IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮೊಟ್ಟಮೊದಲ ಸ್ಕೋರ್ಪೆನ್ ಕ್ಲಾಸ್ ಸಬ್‍ಮೆರಿನ್ ಭಾರತೀಯ ನೌಕಾಪಡೆಗೆ ಸೇರ್ಪಡೆ

ಮೊಟ್ಟಮೊದಲ ಸ್ಕೋರ್ಪೆನ್ ಕ್ಲಾಸ್ ಸಬ್‍ಮೆರಿನ್ ಭಾರತೀಯ ನೌಕಾಪಡೆಗೆ ಸೇರ್ಪಡೆ

ಪ್ರಧಾನಿ ನರೇಂದ್ರ ಮೋದಿಯವರು ಮೊಟ್ಟಮೊದಲ ಸ್ಕೋರ್ಪೆನ್ ಕ್ಲಾಸ್ ಸಬ್ಮೆರಿನ್ ಐಎನ್ಎಸ್ ಕಲ್ವರಿಯನ್ನು ಭಾರತೀಯ ನೌಕಾಪಡೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಸೇರ್ಪಡೆಗೊಳಿಸಿದರು. ಇದು ಆರು ಸ್ಕೋರ್ಪೆನ್ ಕ್ಲಾಸ್ ಸಬ್ಮೆರಿನ್ಗಳ ಪೈಕಿ ಮೊದಲನೆಯದಾಗಿದ್ದು, ಪ್ರಮುಖ ಆಯಕಟ್ಟಿನ ಪ್ರಾಜೆಕ್ಟ್-75 ಅಡಿಯಲ್ಲಿ ಇದನ್ನು ಮಡಗಾಂವ ಡಾಕ್ ಲಿಮಿಟೆಡ್ (ಎಂಡಿಎಸ್) ಅಭಿವೃದ್ಧಪಡಿಸಿದೆ. ಇದಕ್ಕೆ ಫ್ರಾನ್ಸ್ ಡಿಸಿಎನ್ಎಸ್ ತಂತ್ರಜ್ಞಾನ ವರ್ಗಾವಣೆ ನೆರವು ನೀಡಿದೆ. ಭಾರತೀಯ ನೌಕಾಪಡೆಯ ಸಬ್ಮೆರಿನ್ ವಿಭಾಗದ ಸುವರ್ಣ ಮಹೋತ್ಸವ ಆಚರಿಸಿದ ಕೆಲವೇ ದಿನಗಳಲ್ಲಿ ಸ್ಕೋರ್ಪೆನ್ ಕ್ಲಾಸ್ ಸಬ್ಮೆರಿನ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿರುವುದು ವಿಶೇಷ.

ಐಎನ್ಎಸ್ ಕಲ್ವರಿ ಭಾರತೀಯ ನೌಕಾಪಡೆಗೆ ಹದಿನೇಳು ವರ್ಷಗಳಲ್ಲಿ ಸೇರ್ಪಡೆಯಾಗುತ್ತಿರುವ ಮೊಟ್ಟಮೊದಲ ಸಾಂಪ್ರದಾಯಿಕ ಸಬ್ಮೆರಿನ್ ಆಗಿದೆ. ಐಎನ್ಎಸ್ ಸಿಂಧುಶಾಸ್ತ್ರವನ್ನು 2000ನೇ ಇಸ್ವಿ ಜುಲೈನಲ್ಲಿ ನಿಯೋಜಿಸಲಾಗಿತ್ತು. ಇದು ಸಾಂಪ್ರದಾಯಿಕ ಡೀಸೆಲ್- ಎಲೆಕ್ಟ್ರಿಕ್ ಸಬ್ಮೆರಿನ್ ಆಗಿದ್ದು, ಇದನ್ನು ರಷ್ಯಾದಿಂದ ಖರೀದಿಸಲಾಗಿತ್ತು.

