IAS Prelims and Mains New Batch starts from September 20th 2018 & KAS prelims & Mains New batch starts from 27th September 2018 - For registration Contact: 9686664983/9845512052.

ಬಿಹಾರ ಸರ್ಕಾರದಿಂದ ಸುರಕ್ಷಿತ ನಗರ ಕಣ್ಗಾವಲು ಯೋಜನೆ

ಬಿಹಾರ ಸರ್ಕಾರವು ಹೊಸದಾಗಿ ಸುರಕ್ಷಿತ ನಗರ ನಿಗಾ ಯೋಜನೆಯನ್ನು ಜಾರಿಗೆ ತಂದಿದ್ದು, ಮಹಿಳೆಯರ ವಿರುದ್ಧದ ಅಪರಾಧವನ್ನು ತಡೆಯುವುದು ಇದರ ಮುಖ್ಯ ಉದ್ದೇಶ. ಇದರ ಅನ್ವಯ ಎಲ್ಲ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕ್ಲೋಸ್ಡ್ ಸಕ್ರ್ಯೂಟ್ ಟೆಲಿವಿಷನ್ ಕ್ಯಾಮೆರಾಗಳನ್ನು ಅಳವಡಿಸಿ, ಇದರ ಮೂಲಕ ಕಣ್ಗಾವಲು ಒದಗಿಸಲಾಗುತ್ತದೆ. ಮೂಲಕ ರಾಜ್ಯಾದ್ಯಂತ ಸಂಭವಿಸುವ ಒಟ್ಟಾರೆ ಅಪರಾಧ ಪ್ರಮಾಣವನ್ನು ತಡೆಯುವ ಉದ್ದೇಶವಿದೆ.

ಸುರಕ್ಷಾ ನಗರ ಕಣ್ಗಾವಲು ಯೋಜನೆ

ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತದೆ. ಯೋಜನೆ ಮೊದಲಿಗೆ ಪಟ್ನಾ ನಗರದಿಂದ ಆರಂಭವಾಗಲಿದೆ. ಇದನ್ನು ಮುಖ್ಯವಾಗಿ ಮಹಿಳೆಯರ ವಿರುದ್ಧ ನಡೆಯುವ ಚುಡಾಯಿಸುವಿಕೆ, ಕಿರುಕುಳ, ಕಣ್ಸನ್ನೆ, ಲೈಂಗಿಕ ಕಿರುಕುಳ, ಸರಗಳ್ಳತನದಂಥ ಕೃತ್ಯಗಳು ರಸ್ತೆ ಬದಿಯಲ್ಲಿ ನಡೆಯದಂತೆ ಸುರಕ್ಷೆ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಇದು ಕಿಡಿಗೇಡಿಗಳ ಮೇಲೆ ನಿಗಾ ಇಡಲು ಕೂಡಾ ಪೊಲೀಸರಿಗೆ ಅನುವು ಮಾಡಿಕೊಡಲಿದೆ.

ಯೋಜನೆಯಡಿ ಎಲ್ಲ ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆಯಡಿ ತರಲಾಗುತ್ತದೆ. ಇದನ್ನು ಅಪರಾಧ ನಿಯಂತ್ರಣ ಸಾಧನವಾಗಿ ಮತ್ತು ಸಂಚಾರ ನಿರ್ವಹಣೆ ಸಾಧನವಾಗಿ ಬಳಸಿಕೊಳ್ಳಲಾಗುತ್ತದೆ. ಕಣ್ಗಾವಲು ಯೋಜನೆಗೆ ಬಿಹಾರದ ಗೃಹ ಸಚಿವಾಲಯ ನೋಡಲ್ ಏಜೆನ್ಸಿಯಾಗಿದೆ.

ಯೋಜನೆಯಡಿ ಸಿಸಿಟಿವಿ ಕ್ಯಾಮೆರಾ ಜಾಲವನ್ನು ನಿಯಂತ್ರಣ ಕೊಠಡಿಗೆ ಸಂಪರ್ಕಿಸಲಾಗುತ್ತದೆ. ಇಲ್ಲಿ ಪೊಲೀಸರು ಇದರ ಮೂಲಕ ಚಲನ ವಲನಗಳನ್ನು ದಿನದ 24 ಗಂಟೆಯೂ ವೀಕ್ಷಿಸಲಿದ್ದಾರೆ. ನಿಯಂತ್ರಣ ಕೊಠಡಿಯ ಸಿಬ್ಬಂದಿ ಕ್ಷೇತ್ರದಲ್ಲಿರುವ ಅಧಿಕಾರಿಗಳು ಮತ್ತು ಪೊಲೀಸ್ ಠಾಣೆಯ ಸಿಬ್ಬಂದಿಗೆ ಬಗ್ಗೆ ಅಗತ್ಯ ಮಾಹಿತಿಗಳನ್ನು ಒದಗಿಸಿ ಸಮನ್ವಯ ಸಾಧಿಸಲಿದ್ದಾರೆ. ಅವರ ಕ್ಷೇತ್ರದಲ್ಲಾಗುವ ಕೃತ್ಯಗಳ ಬಗ್ಗೆ ತಕ್ಷಣದ ಮಾಹಿತಿಯನ್ನು ಒದಗಿಸಲಿದ್ದಾರೆ.

Comment