IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತ- ಆಸ್ಟ್ರೇಲಿಯಾ ನಡುವೆ 2 +2 ಸಂವಾದ

ಭಾರತ- ಆಸ್ಟ್ರೇಲಿಯಾ ನಡುವೆ 2 +2 ಸಂವಾದ

ಭಾರತ ಹಾಗೂ ಆಸ್ಟ್ರೇಲಿಯಾ ಮೊಟ್ಟಮೊದಲ ಬಾರಿಗೆ 2 + 2 ಸಂವಾದವನ್ನು ನವದೆಹಲಿಯಲ್ಲಿ ಆರಂಭಿಸಿವೆ. ಇದರಲ್ಲಿ ಪ್ರಮುಖವಾಗಿ ಏಷ್ಯಾ- ಫೆಸಿಫಿಕ್ ಪ್ರದೇಶವನ್ನು ಮುಕ್ತ ಮತ್ತು ಸ್ವತಂತ್ರ ವಲಯವಾಗಿ ನಿರ್ವಹಿಸುವ ಅಂಶಕ್ಕೆ ಒತ್ತು ನೀಡಲಾಗಿದೆ. ಎರಡು ದೇಶಗಳ ನಡುವಿನ 2 +2 ಸಂವಾದ ಮಾದರಿಯು ವಿದೇಶಾಂಗ ಹಾಗೂ ರಕ್ಷಣಾ ಸಚಿವಾಲಯಗಳನ್ನು ಒಳಗೊಂಡಿದೆ.

ಭಾರತ ಹಾಗೂ ಆಟ್ರೇಲಿಯಾ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧವನ್ನು ಹೊಂದಿದ್ದು, ಇದಕ್ಕೆ ಉಭಯ ದೇಶಗಳಲ್ಲಿ ಇರುವ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಬಹುತ್ವ ಆಧಾರವಾಗಿವೆ. ಎರಡು ದೇಶಗಳ ನಡುವೆ ಪ್ರಮುಖ ದೃಷ್ಟಿಕೋನಗಳು ಕೂಡಾ ಸಮ್ಮಿಲನಗೊಂಡಿವೆ.

ಪ್ರಮುಖ ಅಂಶಗಳು

ಮಟ್ಟದ ಮೊದಲ ಸಭೆಯು 2017 ನವೆಂಬರ್ನಲ್ಲಿ ಮನಿಲಾದಲ್ಲಿ ನಾಲ್ಕು ದೇಶಗಳ ನಡುವೆ ಆರಂಭವಾದ ಮಾತುಕತೆ ವೇಳೆ ನಡೆದಿದೆ. ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ಚತುಃಪಕ್ಷೀಯ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದವು. ಹೊಸ ಪ್ರಮುಖ ಪಾಲುದಾರಿಕೆಯನ್ನು ಏಷ್ಯಾ- ಫೆಸಿಫಿಕ್ ಪ್ರದೇಶದಲ್ಲಿ ಆರಂಭಿಸುವುದು ಇದರ ಉದ್ದೇಶವಾಗಿತ್ತು. 2 +2 ಸಂವಾದದಲ್ಲಿ ಪ್ರಮುಖವಾಗಿ ಎಲ್ಲ ದ್ವಿಪಕ್ಷೀಯ ಸಂಬಂಧಗಳ ಆಯಾಮಗಳು ಚರ್ಚೆಗೆ ಬರಲಿದ್ದು, ಉಭಯ ದೇಶಗಳ ನಡುವಿನ ಪ್ರಮುಖ ಹಾಗೂ ರಕ್ಷಣಾ ಸಂಬಂಧಗಳನ್ನು ಪರಾಮರ್ಶಿಸಲಾಗುವುದು.

ಉಭಯ ದೇಶಗಳು ಮುಕ್ತ, ಸ್ವತಂತ್ರ, ಸಮೃದ್ಧ ಮತ್ತು ಇಂಡೋ ಫೆಸಿಫಿಕ್ ಪ್ರದೇಶದ ಸಮಗ್ರ ಪಾಲ್ಗೊಳ್ಳುವಿಕೆಯನ್ನು ಒಪ್ಪಿಕೊಂಡಿದ್ದು, ಎಲ್ಲ ದೇಶಗಳ ಧೀರ್ಘಾವಧಿ ಹಿತಾಸಕ್ತಿಗಳಿಗೆ ಮತ್ತು ವಿಶ್ವದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪರಸ್ಪರ ಸಹಕರಿಸಿಕೊಳ್ಳಲು ನಿರ್ಧರಿಸಿವೆ. ಸಂವಾದದಿಂದ ವ್ಯಕ್ತವಾಗುವ ಪ್ರಮುಖ ಅಭಿಪ್ರಾಯವೆಂದರೆ ದಕ್ಷಿಣ ಚೀನಾ ಸಮುದ್ರದಲ್ಲಿ ಜಲಮಾರ್ಗದ ಸ್ವಾತಂತ್ರ್ಯ. ಇಲ್ಲಿ ಚೀನಾ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಪುನರುಜ್ಜೀವನಗೊಳಿಸುತ್ತಿದ್ದು, ತನ್ನ ಸಾಗರ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿದೆ.

Comment