IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಭಾರತದಲ್ಲಿ ಎಐಐಬಿ ಆಡಳಿತ ಮಂಡಳಿಯ 3ನೇ ವಾರ್ಷಿಕ ಸಭೆ

ಭಾರತದಲ್ಲಿ ಎಐಐಬಿ ಆಡಳಿತ ಮಂಡಳಿಯ 3ನೇ ವಾರ್ಷಿಕ ಸಭೆ

ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಆಡಳಿತ ಮಂಡಳಿಯ ಮೂರನೇ ವಾರ್ಷಿಕ ಸಭೆ ಮಹಾರಾಷ್ಟ್ರದ ಮುಂಬೈನಲ್ಲಿ 2018 ಜೂನ್ ತಿಂಗಳಲ್ಲಿ ನಡೆಯಲಿದೆ.

ಸಂಬಂಧ ಕೇಂದ್ರ ಸರ್ಕಾರ ಮತ್ತು ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ಕಚೇರಿ ಒಪ್ಪಂದಕ್ಕೆ ಸಹಿ ಮಾಡಿವೆ. ಇದರ ಅನ್ವಯ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳುವ ಎಲ್ಲ ಪ್ರಮುಖ ಹಕ್ಕುದಾರರ ಕರ್ತವ್ಯಗಳು ಮತ್ತು ಜವಾಬ್ದಾರಿಯನ್ನು ನಿರ್ಧರಿಸಲಾಗಿದೆ. ವಾರ್ಷಿಕ ಸಭೆಯ ತಿರುಳು, "ಮೂಲಸೌಕರ್ಯಕ್ಕೆ ಹಣಕಾಸು ಕ್ರೋಢೀಕರಣ: ಅನುಶೋಧನೆ ಮತ್ತು ಸಹಭಾಗಿತ್ವ" ಎಂದಾಗಿದೆ.

ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ)

ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಬಹುಪಕ್ಷೀಯ ಹಣಕಾಸು ಸಂಸ್ಥೆಯಾಗಿದ್ದು, ಚೀನಾ ಪ್ರವರ್ತಿತ ಸಂಸ್ಥೆ ಇದಾಗಿದೆ. ಇದರ ಮುಖ್ಯವಾದ ಉದ್ದೇಶವೆಂದರೆ, ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ನೆರವು ನೀಡುವುದು ಹಾಗೂ ಪ್ರಾದೇಶಿಕ ಸಂಪರ್ಕವನ್ನು ಏಷ್ಯಾ ಫೆಸಿಫಿಕ್ಪ್ರದೇಶದ ಯೋಜನೆಗಳಿಗೆ ಒದಗಿಸುವುದು. ಇದರ ಮುಖ್ಯ ಗುರಿಗಳೆಂದರೆ ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು, ಅಗತ್ಯ ಮೂಲ ಸೌಕರ್ಯ ಒದಗಿಸುವುದು ಹಾಗೂ ಪ್ರಾದೇಶಿಕ ಸಹಕಾರ ಮತ್ತು ಪಾಲುದಾರಿಕೆಯನ್ನು ಪ್ರದೇಶದಲ್ಲಿ ಅಭಿವೃದ್ಧಿಪಡಿಸುವುದು.

ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ 2014 ಅಕ್ಟೋಬರ್ನಲ್ಲಿ ಆರಂಭವಾಗಿದ್ದು, 2016 ಜನವರಿಯಲ್ಲಿ ಇದು ಕಾರ್ಯಾಚರಣೆ ಆರಂಭಿಸಿದೆ. ಇದರ ಕೇಂದ್ರ ಕಚೇರಿ ಬೀಜಿಂಗ್ನಲ್ಲಿದೆ. ಇದಕ್ಕೆ 56 ಸದಸ್ಯ ದೇಶಗಳಿವೆ. ಇದನ್ನು ವಿಶ್ವಬ್ಯಾಂಕ್ ಹಾಗೂ ಏಷ್ಯನ್ ಅಭಿವೃದ್ಧಿ ಬ್ಯಾಂಕಿಗೆ ಪೈಪೋಟಿ ನೀಡುವ ಸಂಸ್ಥೆ ಎಂದು ಪರಿಗಣಿಸಲಾಗಿದೆ.

ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ಮೂಲ ಬಂಡವಾಳ 100 ಶತಕೋಟಿ ಡಾಲರ್ ಆಗಿದ್ದು, ಸುಮಾರು 30 ಶತಕೋಟಿ ಡಾಲರ್ಗಳನ್ನು ಚೀನಾ ಹೂಡಿಕೆ ಮಾಡಿದೆ. ಭಾರತ ಕೂಡಾ ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ಸಂಸ್ಥಾಪಕ ಸದಸ್ಯದೇಶವಾಗಿದ್ದು, 2ನೇ ಅತಿದೊಡ್ಡ ಹಕ್ಕುದಾರ ದೇಶವಾಗಿದೆ. ರಷ್ಯಾ ಮೂರನೇ ಸ್ಥಾನದಲ್ಲಿದೆ. ಇದರ ಮತದಾನದ ಪಾಲು ಆಯಾ ದೇಶಗಳ ಆರ್ಥಿಕತೆಯನ್ನು ಆಧರಿಸಿದೆಯೇ ವಿನಃ ಬ್ಯಾಂಕಿನ ಅಧಿಕೃತ ಬಂಡವಾಳಕ್ಕೆ ಆಯಾ ದೇಶ ನೀಡಿರುವ ಕೊಡುಗೆಯನ್ನು ಅವಲಂಬಿಸಿಲ್ಲ.

Comment