ಐಎನ್ಎಸ್ ಕಲ್ವರಿ

ಐಎನ್ಎಸ್ ಕಲ್ವರಿ ಅತ್ಯಾಧುನಿಕ ಅಣ್ವಸ್ತ್ರ ರಹಿತ ಯುದ್ಧ ಸಬ್ಮೆರಿನ್ ಆಗಿದ್ದು, ಇದು ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕಲ್ವರಿ ಎನ್ನುವುದು ಮಲೆಯಾಳಂ ಭಾಷೆಯ ಪದವಾಗಿದ್ದು, ಆಳ ಸಮುದ್ರದ ಟೈಗರ್ ಶಾರ್ಕ್ಗೆ ಕಲ್ವರಿ ಎಂದು ಭಾಷೆಯಲ್ಲಿ ಕರೆಯಲಾಗುತ್ತದೆ. ಹೆಸರು ಹೊಸ ಸಬ್ಮೆರಿನ್ ವಿಶಿಷ್ಟತೆ, ಬಲ ಹಾಗೂ ಶಕ್ತಿಯನ್ನು ಪ್ರತಿಫಲಿಸುತ್ತದೆ. ಐಎನ್ಎಸ್ ಕಲ್ವರಿ 67.5 ಮೀಟರ್ ಉದ್ದವಿದ್ದು, 12.3 ಮೀಟರ್ ಎತ್ತರವಿದೆ. ಇದರ ತೂಕ 1565 ಟನ್. ಇದು 1600 ಟನ್ ಸಾಮಗ್ರಿಗಳನ್ನು ಒಯ್ಯುವ ಸಾಮಥ್ರ್ಯ ಪಡೆದಿದೆ.

ಇದಕ್ಕೆ ಎರಡು 1250 ಕೆಡಬ್ಲ್ಯು ಎಂಎಎನ್ ತೀರಾ ನಿಶ್ಶಬ್ದ ಡೀಸೆಲ್ ಎಲೆಕ್ಟ್ರಿಕ್ ಡೀಸೆಸ್ ಎಂಜಿನ್ಗಳಿದ್ದು, ನೀರಿನ ಆಳದಲ್ಲಿ ಇದನ್ನು ಪತ್ತೆ ಮಾಡುವುದು ತೀರಾ ಕಷ್ಟಕರ. ಇದು ಅತ್ಯಾಧುನಿಕ ಯುದ್ಧ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿದ್ದು, ಅತ್ಯಾಧುನಿಕ ಸಮಗ್ರ ವೇದಿಕೆ ನಿರ್ವಹಣೆ ವ್ಯವಸ್ಥೆಯನ್ನು ಕೂಡಾ ಒಳಗೊಂಡಿರುತ್ತದೆ.

ಇದರ ಹಲ್ ಫೋರ್ಮ್, ಫಿನ್ ಹಾಗೂ ಹೈಡ್ರೋಪ್ಲೇನ್ಗಳನ್ನು ನಿರ್ದಿಷ್ಟವಾಗಿ ನೀರಿನ ಒಳಗಿನ ಕನಿಷ್ಠ ಪ್ರತಿರೋಧಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇದು 360 ಬ್ಯಾಟರಿ ಕೋಶಗಳನ್ನು ಹೊಂದಿದ್ದು, ಪ್ರತಿಯೊಂದರ ತೂಕ 750 ಕೆ.ಜಿ. ಇದು ತೀರಾ ನಿಶ್ಶಬ್ದವಾಗಿ ಹಾಗೂ ಕಾಯಂ ಆಗಿ ಆಯಸ್ಕಾಂತೀಯ ಪ್ರೊಪಲ್ಷನ್ ಮೋಟರ್ನಿಂದ ವಿದ್ಯುತ್ ಪಡೆಯುತ್ತದೆ. ಇದರ ರಹಸ್ಯ ಸಾಮಥ್ರ್ಯವನ್ನು ಒಳಗೆ ಇರುವ ಒತ್ತಡದ ಹಲ್ನಲ್ಲಿ ಅಳವಡಿಸಲಾಗಿದ್ದು, ಶಾಕ್ ಸ್ವೀಕರಿಸುವ ಸಾಮಥ್ರ್ಯವನ್ನು ಇದು ಹೊಂದಿರುತ್ತದೆ.

