IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಮೊಬೈಲ್ ಇಂಟರ್‍ನೆಟ್ ವೇಗ: ಭಾರತಕ್ಕೆ 109ನೇ ಸ್ಥಾನ

ಮೊಬೈಲ್ ಇಂಟರ್‍ನೆಟ್ ವೇಗ: ಭಾರತಕ್ಕೆ 109ನೇ ಸ್ಥಾನ

ಮೊಬೈಲ್ ಇಂಟರ್ನೆಟ್ ವೇಗದ ಸೂಚ್ಯಂಕದಲ್ಲಿ ಭಾರತ ವಿಶ್ವದ 122 ದೇಶಗಳ ಪೈಕಿ 109ನೇ ಸ್ಥಾನ ಪಡೆದಿದೆ. ಬ್ರಾಡ್ಬ್ಯಾಂಡ್ ಸೌಲಭ್ಯ ಕ್ಷೇತ್ರದಲ್ಲಿ 133 ದೇಶಗಳ ಪೈಕಿ ಭಾರತ 77ನೇ ಸ್ಥಾನದಲ್ಲಿದೆ. 2017 ನವೆಂಬರ್ನಲ್ಲಿ ನಡೆಸಿದ ಸ್ಪೀಡ್ಟೆಸ್ಟ್ ಗ್ಲೋಬಲ್ ಇಂಡೆಕ್ಸ್ (ಎಸ್ಜಿಐ)ನಲ್ಲಿ ವಿಶ್ವದ ಎಲ್ಲ ಪ್ರಮುಖ ದೇಶಗಳ ಇಂಟರ್ನೆಟ್ ವೇಗವನ್ನು ಅಳೆಯಲಾಗಿದೆ.

ಸೂಚ್ಯಂಕವನ್ನು ಜನಪ್ರಿಯ ಇಂಟರ್ನೆಟ್ ವೇಗ ಪರೀಕ್ಷಾ ಸೇವಾ ಪೂರೈಕೆದಾರ ಸಂಸ್ಥೆಯಾದ ಓಕ್ಲಾ ಬಿಡುಗಡೆ ಮಾಡಿದೆ. ಸರಾಸರಿ ಇಂಟರ್ನೆಟ್ ವೇಗವನ್ನು ವಿವಿಧ ದೇಶಗಳಲ್ಲಿ ಅಧ್ಯಯನ ಮಾಡಿ ಸೂಚ್ಯಂಕ ಬಿಡುಗಡೆ ಮಾಡಿದೆ. ಮೊಬೈಲ್ ಹಾಗೂ ಗೃಹಬಳಕೆಯ ಬ್ರಾಡ್ಬ್ಯಾಂಡ್ಗಳಿಗೆ ಪ್ರತ್ಯೇಕ ಅಧ್ಯಯನ ನಡೆಸಿ, ಇಂಟರ್ನೆಟ್ ಜಾಲದ ವಾಸ್ತವ ಸ್ಥಿತಿಗತಿಯನ್ನು ಅರಿಯುವ ಪ್ರಯತ್ನ ಮಾಡಿದೆ. ಇಂಟರ್ನೆಟ್ ಬಳಕೆದಾರರು ಯಾವುದನ್ನು ಹೆಚ್ಚು ಅವಲಂಬಿಸಿದ್ದಾರೆ ಎನ್ನುವುದನ್ನೂ ಸಂಸ್ಥೆ ಅಧ್ಯಯನ ಮಾಡಿದೆ. ಮೊಬೈಲ್ ನೆಟ್ವರ್ಕ್ ಮತ್ತು ಬ್ರಾಡ್ಬ್ರಾಂಡ್ ವೇಗವನ್ನು ಪ್ರತಿ ಬಳಕೆದಾರರ ವೇಗ ಪರೀಕ್ಷೆ ಮಾಡುವ ಮೂಲಕ ಅಳೆಯಲಾಗಿದೆ. ಇದಕ್ಕಾಗಿ ಓಕ್ಲಾ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ನಲ್ಲಿ ಪ್ರತಿ ದೇಶಗಳಲ್ಲಿ ಅಧ್ಯಯನವನ್ನು ಸಂಸ್ಥೆ ಕೈಗೊಂಡಿದೆ.

ಪ್ರಮುಖ ಅಂಶಗಳು

ಮೊಬೈಲ್ ಇಂಟರ್ನೆಟ್ ವೇಗ

ಅಗ್ರ 5 ವೇಗದ ಮೊಬೈಲ್ ನೆಟ್ವರ್ಕ್ ಹೊಂದಿದ ದೇಶಗಳು: ನಾರ್ವೆ (ಸರಾಸರಿ ವೇಗ 62.66 ಎಂಬಿಪಿಎಚ್), ನೆದರ್ಲೆಂಡ್ಸ್ (53.01 ಎಂಬಿಪಿಎಚ್), ಐಸ್ಲೆಂಡ್ (52.78 ಎಂಬಿಪಿಎಸ್), ಸಿಂಗಾಪುರ (51.50 ಎಂಬಿಪಿಎಸ್) ಮತ್ತು ಮಾಲ್ಟಾ (50.56 ಎಂಬಿಪಿಎಸ್).

