IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಶ್ರೀಲಂಕಾದ ಹಂಬಂತೋಟ ಬಂದರು 99 ವರ್ಷಕ್ಕೆ ಚೀನಾ ಹಸ್ತಾಂತರ

ಶ್ರೀಲಂಕಾದ ಹಂಬಂತೋಟ ಬಂದರು 99 ವರ್ಷಕ್ಕೆ ಚೀನಾ ಹಸ್ತಾಂತರ

ಶ್ರೀಲಂಕಾದ ಹಂಬಂತೋಟ ಬಂದರನ್ನು ದೇಶ 99 ವರ್ಷಗಳ ಅವಧಿಗೆ ಲೀಸ್ ಆಧಾರದಲ್ಲಿ ಚೀನಾಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ದಕ್ಷಿಣದ ಆಯಕಟ್ಟಿನ ಬಂದರು ಇದಾಗಿದೆ. ಚೀನಾದ ಮರ್ಚೆಂಟ್ಸ್ ಪೋರ್ಟ್ ಹೋಲ್ಡಿಂಗ್ಸ್ ಕಂಪನಿ (ಸಿಎಂಪೋರ್ಟ್) ಮತ್ತು ಶ್ರೀಲಂಕಾದ ಬಂದರು ಪ್ರಾಧಿಕಾರ ಜಂಟಿಯಾಗಿ ಇದನ್ನು ನಿರ್ವಹಿಸಲಿದ್ದು, ಇದರ ಸುತ್ತ ಇರುವ ಹೂಡಿಕೆ ವಲಯವನ್ನು ಕೂಡಾ ಎರಡು ಸಂಸ್ಥೆಗಳು ಜಂಟಿಯಾಗಿ ನಿರ್ವಹಿಸುತ್ತವೆ.

ಹಂಬಂತೋಟ ಬಂದರು ಆಯಕಟ್ಟಿನ ಸ್ಥಳದಲ್ಲಿದ್ದು, ಹಿಂದೂ ಮಹಾಸಾಗರದ ಪ್ರಮುಖ ಇಂಧನ ಪೂರೈಕೆ ಲೈನ್ ಮಧ್ಯಭಾಗದಲ್ಲಿದೆ. ಇದು ಮಧ್ಯಪ್ರಾಚ್ಯ ಹಾಗೂ ಪೂರ್ವ ಏಷ್ಯಾ ದೇಶಗಳ ನಡುವೆ ಸಂಪರ್ಕ ಸಾಧಿಸುತ್ತದೆ. ಶ್ರೀಲಂಕಾ ಸರ್ಕಾರ ದೊಡ್ಡ ಪ್ರಮಾಣದ ಆಳ ಸಮುದ್ರ ಬಂದರನ್ನು ಮತ್ತು ವಿಮಾನ ನಿಲ್ದಾಣವನ್ನುನಿರ್ಮಿಸಲು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಇದು ಹೆಚ್ಚಿನ ಮಹತ್ವ ಪಡೆದಿದ್ದು, ಇದಕ್ಕೆ ಚೀನಾ ಸರ್ಕಾರ ಸಾಲ ನೀಡಿದೆ.

ಹಿನ್ನೆಲೆ

ಶ್ರೀಲಂಕಾ ಸರ್ಕಾರ 2017 ಜುಲೈನಲ್ಲಿ ಚೀನಾ ಜತೆ ಒಪ್ಪಂದ ಮಾಡಿಕೊಂಡಿದ್ದು, 1.1 ಶತಕೋಟಿ ಡಾಲರ್ ನೆರವು ಪಡೆಯಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಹಂಬಂತೋಟ ಬಂದರಿಇನ ಹಕ್ಕಿನಲ್ಲಿ ಶೇಕಡ 70 ಭಾಗವನ್ನು ಚೀನಾಗೆ ನೀಡಲು ನಿರ್ಧರಿಸಿದೆ. ಲೀಸ್ ಒಪ್ಪಂದದ ಆಧಾರದಲ್ಲಿ 99 ವರ್ಷಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶ್ರೀಲಂಕಾ ಆರಂಭಿಕ ಹಂತದಲ್ಲಿ 300 ದಶಲಕ್ಷ ಡಾಲರ್ ನೆರವು ಪಡೆದಿದೆ. ಹಂಬಂತೋಟ ಬಂದರು 2011ರಲ್ಲಿ ಕಾರ್ಯಾಚರಣೆಗೆ ಮುಕ್ತವಾದ ಬಳಿಕ ಚೀನಾ ನೀಡಿದ ದೊಡ್ಡ ಪ್ರಮಾಣದ ಸಾಲದ ಮೊತ್ತವನ್ನು ಮರುಪಾವತಿ ಮಾಡಲು ಶ್ರೀಲಂಕಾ ವಿಫಲವಾದ ಹಿನ್ನೆಲೆಯಲ್ಲಿ ಮತ್ತು ಬಂದರು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಒಪ್ಪಂದ ಮಾಡಿಕೊಂಡು 1.1 ಶತಕೋಟಿ ಡಾಲರ್ ನೆರವು ಪಡೆಯಲು ಶ್ರೀಲಂಕಾ ನಿರ್ಧರಿಸಿದೆ.

