IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ದೆಹಲಿಯಲ್ಲಿ 7ನೇ ಅಂತರರಾಷ್ಟ್ರೀಯ ಅಂತರ್ಜಲ ಸಮ್ಮೇಳನ

ದೆಹಲಿಯಲ್ಲಿ 7ನೇ ಅಂತರರಾಷ್ಟ್ರೀಯ ಅಂತರ್ಜಲ ಸಮ್ಮೇಳನ

7ನೇ ಅಂತರರಾಷ್ಟ್ರೀಯ ಅಂತರ್ಜಲ ಸಮ್ಮೇಳನ (ಐಜಿಡಬ್ಲ್ಯುಸಿ-2017) ನವದೆಹಲಿಯಲ್ಲಿ 2017 ಡಿಸೆಂಬರ್ 11ರಿಂದ 13ರವರೆಗೆ ನಡೆಯಿತು. ಬಾರಿಯ ಅಂತರ್ಜಲ ಸಮ್ಮೇಳನದ ಮುಖ್ಯ ತಿರುಳು, "ಅಂತರ್ಜಲ ದೃಷ್ಟಕೋನ- 2030- ನೀರಿನ ಭದ್ರತೆ, ಸವಾಲುಗಳು ಮತ್ತು ಹವಾಮಾನ ಬದಲಾವಣೆ ಸ್ವೀಕರಿಸುವಿಕೆ" ಎಂದಾಗಿರುತ್ತದೆ.

ಪ್ರಮುಖ ಅಂಶಗಳು

ಸಮ್ಮೇಳನವನ್ನು ರೂರ್ಕೆಲಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ಹಾಗೂ ಕೇಂದ್ರೀಯ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯುಬಿ) ಸಂಯುಕ್ತವಾಗಿ ಆಯೋಜಿಸಿವೆ. ಕೇಂದ್ರದ ಜಲ ಸಂಪನ್ಮೂಲ ಮತ್ತು ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯದಡಿ ಇದು ಕಾರ್ಯ ನಿರ್ವಹಿಸುತ್ತದೆ. 15 ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು, 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮತ್ತು 32 ಕೀ ನೋಟ್ ಪ್ರಬಂಧಗಳನ್ನು ಇದರಲ್ಲಿ ಮಂಡಿಸಲಾಗುತ್ತಿದೆ.

ಸಮ್ಮೇಳನವು ಪ್ರಮುಖವಾಗಿ ದೇಶದಲ್ಲಿ ಅಂತರ್ಜಲ ನಿರ್ವಹಣೆಯ ಬಗೆಗಿನ ಸ್ಥಿತಿಗತಿ ಹಾಗೂ ಸವಾಲುಗಳ ಬಗ್ಗೆ ಗಮನ ಹರಿಸುತ್ತದೆ. ನೀರಿನ ಬಳಕೆ ಹಾಗೂ ಹವಾಮಾನ ವೈಪರೀತ್ಯಗಳ ಬಗ್ಗೆ ಸಮ್ಮೇಳನ ಚರ್ಚೆ ನಡೆಸಲಿದೆ. ಭಾರತದಲ್ಲಿ ಅಂತರ್ಜಲ ಸ್ಥಿತಿಗತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ವಿಶೇಷ ಮಹತ್ವವಿದೆ.

ಹತ್ತು ಪ್ರಮುಖ ಅಂಶಗಸಳ ಜ್ವಲಂತ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ವ್ಯಾಪಕ ಚರ್ಚೆ ಹಾಗೂ ಸಂವಾದಗಳು ನಡೆದವು. ಇದು ವಲಯವಾರು ಸಂಬಂಧಿತ ಜಲಸಂಪನ್ಮೂಲಗಳನ್ನು ಸೂಕ್ತ ನೀತಿ ನಿಯಮಾವಳಿಗಳೊಂದಿಎ ಹೊಂದಿಸುವ ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಗುರಿ ಹೊಂದಿದೆ.

ಭಾರತದಲ್ಲಿ ಅಂತರ್ಜಲ ಮಟ್ಟ ಕುಸಿತ

ಕಳೆದ ಕೆಲ ದಶಕಗಳಲ್ಲಿ ಭಾರತದಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಅಂತರ್ಜಲ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಪ್ರಸ್ತುತ ಗ್ರಾಮೀಣ ಮನೆಬಳಕೆಯ ಅಗತ್ಯತೆಯ ಶೇಕಡ 80ನ್ನು ಹಾಗೂ ನೀರಾವರಿ ಅಗತ್ಯತೆಯ ಶೇಕಡ 65ನ್ನು ಅಂತರ್ಜಲ ಮೂಲಕ ನಿರ್ವಹಿಸಲಾಗುತ್ತಿದೆ. ಶೇಕಡ 50ರಷ್ಟು ಕೈಗಾರಿಕಾ ಹಾಗೂ ನಗರ ನೀರಿನ ಅಗತ್ಯತೆಗಳನ್ನು ಅಮೂಲ್ಯ ಅಂತರ್ಜಲ ಸಂಪನ್ಮೂಲಗಳಿಂದ ಬಳಸಿಕೊಳ್ಳಲಾಗುತ್ತಿದೆ.

ಅಂತರ್ಜಲದ ಅಧಿಕ ಬಳಸುವಿಕೆಯಿಂದಾಗಿ ಕೃಷಿ ಚಟುವಟಿಕೆಗೆ ಅಪಾಯ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಪಂಜಾಬ್, ರಾಜಸ್ಥಾನ ಮತ್ತು ಕೇಂದ್ರ ಭಾರತದ ಬುಂಡೇಲ್ಖಂಡ ಪ್ರದೇಶಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಇದು ಭವಿಷ್ಯದಲ್ಲಿ ದೇಶದ ಆಹಾರ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಹವಾಮಾನ ಬದಲಾವಣೆಯು ಅಂತರ್ಜಲ ಭರ್ತಿ ವ್ಯವಸ್ಥೆಯ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆ ಬೀಳುವಲ್ಲಿ ಗಣನೀಯ ಪ್ರಮಾಣದ ವೈಪರೀತ್ಯಗಳು ಸಂಭವಿಸುವುದರಿಂದ ಅಂತರ್ಜಲ ಪೂರಣ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಲಿದೆ. ಅಂತರ್ಜಲದ ಅತಿಯಾದ ಬಳಕೆ ಕೂಡಾ ಅಂತರ್ಜಲ ಗುಣಮಟ್ಟದ ಮೇಲೂ ಹಲವು ಪ್ರದೇಶಗಳಲ್ಲಿ ಪರಿಣಾಮ ಬೀರಲಿದೆ. ವಿಷಕಾರಿ ಅಂಶಗಳು ಅಂತರ್ಜಲದಲ್ಲಿ ಸೇರುವ ಅಪಾಯವಿದೆ.

Comment