೀಟರ್ ಉದ್ದದ ಎರಡು ಸುರಂಗಗಳು, 1.1 ಕಿಲೋಮೀಟರ್ ಉದ್ದದ ಕೆಳಹಂತದ ಸುರಂಗಗಳು ಮತ್ತು 221 ಕಿಲೋಮೀಟರ್ ಉದ್ದದ ಕೆನ್-ಬೆಟ್ವಾ ನದಿ ಜೋಡಣೆ ಕಾಲುವೆಗಳು ನಿರ್ಮಾಣವಾಗಲಿವೆ. ಇದು ಉತ್ತರ ಪ್ರದೇಶದ ಝಾನ್ಸಿ, ಬಂಡಾ ಮತ್ತು ಮಹೋಬಾ ಜಿಲ್ಲೆಗಳಿಗೆ  ಮತ್ತು ಮಧ್ಯಪ್ರದೇಶದ ಛತ್ತರ್‍ಪುರ, ಪನ್ನಾ ಮತ್ತು ಟಿಕಂಘರ್ ಜಿಲ್ಲೆಗಳಿಗೆ ಲಾಭವಾಗಲಿವೆ.

Comment