ಸಬ್ಮೆರಿನ್ ಟ್ಯಾಕ್ಟಿಕಲ್ ಇಂಟಗ್ರೇಟೆಡ್ ಕಾಂಬಾಟ್ ಸಿಸ್ಟಮ್ (ಎಸ್ಯುಬಿಟಿಐಸಿಎಸ್) ಸೂಟ್ ಐಎನ್ಎಸ್ ಕಲ್ವರಿಯ ಶಸ್ತ್ರಾಸ್ತ್ರ ವ್ಯವಸ್ಥೆಯ ಹೃದಯ ಭಾಗವಾಗಿದ್ದು, ಇದು ಸೋನಾರ್ಗಳಿಂದ ಬಂದ ಮಾಹಿತಿಗಳನ್ನು ಸಂಸ್ಕರಿಸುತ್ತದೆ. ಇದು ಗುರಿಗಳನ್ನು ಪತ್ತೆ ಮಾಡುವಲ್ಲಿ ಮತ್ತು ಟೋರ್ಪೆಡೊ ಅಥವಾ ಕ್ಷಿಪಣಿಗಳ ಜತೆಗೂ ಇದನ್ನು ಬಳಸಬಹುದಾಗಿದೆ.

ಇದು ಅಧಿಕ ಭಾರದ ಟೋರ್ಪೆಡೊಗಳನ್ನು ಮತ್ತು ಹಡಗು ನಿರೋಧಕ ಕ್ಷಿಪಣಿಗಳನ್ನು ಹೊಂದಿರುತ್ತದೆ. ಇದು ಟೋರ್ಪೆಡೊಗಳನ್ನು ನೀರಿನಲ್ಲಿ ಮುಳುಗಿರುವಾಗ ಮತ್ತು ನೀರಿನ ಮೇಲ್ಮೈನಲ್ಲಿ ಕೂಡಾ ಉಡಾಯಿಸಬಲ್ಲದು. ಇದಕ್ಕೆ ಇನ್ಫ್ರಾ ರೆಡ್ ಮತ್ತು ಕಡಿಮೆ ಬೆಳಕಿನ ಮಟ್ಟದ ಕ್ಯಾಮೆರಾಗಳ ಸಹಾಯದಿಂದ ದಾಳಿ ಮಾಡುವ ಮತ್ತು ಶೋಧಿಸುವ ಸಾಮಥ್ರ್ಯ ಇರುತ್ತದೆ. ಲೇಸರ್ ರೇಂಜ್ ಶೋಧಕಗಳು ಸಮುದ್ರದ ಮೇಲ್ಮೈನಲ್ಲಿರುವ ಗುರಿಗಳನ್ನು ಪತ್ತೆ ಮಾಡುತ್ತದೆ.

ಇದನ್ನು ಎಲ್ಲ ಅಪಾಯಗಳ ಸಂದರ್ಭದಲ್ಲೂ ಕಾರ್ಯಾಚರಣೆ ಮಾಡಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಉಷ್ಣವಲಯಗಳಲ್ಲಿ ಮತ್ತು ಸಬ್ಮೆರಿನ್ ಯುದ್ಧಕ್ಷೇತ್ರಕ್ಕೆ ಪ್ರತಿಯಾದ, ಮೇಲ್ಮಯ ಯುದ್ಧಕ್ಷೇತ್ರಕ್ಕೆ ಪ್ರತಿಯಾದ, ಗುಪ್ತಚರ ಮಾಹಿತಿ ಕ್ರೋಢೀಕರಿಸುವ, ಕ್ಷೇತ್ರ ಸರ್ವೇಕ್ಷಣೆ ಮತ್ತು ಮೈನ್ ಅಳವಡಿಸುವುದು ಮತ್ತಿತರ ಕಾರ್ಯಗಳನ್ನು ಕೂಡಾ ಇದು ಕೈಗೊಳ್ಳುತ್ತದೆ.

