IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಹಿಂದಿ ಇ-ಮೇಲ್ ಐಡಿ ನೀಡುವ ಮೊಟ್ಟಮೊದಲ ರಾಜ್ಯವಾಗಿ ರಾಜಸ್ಥಾನ

ಹಿಂದಿ ಇ-ಮೇಲ್ ಐಡಿ ನೀಡುವ ಮೊಟ್ಟಮೊದಲ ರಾಜ್ಯವಾಗಿ ರಾಜಸ್ಥಾನ

ರಾಜಸ್ಥಾನವು ದೇಶದಲ್ಲೇ ಹಿಂದಿ -ಮೇಲ್ ಐಡಿ ನೀಡುವ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದ ಎಲ್ಲ ನಿವಾಸಿಗಳಿಗೆ ಉಚಿತವಾಗಿ -ಮೇಲ್ ವಿಳಾಸವನ್ನು ಹಿಂದಿ ಭಾಷೆಯಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ. ಸೌಲಭ್ಯವು ಹೆಸರು@ರಾಜಸ್ಥಾನ.ಭಾರತ್ (ದೇವನಾಗರಿ ಲಿಪಿ) ಎಂಬ ಸೈಟ್ನಲ್ಲಿ ಇರುತ್ತದೆ. ವಿನೂತನ ಯೋಜನೆಯ ಮುಖ್ಯ ಉದ್ದೇಶವೆಂದರೆ - ಆಡಳಿತ ವ್ಯವಸ್ಥೆಯಲ್ಲಿ ಗರಿಷ್ಠ ಜನರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವುದು. ಇದು ಗರಿಷ್ಠ ಪ್ರಮಾಣದ ಸರ್ಕಾರಿ ಸೌಲಭ್ಯಗಳನ್ನು ಭಾರತೀಯ ಭಾಷೆಯಲ್ಲಿ ನೀಡುವ ಉದ್ದೇಶ ಹೊಂದಿದೆ.

ಪ್ರಮುಖ ಅಂಶಗಳು

ಯೋಜನೆಯನ್ನು ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿಗೆ ತಂದಿದ್ದು, ಖಾಸಗಿ ಐಟಿ ಕಂಪನಿಗಳ ಪಾಲುದಾರಿಕೆಯಲ್ಲಿ ಇದನ್ನು ಆರಂಭಿಸಿದೆ. ಯೋಜನೆಯು ರಾಜಸ್ಥಾನ ಡಿಜಿಕಿಟ್ ಸಣ್ಣ ಭಾಗವಾಗಿದ್ದು, ಇದರಲ್ಲಿ ರಾಜ್ಯದ ಒಂದು ಕೋಟಿಗಿಂತಲೂ ಅಧಿಕ ಮಂದಿ ಈಗಾಗಲೇ ನೋಂದಣಿಯಾಗಿದ್ದಾರೆ. ಮೊಟ್ಟಮೊದಲ -ಮೇಲ್ ಐಡಿಯನ್ನು ಮುಖ್ಯಮಂತ್ರಿ ವಸುಂಧರರಾಜೇ ಅವರು ಸೃಷ್ಟಿಸಿದರು. ಅವರ -ಮೇಲ್ ಐಡಿ ಕಸುಂಧರಾ@ರಾಜಸ್ಥಾನ.ಭಾರತ್ (ದೇವನಾಗರಿ ಲಿಪಿ). ಎಲ್ಲ ಸರ್ಕಾರಿ ಸಿಬ್ಬಂದಿ ಕೂಡಾ ಶೀಘ್ರದಲ್ಲೇ ಹಿಂದಿಯಲ್ಲಿ ತಮ್ಮ -ಮೇಲ್ ಐಡಿ ಹೊಂದಲಿದ್ದಾರೆ. ಎಲ್ಲ ಇಂಟರ್ನೆಟ್ ಬಳಕೆದಾರರಿಗೂ ಹಿಂದಿ -ಮೇಲ್ ಐಡಿ ನೀಡಲಾಗುತ್ತದೆ.

Comment