IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಐಎಂಟಿ ಹೆದ್ದಾರಿಯನ್ನು ವಿಯೇಟ್ನಾಂವರೆಗೆ ವಿಸ್ತರಿಸಲು ಭಾರತ ಮಾತುಕತೆ

ಐಎಂಟಿ ಹೆದ್ದಾರಿಯನ್ನು ವಿಯೇಟ್ನಾಂವರೆಗೆ ವಿಸ್ತರಿಸಲು ಭಾರತ ಮಾತುಕತೆ

ಭಾರತದ ಮಹತ್ವಾಕಾಂಕ್ಷಿ ಇಂಡಿಯಾ- ಮ್ಯಾನ್ಮಾರ್- ಥಾಯ್ಲೆಂಡ್ (ಐಎಂಟಿ) ಹೆದ್ದಾರಿಯನ್ನು ವಿಯೇಟ್ನಾಂವರೆಗೆ ವಿಸ್ತರಿಸುವ ಸಂಬಂಧ ಭಾರತ ಅಸೋಸಿಯೇಶನ್ ಆಫ್ ಸೌತ್ಈಸ್ಟ್ ಏಷ್ಯನ್ ನೇಷನ್ಸ್ (ಏಷಿಯನ್) ಜತೆ ಮಾತುಕತೆ ನಡೆಸಲು ನಿರ್ಧರಿಸಿದೆ.

ಭಾರತದ ಪ್ರಸ್ತಾವನೆಯ ಅನ್ವಯ, 1360 ಕಿಲೋಮೀಟರ್ ಉದ್ದದ ಐಎಂಟಿ ಹೆದ್ದಾರಿಯನ್ನು ಭಾರತದ ಮೊರೆಹ್ನಿಂದ ಥಾಯ್ಲೆಂಡ್ ಮಾಯೆ-ಸಾಟ್ವರೆಗೆ ನಿರ್ಮಿಸಲಾಗುತ್ತದೆ. ಇದನ್ನು ಕಾಂಬೋಡಿಯಾ ಮಾರ್ಗವಾಗಿ ವಿಯೇಟ್ನಾಂವರೆಗೆ ವಿಸ್ತರಿಸಲು ಭಾರತ ಚಿಂತನೆ ನಡೆಸಿದೆ.

ಪ್ರಮುಖ ಅಂಶಗಳು

ಐಎಂಟಿಹೆದ್ದಾರಿಯನ್ನು ವಿಯೇಟ್ನಾಂ ವರೆಗೆ ವಿಸ್ತರಿಸುವುದರಿಂದ ಉಂಟಾಗುವ ಸಂಪರ್ಕದಿಂದ ವಾರ್ಷಿಕವಾಗಿ 70 ಶತಕೋಟಿ ಡಾಲರ್ ವಾರ್ಷಿಕ ಜಿಡಿಪಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಇದರ ಜತೆಗೆ 20 ದಶಲಕ್ಷ ಡಾಲರ್ ಮೌಲ್ಯದ ಸರಾಸಗಿ ಉದ್ಯೋಗ 2025 ಒಳಗಾಗಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದು ಈಶಾನ್ಯ ಭಾರತದ ಬೆಟ್ಟ ಪ್ರದೇಶದಲ್ಲಿ ಬೆಳೆದ ಆಹಾರಧಾನ್ಯಗಳಿಗೆ ಅಗತ್ಯ ಮಾರುಕಟ್ಟೆಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಭಾಗದ ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಯೋಜನೆ ಪೂರಕವಾಗಲಿದೆ.

ಐಎಂಟಿ ಮೋಟಾರು ವಾಹನ ಒಪ್ಪಂದ

ಇದರ ಜತೆಗೆ ಸರ್ಕಾರ ಭಾರತವನ್ನು ಆಗ್ನೇಯ ಏಷ್ಯಾ ದೇಶಗಳ ಜತೆಗೆ ಸಂಪರ್ಕಿಸುವ ನಿಟ್ಟಿನಲ್ಲಿ ಐಎಂಟಿ ಮೋಟಾರು ವಾಹನ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಭಾರತ, ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ ಈಗಾಗಲೇ ಒಪ್ಪಂದ ಮಾತುಕತೆಗಳನ್ನು ನಡೆಸುತ್ತಿದ್ದು, ಐಎಂಟಿ ಎಂವಿಎ ಒಪ್ಪಂದವನ್ನು ಅಂತಿಮಪಡಿಸುವ ಹಂತದಲ್ಲಿವೆ. 2014ರಿಂದ ಮಾತುಕತೆ ಆರಂಭವಾಗಿದ್ದು, ಭೌತಿಕ ರಸ್ತೆ ಮೂಲಸೌಕರ್ಯವನ್ನು ಬಳಸಿಕೊಂಡು ಐಎಂಟಿ ತ್ರಿಪಕ್ಷೀಯ ಹೆದ್ದಾರಿಯನ್ನು ಬಳಸಿಕೊಳ್ಳುವ ಬಗ್ಗೆ ಮಾತುಕತೆಯನ್ನು ಮೂರು ದೇಶಗಳು ನಡೆಸುತ್ತಿವೆ.

ಐಎಂಟಿ ಹೆದ್ದಾರಿ

ಭಾರತ, ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ದೇಶಗಳ ನಡುವಿನ ತ್ರಿಪಕ್ಷೀಯ ಹೆದ್ದಾರಿ ಯೋಜನೆಯಡಿ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಭಾರತದ ಆಕ್ಟ್ ಈಸ್ಟ್ ನೀತಿಗೆ ಅನುಗುಣವಾಗಿ ಇದು ನಿರ್ಮಾಣವಾಗುತ್ತಿದೆ. ಇದು ಭಾರತದ ಮೊರೆಹ್ ನಗರದಿಂದ ಮ್ಯಾನ್ಮಾರ್ ಮಾರ್ಗವಾಗಿ ಥಾಯ್ಲೆಂಡ್ ಮಾರೆಸಾಟ್ಗೆ ಸಂಪರ್ಕ ಕಲ್ಪಿಸಲಿದೆ. ಹೆದ್ದಾರಿಯು ಏಷಿಯನ್- ಭಾರತ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಾಧ್ಯತೆ ಇದ್ದು, ಮುಕ್ತ ವ್ಯಾಪಾರ ಕೇತ್ರವಾಗಿ ಇದು ಪರಿವರ್ತನೆಯಾಗಲಿದೆ. ಇದರ ಜತೆಗೆ ಆಗ್ನೇಯ ಏಷ್ಯಾದ ಇತರ ದೇಶಗಳ ಜತೆಗೆ ಕೂಡಾ ಇದು ಸಂಬಂಧ ಸುಧಾರಿಸಲು ನೆರವಾಗಲಿದೆ.

Comment