ಆಳ ನೋಟ

ಭಾರತೀಯ ನೌಕಾಪಡೆ ಐಎನ್ಎಸ್ ಕಲ್ವರಿಯನ್ನು ನಿಯೋಜಿಸಿಕೊಂಡಿದ್ದು, ಇದು ಅತ್ಯಾಧುನಿಕ ಸಾಂಪ್ರದಾಥಿಕ ಸಬ್ಮೆರಿನ್ ಆಗಿದೆ.

ಸ್ಕೋರ್ಪೆನ್ ಎಂದರೇನು?

ಸಾಂಪ್ರದಾಯಿಕ ವಿದ್ಯುತ್ ಚಾಲಿತ ಸಬ್ಮೆರಿನ್ ಆಗಿದ್ದು, 1500 ಟನ್ ತೂಕ ಹೊಂದಿದೆ. ಇದು 300 ಮೀಟರ್ ಆಳದವರೆಗೂ ತೆರಳಬಲ್ಲದು. ಇದನ್ನು ಪ್ರಾನ್ಸ್ ಡಿಸಿಎನ್ಎಸ್ ಅಭಿವೃದ್ಧಿಪಡಿಸಿದೆ.

ಭಾರತೀಯ ಸಂಪರ್ಕ

2005 ಅಕ್ಟೋಬರ್ನಲ್ಲಿ ಭಾರತವು ಮುಂಬೈನ ಮಡಗಾಂವ್ ಡಾಕ್ ಲಿಮಿಟೆಡ್ ಜತೆಗೆ 3.75 ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿದ್ದು, ತಂತ್ರಜ್ಞಾನ ವರ್ಗಾವಣೆ ಆಧಾರದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚುವರಿ ತಂತ್ರಜ್ಞಾನವನ್ನು ಫ್ರಾನ್ಸ್ ಡಿಸಿಎನ್ಎಸ್ ವರ್ಗಾಯಿಸಿದೆ. ಇತರ ವ್ಯವಸ್ಥೆ ಹಾಗೂ ಶಸ್ತ್ರಾಸ್ತ್ರಗಳಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳಲಾಗಿದೆ.

ಒಪ್ಪಂದದ ಸ್ಥಿತಿಗತಿ ಏನು?

ನಾಲ್ಕು ವರ್ಷಗಳ ಕಾಲ ಪದೇ ಪದೇ ವಿಳಂಬವಾದ ಬಳಿಕ ಮೊದಲ ಸಬ್ಮೆರಿನ್ ಸಾಗರ ಪರೀಕ್ಷೆಯನ್ನು 2016 ಮೇ ತಿಂಗಲಲ್ಲಿ ಆರಂಭಿಸಿದೆ. ಇದು ಗುರುವಾರ ಅಂತಿಮವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ. ಎರಡನೇ ಸ್ಕೋರ್ಪೆನ್ ಖಂದೇರ್ ಇದೀಗ ಸಮುದ್ರ ಪರೀಕ್ಷೆಗಳನ್ನು ಎದುರಿಸುತ್ತಿದ್ದು, ವರ್ಷದ ಕೊನೆಗೆ ಇದನ್ನು ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಎಲ್ಲ ಆರು ಸಬ್ಮೆರಿನ್ಗಳು 2020 ಒಳಗಾಗಿ ನಿಯುಕ್ತಿಗೊಳ್ಳಲಿವೆ.

ಭಾರತೀಯ ನೌಕಾಪಡೆ ಇದರೊಂದಿಗೆ 13 ಸಾಂಪ್ರದಾಯಿಕ ಸಬ್ಮೆರಿನ್ಗಳನ್ನು ಹಾಗೂ ಒಂದು ಅಣ್ವಸ್ತ್ರ ದಾಳಿಯ ಸಬ್ಮೆರಿನ್ ಹೊಂದಿದ್ದು, ಇದಕ್ಕೆ ಐಎನ್ಎಸ್ ಚಕ್ರ ಎಂದು ಹೆಸರಿಸಲಾಗಿದೆ. ಇದನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ.

Comment