IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಕಳಂಕಿತ ಜನಪ್ರತಿನಿಧಿಗಳ ವಿಚಾರಣೆಗೆ 12 ವಿಶೇಷ ನ್ಯಾಯಾಲಯ

ಕಳಂಕಿತ ಜನಪ್ರತಿನಿಧಿಗಳ ವಿಚಾರಣೆಗೆ 12 ವಿಶೇಷ ನ್ಯಾಯಾಲಯ

ದೇಶದ 1581 ಸಂಸದರು ಮತ್ತು ಶಾಸಕರ ವಿರುದ್ಧದ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಯ ಸಲುವಾಗಿ ಕೇಂದ್ರ ಸರ್ಕಾರ 12 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲು ನಿರ್ಧರಿಸಿದೆ. ಈ ನಿರ್ಧಾರವನ್ನು ಸರ್ಕಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದು, ರಾಜಕಾರಣಿಗಳ ವಿರುದ್ಧದ ಅಪರಾಧ ಪ್ರಕರಣಗಳ ವಿಚಾರಣೆಯಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದೆ.

ಹಿನ್ನೆಲೆ

ಭಾರತದಲ್ಲಿ ರಾಜಕೀಯದ ಅಪರಾಧೀಕರಣ ಅತ್ಯಂತ ಕಳವಳಕಾರಿ ಅಂಶವಾಗಿದ್ದು, ಹಲವು ಮಂದಿ ರಾಜಕಾರಣಿಗಳು ಕೊಲೆ, ಭ್ರಷ್ಟಾಚಾರ, ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೂ, ಜನಪ್ರತಿನಿಧಿಗಳಾಗಿ ಮುಂದುವರಿದಿದ್ದಾರೆ. 2017ರ ನವೆಂಬರ್‍ನಲ್ಲಿ, ಸುಪ್ರೀಂಕೋರ್ಟ್ ಈ ಸಂಬಂಧ ಕೇಂದ್ರ ಸಕಾರ್ಕಕೆ ಸೂಚನೆ ನೀಡಿ, ಶಾಸಕರು ಹಾಗೂ ಸಂಸದರ ವಿರುದ್ಧದ ಅಪರಾಧ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಯೋಜನೆಯನ್ನು ಕೈಗೊಳ್ಳುವಂತೆ ಸಲಹೆ ಮಾಡಿತ್ತು. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ರಾಜಕಾರಣಿಗಳ ವಿರುದ್ಧದ ಹಾಲಿ ಬಾಕಿ ಇರುವ 1581 ಅಪರಾಧ ಪ್ರಕರಣಗಳನ್ನು ಒಂದು ವರ್ಷದ ಅವಧಿಯ ಒಳಗಾಗಿ ಇತ್ಯರ್ಥಪಡಿಸುವುದು. ಹಿರಿಯ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ತಪ್ಪು ಸಾಬೀತಾದ ರಾಜಕಾರಣಿಗಳಿಗೆ ಜೀವಿತಾವಧಿಯುದ್ದಕ್ಕೂ ನಿಷೇಧ ಹೇರಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಉದ್ದೇಶಿತ ಸರ್ಕಾರಿ ಯೋಜನೆ

ಆರಂಭದಲ್ಲಿ 12 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತದೆ. ಎರಡು ವಿಶೇಷ ನ್ಯಾಯಾಲಯಗಳು 228 ಮಂದಿ ಸಂಸದರ ವಿರುದ್ಧ ಇರುವ ಪ್ರಕರಣಗಳನ್ನು ನಿರ್ವಹಿಸುತ್ತವೆ. ಉಳಿದ 10 ಕೋರ್ಟ್‍ಗಳನ್ನು ಆಂಧ್ರಪ್ರದೇಶ, ಬಿಹಾರ, ಕೇರಳ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಲಾಗುತ್ತದೆ.

ಈ 10 ರಾಜ್ಯಗಲ್ಲಿ ಅಪರಾಧ ಕಾಯ್ದೆಗಳಡಿ ಶಾಸಕರ ವಿರುದ್ಧ ದಾಖಲಿಸಿದ ಪ್ರಕರಣಗಳ ಸಂಖ್ಯೆ 65ಕ್ಕಿಂತ ಅಧಿಕ ಇದೆ. 65ಕ್ಕಿಂತ ಕಡಿಮೆ ಪ್ರಕರಣಗಳು ಇರುವ ರಾಜ್ಯಗಳಲ್ಲಿ ಪ್ರಕರಣಗಳನ್ನು ಸುಪ್ರೀಂಕೋರ್ಟ್‍ನ ಅನುಮತಿ ಪಡೆದು ಪ್ರಸ್ತುತ ಇರುವ ತ್ವರಿತಗತಿ ನ್ಯಾಯಾಲಯಗಳಿಗೆ ವರ್ಗಾಯಿಸಲಾಗುತ್ತದೆ. ನ್ಯಾಯಾಲಯಗಳ ಸಂಖ್ಯೆಯನ್ನು 11ನೆ ಹಣಕಾಸು ಆಯೋಗದ ವಿಶ್ಲೇಷಣೆ ಆಧಾರದಲ್ಲಿ ಲೆಕ್ಕ ಹಾಕಲಾಗಿದೆ. ಇಂಥ ನ್ಯಾಯಾಲಯ ವಾರ್ಷಿಕ 165 ಪ್ರಕರಣಗಳನ್ನು ಇತ್ಯರ್ಥಪಡಿಸಬಲ್ಲವು ಎಂಬ ಅಂದಾಜಿನಲ್ಲಿ ಈ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. 44 ಮಂದಿ ರಾಜ್ಯಸಭಾ ಸದಸ್ಯರ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸಲು ವಿಶೇಷ ನ್ಯಾಯಾಂಗ ವೇದಿಕೆಯ ಬಗ್ಗೆ ಸುಪ್ರೀಂಕೋರ್ಟ್ ಮೌನವಾಗಿದೆ.

Comment