IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತದ ಜಿಡಿಪಿ ಪ್ರಗತಿ ಶೇಕಡ 6.7ಕ್ಕೆ ಇಳಿಕೆ ಸಂಭವ

ಭಾರತದ ಜಿಡಿಪಿ ಪ್ರಗತಿ ಶೇಕಡ 6.7ಕ್ಕೆ ಇಳಿಕೆ ಸಂಭವ

ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ), 2017-18ರಲ್ಲಿ ಭಾರತದ ಜಿಡಿಪಿ ಪ್ರಗತಿ ದರವನ್ನು ಪರಿಷ್ಕರಿಸಿದ್ದು, ಇದು ಶೇಕಡ 6.7ರಷ್ಟಾಗಲಿದೆ ಎಂದು ಅಂದಾಜು ಮಾಡಿದೆ. ಮೊದಲು ಭಾರತದ ಪ್ರಗತಿಯ ಅಂದಾಜು ದರ ಶೇಕಡ 7 ಎಂದು ಅಂದಾಜಿಸಲಾಗಿತ್ತು. ತನ್ನ ಏಷ್ಯನ್ ಅಭಿವೃದ್ಧಿ ದೃಷ್ಟಿಕೋನ ಪೂರಕ ವರದಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಪ್ರಗತಿದರ ಅಭಿವೃದ್ಧಿಯ ಕೆಳಮುಖ ಪರಿಷ್ಕರಣೆಗೆ ಮುಖ್ಯ ಕಾರಣವೆಂದರೆ, ದಕ್ಷಿಣ ಏಷ್ಯಾದ ಅತಿದೊಡ್ಡ ಆರ್ಥಿಕತೆಯ ಮೇಲೆ ನೋಟು ರದ್ದತಿಯಿಂದ ಆಗಿರುವ ಪರಿಣಾಮ. ಇದರ ಜತೆಗೆ ಸರಕು ಮತ್ತು ಸೇವಾ ತೆರಿಗೆಯ ವರ್ಗಾಂತರ ಅವಧಿಯ ಸವಾಲುಗಳು ಹಾಗೂ ಕೃಷಿ ಕ್ಷೇತ್ರದ ಹವಾಮಾನ ಸಂಬಂಧಿ ಅಪಾಯ ಸಾಧ್ಯತೆಗಳು ಇದಕ್ಕೆ ಕಾರಣ.

ಎಡಿಬಿ ಭವಿಷ್ಯದ ಪ್ರಮುಖ ಅಂಶಗಳು

ಅಂತೆಯೇ ಎಡಿಬಿ ಭಾರತದ 2018-19ನೇ ಸಾಲಿನ ಜಿಡಪಿಪ್ರಗತಿ ದರವನ್ನು ಶೇಕಡ 7.4ರಿಂದ 7.3ಕ್ಕೆ ಪರಿಷ್ಕರಿಸಿದೆ. ಇದಕ್ಕೆ ಮುಖ್ಯವಾಗಿ ಜಾಗತಿಕ ಕಚ್ಚಾ ತೂಲದ ಬೆಲೆಯಲ್ಲಿ ಏರಿಕೆ ಮತ್ತು ಖಾಸಗಿ ವಲಯದ ಹೂಡಿಕೆಯಲ್ಲಿ ಮಂದ ಪ್ರಗತಿ ಇದಕ್ಕೆ ಕಾರಣ. ಆದಾಗ್ಯೂ 2017-18ನೇ ಸಾಲಿನ ಮುಂದಿನ ಎರಡು ತ್ರೈಮಾಸಿಕಗಳಲ್ಲಿ ಪ್ರಗತಿದರ ಹೆಚ್ಚುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. ಹೊಸ ಜಿಎಸ್ಟಿ ಬದ್ಧತೆಯನ್ನು ಸುಲಲಿತಗೊಳಿಸಲು ಮತ್ತು ಬ್ಯಾಂಕುಗಳ ಬಂಡವಾಳ ಮರುಪೂರಣಕ್ಕೆ ಸರ್ಕಾರ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಆರ್ಥಿಕ ಪುನಶ್ಚೇತನದ ಸಾಧ್ಯತೆಗಳಿವೆ.

ಭಾರತದಲ್ಲಿ ಹಣದುಬ್ಬರ ದರ 2017-18ನೇ ಸಾಲಿನಲ್ಲಿ ಸರಾಸರಿ 2.7 ಶೇಕಡ ದರದಲ್ಲಿದ್ದು, ಆಹಾರ ವಸ್ತುಗಳ ಬೆಲೆ ಕಡಿಮೆ ಇರುವುದು ಹಾಗೂ ನೋಟು ರದ್ದತಿಯಿಂದಾಗಿ ಕುಸಿದಿರುವ ಬೇಡಿಕೆ ಪ್ರಮಾಣ ಇನ್ನೂ ಗಣನೀಯ ಏರಿಕೆಯಾಗದಿರುವುದು ಇದಕ್ಕೆ ಕಾರಣ. ಆದಾಗ್ಯೂ ಹಣದುಬ್ಬರ ದರ 2017 ಜುಲೈ ತಿಂಗಳಲ್ಲಿ ಹೆಚ್ಚಿದ್ದು, ಆಹಾರ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ ಬೇಳೆಕಾಳು ಮತ್ತು ತರಕಾರಿಗಳ ಬೆಲೆ ಏರುಮುಖವಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗುತ್ತಿದ್ದು, ಇದಕ್ಕೆ ಪ್ರತಿಯಾಗಿ ಇಂಧನ ಬೆಲೆ ಕೂಡಾ ಹೆಚ್ಚುತ್ತಿದೆ. 2017-18ನೇ ಸಾಲಿನ ಅಂದಾಜು ಹಣದುಬ್ಬರ ದರ ಶೇಕಡ 3.7 ಆಗಲಿದ್ದು, ಹಿಂದೆ ಅಂದಾಜು ಮಾಡಿದ್ದ ಶೇಕಡ 4ಕ್ಕಿಂತ ಇದು ತುಸು ಕಡಿಮೆ.

