IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಲೆಗಥಮ್ ಸಮೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕೆ 100ನೇ ಸ್ಥಾನ

ಲೆಗಥಮ್ ಸಮೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕೆ 100ನೇ ಸ್ಥಾನ

ಲೆಗಥಮ್ ಸಮೃದ್ಧಿ ಸೂಚ್ಯಂಕ- 2017 ಭಾಗವಾಗಿ ಬಿಡುಗಡೆ ಮಾಡಲಾದ ಸಮೃದ್ಧ ದೇಶಗಳ ಪಟ್ಟಿಯಲ್ಲಿ ಭಾರತ 149 ದೇಶಗಳ ಪೈಕಿ 100ನೇ ಸ್ಥಾನ ಪಡೆದಿದೆ. ಸೂಚ್ಯಂಕವು ವಿಶ್ವದಲ್ಲಿ ಹೇಗೆ ಸಮೃದ್ಧಿ ರೂಪುಗೊಳ್ಳುತ್ತಿದೆ ಮತ್ತು ಬದಲಾಗುತ್ತಿದೆ ಎನ್ನುವ ಬಗ್ಗೆ ಒಳನೋಟವನ್ನು ನೀಡುತ್ತದೆ.

ಲೆಗಥಮ್ ಸಮೃದ್ಧಿ ಸೂಚ್ಯಂಕ

ಲೆಗಥಮ್ ಸಮೃದ್ಧಿ ಸೂಚ್ಯಂಕವು ವಾರ್ಷಿಕ ರ್ಯಾಂಕಿಂಗ್ ಆಗಿದ್ದು, ಲಂಡನ್ ಮೂಲದ ಲೆಗಥಮ್ ಸಂಸ್ಥೆ ಇದನ್ನು ಬಿಡುಗಡೆ ಮಾಡುತ್ತದೆ. ಇದು ವಿಶ್ವದ ಅಗ್ರಗಣ್ಯ ಜಾಗತಿಕ ಆರ್ಥಿಕ ಮಾಪನ ಮತ್ತು ಸಾಮಾಜಿಕ ಕಲ್ಯಾಣದ ಅಧ್ಯಯನವಾಗಿದ್ದು, 104 ಸೂಚಕಗಳ ಆಧಾರದಲ್ಲಿ ಅಧ್ಯಯನ ನಡೆಸಲಾಗುತ್ತದೆ. ಮುಖ್ಯವಾಗಿ ಆರ್ಥಿಕ ಗುಣಮಟ್ಟ, ಆಡಳಿತ, ವಹಿವಾಟು ಪರಿಸರ, ವೈಯಕ್ತಿಕ ಸ್ವಾತಂತ್ರ್ಯ, ಸುರಕ್ಷತೆ ಮತ್ತು ಭದ್ರತೆ, ಸಾಮಾಜಿಕ ಬಂಡವಾಳ, ಶಿಕ್ಷಣ, ಆರೋಗ್ಯ ಮತ್ತು ಸಹಜ ಪರಿಸರ ವರ್ಗಗಳಲ್ಲಿ ಸಂಸ್ಥೆ ಅಧ್ಯಯನ ಕೈಗೊಳ್ಳುತ್ತದೆ.

2017 ಲೆಗಥಮ್ ಸಮೃದ್ಧಿ ಸೂಚ್ಯಂಕದ ಮುಖ್ಯಾಂಶಗಳು

ಭಾರತ ಹಾಗೂ ಚೀನಾವನ್ನು ಒಳಗೊಂಡ ಏಷ್ಯಾ ಫೆಸಿಫಿಕ್ ಪ್ರದೇಶ ಗರಿಷ್ಠ ಸುಧಾರಣೆಯನ್ನು ದಾಖಲಿಸಿದೆ. ವ್ಯಾಪಾರ ವಾತಾವರಣದಲ್ಲಿ ಗರಿಷ್ಠ ಸುಧಾರಣೆ ಇದ್ದರೆ, ಸಹಜ ಪರಿಸರದ ಕ್ಷಮತೆ ಪ್ರದೇಶದಲ್ಲಿ ತೀರಾ ಕಳಪೆಯಾಗಿದೆ.

