IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ರೈಲ್ವೆಯಿಂದ ಆನ್‍ಲೈನ್ ಬಿಲ್ ಟ್ರ್ಯಾಕಿಂಗ್ ವ್ಯವಸ್ಥೆ

ರೈಲ್ವೆಯಿಂದ ಆನ್‍ಲೈನ್ ಬಿಲ್ ಟ್ರ್ಯಾಕಿಂಗ್ ವ್ಯವಸ್ಥೆ

ಕೇಂದ್ರ ರೈಲ್ವೆ ಸಚಿವಾಲಯವು ಇಂಡಿಯನ್ ರೈಲ್ವೆ ಇ-ಪ್ರೊಕ್ಯೂರ್ಮೆಂಟ್ ಸಿಸ್ಟಮ್ (ಭಾರತೀಯ ರೈಲ್ವೆಯ ಇ- ಖರೀದಿ ವ್ಯವಸ್ಥೆ)ಯನ್ನು ಜಾರಿಗೆ ತಂದಿದೆ. ಇದು ಆನ್‍ಲೈನ್ ಬಿಲ್ ಟ್ರ್ಯಾಕಿಂಗ್ ವ್ಯವಸ್ಥೆಯಾಗಿದ್ದು, ಬಿಡಿ ಮಾರಾಟಗಾರರು ಮತ್ತು ಗುತ್ತಿಗೆದಾರರಿಗೆ ಇದು ಲಾಭವಾಗಲಿದೆ.

ಇದರ ಮುಖ್ಯ ಉದ್ದೇಶವೆಂದರೆ ಬಿಲ್ ಸಂಸ್ಕರಣೆ ಮತ್ತು ವಿಲೇವಾರಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ಬಿಲ್ ವಿಲೇವಾರಿಗೆ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಿಕೊಳ್ಳುವುದು.

ಇಂಡಿಯನ್ ರೈಲ್ವೆ ಇ-ಪ್ರೊಕ್ಯೂರ್ಮೆಂಟ್ ಸಿಸ್ಟಮ್ (ಐಆರ್‍ಇಪಿಎಸ್)

ಇಂಡಿಯನ್ ರೈಲ್ವೆ ಇ-ಪ್ರೊಕ್ಯೂರ್ಮೆಂಟ್ ಸಿಸ್ಟಮ್ (ಐಆರ್‍ಇಪಿಎಸ್) ಭಾರತೀಯ ರೈಲ್ವೆಯ ಬಿಡಿ ಮಾರಾಟಗಾರರು ಮತ್ತು ಗುತ್ತಿಗೆದಾರರಿಗೆ ನೆರವಾಗಲಿದ್ದು, ತಮ್ಮ ಬಿಲ್‍ಗಳ ಸ್ಥಿತಿಗತಿಯನ್ನು ಟ್ರ್ಯಾಕ್ ಮಾಡಲು ಇದು ಅನುಕೂಲವಾಗುತ್ತದೆ. ಮಾರಾಟಗಾರ ಅಥವಾ ಗುತ್ತಿಗೆದಾರ ಆನ್‍ಲೈನ್ ಐಟಿ ಪ್ಲಾಟ್‍ಫಾರಂನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈ ನೋಂದಣಿಯು ಮಾರಾಟಗಾರ ಅಥವಾ ಏಜೆನ್ಸಿಗೆ ತಮ್ಮ ಬಿಲ್ ಸ್ಥಿತಿಗತಿಯನ್ನು ದಿನಾಂಕದ ಸಹಿತ ಪತ್ತೆ ಮಾಡಲು ಅನುಕೂಲವಾಗುತ್ತದೆ. ಬಿಲ್ ಸಂಸ್ಕರಣಾ ಪ್ರಕ್ರಿಯೆಯ ವಿವಿಧ ಹಂತಗಳನ್ನು ಇದರ ಜಾಡು ಹಿಡಿಯಲು ಇದು ಸಹಕಾರಿಯಾಗಿದ್ದು, ಬಿಲ್ ಯಾವ ಹಂತದಲ್ಲಿದೆ, ಯಾವ ಉದ್ದೇಶಕ್ಕೆ ಹಣ ಮಂಜೂರಾಗಿದೆ ಮತ್ತಿತರ ವಿವರಗಳನ್ನು ಇದು ಒದಗಿಸುತ್ತದೆ.

ಈ ಆನ್‍ಲೈನ್ ಮಾಹಿತಿ ತಂತ್ರಜ್ಞಾನ ಪ್ಲಾಟ್‍ಫಾರಂ, ಇತಿಹಾಸದ ಗುಣಲಕ್ಷಣವನ್ನೂ ಹೊಂದಿದ್ದು, ಮಾರಾಟಗಾರರು ಯಾವಾಗ ಬಿಲ್ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನೂ ಒದಗಿಸಲಿದೆ. ಎಲ್ಲ ಬಿಲ್ಲುಗಳನ್ನು ಸ್ವೀಕರಿಸಿದ 30 ದಿನಗಳ ಒಳಗಾಗಿ ವಿಲೇವಾರಿ ಮಾಡುವುದು ಕಡ್ಡಾಯವಾಗಿರುತ್ತದೆ.

Comment