ಹಿಂದಿನ ಅಂದಾಜು

ಎಡಿಬಿಗಿಂತ ಮುಂಚಿತವಾಗಿ ವೀಶ್ವಬ್ಯಾಂಕ್ ಭಾರತದ ಜಿಡಿಪಿ ಪ್ರಗತಿದರವನ್ನು 2017-18ನೇ ಸಾಲಿಗೆ ಶೇಕಡ 7.2ರಿಂದ 7ಕ್ಕೆ ಇಳಿಸಿತ್ತು. ನೋಟು ರದ್ದತಿ ಮತ್ತು ಜಿಎಸ್ಟಿ ಅನುಷ್ಠಾನ, ಪ್ರಗತಿ ಕುಂಠಿತಕ್ಕೆ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿತ್ತು. ಆದರೆ ವಿಶ್ವಬ್ಯಾಂಕ್ ಅಂದಾಜಿನ ಪ್ರಕಾರ 2019-20ರಲ್ಲಿ ಭಾರತದ ಜಿಡಿಪಿ ಪ್ರಗತಿದರ ಶೇಕಡ 7.4ಕ್ಕೆ ಹೆಚ್ಚುವ ಇರೀಕ್ಷೆ ಇದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಕೂಡಾ ಭಾರತದ ಪ್ರಗತಿ ದರವನ್ನು 2017-18ನೇ ಸಾಲಿಗೆ ಶೇಕಡ 6.7 ಎಂದು ಅಂದಾಜು ಮಾಡಿದೆ. ಹಿಂದೆ ಅಂದಾಜು ಪ್ರಗತಿದರ ಶೇಕಡ 7.2 ಎಂದು ಅಂದಾಜಿಸಲಾಗಿತ್ತು.

ಫಿಚ್ ರೇಟಿಂಗ್ಸ್ ತನ್ನ ಸೆಪ್ಟೆಂಬರ್ ಜಾಗತಿಕ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ ಭಾರತದ ಜಿಡಿಪಿ ಪ್ರಗತಿದರವನ್ನು 2017-18ನೇ ಸಾಲಿಗೆ ಶೇಕಡ 6.7ಕ್ಕೆ ಇಳಿಸಿದೆ. ಮುನ್ನ ಅದು ಶೇಕಡ 6.9 ಎಂದು ಅಂದಾಜು ಮಾಡಿತ್ತು. ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ದರದಲ್ಲಿ ಪುನಶ್ಚೇತನಗೊಳ್ಳುತ್ತಿರುವುದು ಪ್ರಗತಿದರ ಕುಂಠಿತಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿತ್ತು. 2018-19ನೇ ಸಾಲಿನ ಆರ್ಥಿಕ ಪ್ರಗತಿ ದರದ ಅಂದಾಜನ್ನು ಕೂಡಾ ಶೇಕಡ 7.4ರಿಂದ ಶೇಕಡ 7.3ಕ್ಕೆ ಇಳಿಸಿದೆ.

ಮೂಡೀಸ್ ಕೂಡಾ ತನ್ನ ಸೆಪ್ಟೆಂಬರ್ ಜಾಗತಿಕ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ ಭಾರತದ ಜಿಡಿಪಿ ಪ್ರಗತಿದರವನ್ನು 2017-18ನೇ ಸಾಲಿಗೆ ಶೇಕಡ 6.7ಕ್ಕೆ ಇಳಿಸಿದೆ. ಮುನ್ನ ಅದು ಶೇಕಡ 7.1 ಎಂದು ಅಂದಾಜು ಮಾಡಿತ್ತು. ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ದರದಲ್ಲಿ ಪುನಶ್ಚೇತನಗೊಳ್ಳುತ್ತಿರುವುದು ಪ್ರಗತಿದರ ಕುಂಠಿತಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿತ್ತು. 2018-19ನೇ ಸಾಲಿನ ಆರ್ಥಿಕ ಪ್ರಗತಿ ದರದ ಅಂದಾಜನ್ನು ಕೂಡಾ ಶೇಕಡ 7.5 ಎಂದು ಅಂದಾಜು ಮಾಡಲಾಗಿದೆ. ಸ್ಟ್ಯಾಂಡರ್ಡ್ & ಪೂರ್ಸ್ ಭಾರತದ ಪ್ರಗತಿದರವನ್ನು 2017-2020 ಅವಧಿಗೆ 7.6 ಶೇಕಡ ಎಂದು ಅಂದಾಜು ಮಾಡಿದೆ.

Comment