2016 ರ್ಯಾಂಕಿಂಗ್ಗೆ ಹೋಲಿಸಿದರೆ ಭಾರತ ಹಾಗೂ ಚೀನಾ ನಡುವಿನ ಸಮೃದ್ಧಿ ಸೂಚ್ಯಂಕ ಕೇವಲ ನಾಲ್ಕು ರ್ಯಾಂಕ್ಗಳ ಅಂತರಕ್ಕೆ ಕುಸಿದಿದೆ. 2012ರಲ್ಲಿ ಉಭಯ ದೇಶಗಳ ನಡುವೆ 16 ರ್ಯಾಂಕ್ಗಳ ಅಂತರವಿತ್ತು. ಆರ್ಥಿಕವಾಗಿ ಚೀನಾ ಬಹಳಷ್ಟು ಅಂಶಗಳನ್ನು ಕಳೆದುಕೊಂಡಿದ್ದು, ವ್ಯಾಪಾರಕ್ಕೆ ಹೆಚ್ಚಿನ ಅಡೆತಡೆಗಳಿವೆ ಎನ್ನುವುದು ಜನರ ಮನೋಭಾವವಾಗಿದೆ. ಜತೆಗೆ ಇಲ್ಲಿ ಪೈಪೋಟಿಗೆ ಉತ್ತೇಜನ ಕಡಿಮೆ ಎನ್ನುವುದು ಕೂಡಾ ಅಧ್ಯಯನದಿಂದ ತಿಳಿದುಬಂದಿದೆ. ಶೈಕ್ಷಣಿಕವಾಗಿ ಕೂಡಾ ಚೀನಾ ಹಿಂದೆ ಬಿದ್ದಿದ್ದು, ಪ್ರಾಥಮಿಕ ಶಾಲಾ ಶಿಕ್ಷಣ ಪೂರ್ಣಗೊಳಿಸುವ ಪ್ರಮಾಣವೂ ಕಡಿಮೆಯಾಗಿದೆ.

ಭಾರತದ ಸಮೃದ್ಧಿಯಲ್ಲಿ ಏರು ಪ್ರವೃತ್ತಿ ಕಂಡುಬಂದಿರುವುದು ಮಹತ್ವದ ಅಂಶವಾಗಿದ್ದು, ನೋಟು ರದ್ದತಿ ಮತ್ತು ಜಿಎಸ್ಟಿ ಸುಧಾರಣೆಗಳನ್ನು 2017ರಲ್ಲಿ ಆರಂಭಿಸಿರುವುದರಿಂದ ಆರ್ಥಿಕ ಪ್ರಗತಿದರ ಕುಂಠಿತವಾಗಿದ್ದರೂ ಭಾರತದ ಸಾಧನೆ ಗಮನ ಸೆಳೆದಿದೆ.

ಪ್ರತಿ ವಲಯದಲ್ಲಿ ಭಾರತದ ಸಾಧನೆ: ಆರ್ಥಿಕ ಗುಣಮಟ್ಟ- 56ನೇ ರ್ಯಾಂಕ್, ವ್ಯಾಪಾರ ಪರಿಸರ- 65, ಆಡಳಿತ- 41, ಶಿಕ್ಷಣ- 99, ಆರೋಗ್ಯ- 109, ಸುರಕ್ಷತೆ ಮತ್ತು ಭದ್ರತೆ- 134, ವೈಯಕ್ತಿಕ ಸ್ವಾತಂತ್ರ್ಯ 100, ಸಾಮಾಜಿಕ ಬಂಡವಾಳ- 82 ಮತ್ತು ನೈಸರ್ಗಿಕ ಪರಿಸರ- 139.

Comment