ಭಾರತದ ನೆರೆ ದೇಶಗಳು: ಚೀನಾ 31.22 ಎಂಬಿಪಿಎಸ್ ವೇಗದೊಂದಿಗೆ 31ನೇ ಸ್ಥಾನದಲ್ಲಿದೆ. 13.08 ಎಂಬಿಪಿಎಸ್ ವೇಗದ ಮೊಬೈಲ್ ಇಂಟರ್ನೆಟ್ ಹೊಂದಿರುವ ಪಾಕಿಸ್ತಾನ 89ನೇ ಸ್ಥಾನದಲ್ಲಿದ್ದರೆ, ಮ್ಯಾನ್ಮಾರ್ 94ನೇ ಸ್ಥಾನದಲ್ಲಿದ್ದು, 11.72 ಎಂಬಿಪಿಎಸ್ ವೇಗ ಹೊಂದಿದೆ. ನೇಪಾಳ 99ನೇ ಸ್ಥಾನಲ್ಲಿದ್ದು, ಇಲ್ಲಿನ ಇಂಟರ್ನೆಟ್ ವೇಗ 10.97 ಎಂಬಿಪಿಎಸ್ ಆಗಿದೆ. ಶ್ರೀಲಂಕಾ 107ನೇ ಸ್ಥಾನದಲ್ಲಿದ್ದು, ಇಲ್ಲಿ ಮೊಬೈಲ್ ಇಂಟರ್ನೆಟ್ ಸರಾಸರಿ ವಏಗ 9.32 ಎಂಬಿಪಿಎಸ್ ಆಗಿದೆ.

ಭಾರತ ಸಂಬಂಧಿ ವಿವರಗಳು: ಮೊಬೈಲ್ ಡಾಟಾ ನೆಟ್ವರ್ಕ್ ಸರಾಸರಿ ವೇಗ ಭಾಗದಲ್ಲಿ8.80 ಎಂಬಿಪಿಎಸ್ ಆಗಿದ್ದು, ಇದು 2017 ಅಕ್ಟೋಬರ್ನಲ್ಲಿ ಇದ್ದ 8.83 ಎಂಬಿಪಿಎಸ್ಗಿಂತ ತುಸು ಕಡಿಮೆ. ಆಗ ಭಾರತ 108ನೇ ಸ್ಥಾನದಲ್ಲಿತ್ತು. ಆದರೆ ಇದು 2017 ಜನವರಿಯಲ್ಲಿ ಇದ್ದ ವೇಗವಾದ 7.65ಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ಹೆಚ್ಚಳ ಕಂಡಿದೆ.

ಗೃಹ ಬ್ರಾಡ್ಬ್ಯಾಂಡ್ ಸ್ಪೀಡ್

ಅಗ್ರ 5 ಗೃಹ ಬ್ರಾಡ್ಬ್ಯಾಂಡ್ ದೇಶಗಳು: ಸಿಂಗಾಪುರ (153.85 ಎಂಬಿಪಿಎಸ್), ಐಎಸ್ಲೆಂಡ್ (147.51 ಎಂಬಿಪಿಎಸ್), ಹಾಂಕಾಂಗ್ (133.94 ಎಂಬಿಪಿಎಸ್) ದಕ್ಷಿಣ ಕೊರಿಯಾ (127.45 ಎಂಬಿಪಿಎಸ್) ಮತ್ತು ರೊಮಾನಿಯಾ (104.46 ಎಂಬಿಪಿಎಸ್).

ಭಾರತದ ನೆರೆ ದೇಶಗಳು: ಚೀನಾ 23ನೇ ರ್ಯಾಂಕಿಂಗ್ ಪಡೆದಿದ್ದು ಇಲ್ಲಿನ ಬ್ರಾಡ್ಬ್ಯಾಂಡ್ ವೇಗ 61.24 ಎಂಬಿಪಿಎಸ್ ಆಗಿದೆ. 19.26 ಎಂಬಿಪಿಎಸ್ ವೇಗ ಹೊಂದಿದ ಶ್ರೀಲಂಕಾ 71ನೇ ಸ್ಥಾನದಲ್ಲಿದ್ದು, ಭಾರತಕ್ಕಿಂತ ಮುಂದಿದೆ. ಆದರೆ ಬಾಂಗ್ಲಾದೇಶ 85ನೇ ಸ್ಥಾನದಲ್ಲಿದ್ದು 16.14 ಎಂಬಿಪಿಎಸ್ ವೇಗ ಹೊಂದಿದೆ. 92ನೇ ಸ್ಥಾನದಲ್ಲಿರುವ ನೇಪಾಳ ಹಾಗೂ 126ನೇ ಸ್ಥಾನದಲ್ಲಿರುವ ಪಾಕಿಸ್ತಾನ ಕ್ರಮವಾಗಿ 14.05 ಎಂಬಿಪಿಎಸ್ ಹಾಗೂ 6.13 ಎಂಬಿಪಿಎಸ್ ವೇಗ ಹೊಂದಿದ್ದು, ಭಾರತಕ್ಕಿಂತ ತೀರಾ ಹಿಂದಿವೆ.

Comment