99 ವರ್ಷಗಳ ಲೀಸ್ ಒಪ್ಪಂದವು ಆಯಕಟ್ಟಿನ ಪ್ರದೇಶದ ಹಿತಾಸಕ್ತಿಗಾಗಿ ಚೀನಾ ಜತೆ ಪೈಪೋಟಿ ನಡೆಸುತ್ತಿರುವ ಭಾರತ ಹಾಗೂ ಅಮೆರಿಕದ ಕಳವಳಕ್ಕೆ ಕಾರಣವಾಗಿದೆ. ಹಂಬಂತೋಟದ ಸ್ಥಳೀಯ ನಾಗರಿಕರು ಮಾರಾಟವನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದಿದ್ದು, ದೇಶದ ಆಸ್ತಿಯನ್ನು ವಿದೇಶಿ ಸಂಸ್ಥೆಗಳಿಗೆ ವಹಿಸಿರುವ ಕ್ರಮ ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾಗಿದೆ.

ಬಂದರಿನ ಮಹತ್ವ

ಚೀನಾಗೆ ಹಂಬಂತೋಟ ಬಂದರು ಮಹತ್ವಾಕಾಂಕ್ಷಿ ಒಂದು ಬೆಲ್ಟ್ ಒಂದು ರಸ್ತೆ ಯೋಜನೆಯ ಪ್ರಮುಖ ಅಂಶವಾಗಿದೆ. ಯೋಜನೆಯಡಿ ಹೊಸ ಸಿಲ್ಕ್ ರೂಟ್ ಆರಂಭಿಸಲು ಚೀನಾ ಉದ್ದೇಶಿಸಿದ್ದು, ಚೀನಾ, ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಯೂರೋಪ್ 60 ದೇಶಗಳ ಜತೆ ಹೊಸ ವ್ಯಾಪಾರ ಮಾರ್ಗವನ್ನು ಆರಂಭಿಸುವ ಚಿಂತನೆ ನಡೆಸಿದೆ. ಅದರೆ ಯೋಜನೆಗೆ ಜಾಗತಿಕ ಸಾಗರ ಮಾರ್ಗ ಸೂಪರ್ಪವರ್ ಎನಿಸಿರುವ ಅಮೆರಿಕ ಅಡ್ಡಗಾಲು ಹಾಕಿದ್ದು, ವಿಶ್ವಾದ್ಯಂತ ಬಂದರುಗಳ ಜಾಲವನ್ನು ಅಮೆರಿಕ ನಿಯಂತ್ರಿಸುತ್ತಿರುವುದು ಚೀನಾಗೆ ತಡೆಯಾಗಿ ಪರಿಣಮಿಸಿದೆ. ಇತರ ಇಂಥದ್ದೇ ಬೆಳವಣಿಗೆಗಳು ಪ್ರದೇಶದಲ್ಲಿ ನಡೆಯಯುತ್ತಿದ್ದು, ಪಾಕಿಸ್ತಾನದ ಗ್ವಾದರ್ ಬಂದರನ್ನು ಕೂಡಾ ಚೀನಾ ಪಡೆಯುತ್ತಿದದೆ. ಇದು ಸುಮಾರು 55 ಶತಕೋಟಿ ಡಾಲರ್ ಅಂದಾಜು ವೆಚ್ಚದ ಚೀನಾ- ಪಾಕಿಸ್ತಾನ ಆರ್ಥೀಕ ಕಾರಿಡಾರ್ ಕೇಂದ್ರಬಿಂದು ಎನಿಸಿಕೊಂಡಿದೆ.

ಭಾರತದ ಆತಂಕ

ಭಾರತ ಯೋಜನೆಯನ್ನು ವಿರೋಧಿಸಿದ್ದು, ಚೀನಾದ ಕುತಂತ್ರವು ಭಾರತವನ್ನು ಸುತ್ತುವರಿಯುವುದು ಹಾಗೂ ಭಾರತದ ಸೇನಾ ಹಡಗುಗಳ ಸಂಚಾರವನ್ನು ತಡೆಯುವುದಾಗಿದೆ ಎನ್ನುವುದು ಆತಂಕಕ್ಕೆ ಪ್ರಮುಖ ಕಾರಣ. ಸ್ಟ್ರಿಂಗ್ ಆಫ್ ಪಲ್ರ್ಸ್ ಎನ್ನುವುದು ಭೌಗೋಳಿಕ- ರಾಜಕೀಯ ಸಿದ್ಧಾಂತವಾಗಿದ್ದು, ಹಿಂದೂ ಮಹಾಸಾಗರ ಪ್ರದೇಶದ ಮೇಲೆ ಚೀನಾ ಆಧಿಪತ್ಯ ಸ್ಥಾಪಿಸುವ ಉದ್ದೇಶ ಹೊಂದಿದೆ. ಭಾರತದ ಕಳವಳಕ್ಕೆಪೂರಕವಾಗಿ ಶ್ರೀಲಂಕಾ ಈಗಾಗಲೇ ಯಾವುದೇ ವಿದೇಶಗಳು ಆಯಕಟ್ಟಿನ ಬಂದರನ್ನು ಮಿಲಿಟರಿ ನೆಲೆಯಾಗಿ ಬಳಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

Comment